ಮಡಿಕೇರಿ, ನ. ೪: ಪುತ್ರಿಯ ನಿಶ್ಚಿತಾರ್ಥದ ಸಂಭ್ರಮದ ನಿರೀಕ್ಷೆ ಯಲ್ಲಿದ್ದ ತಂದೆ ಹೃದಯಾಘಾತ ಕ್ಕೊಳಗಾಗಿ ಮೃತಪಟ್ಟ ದಾರುಣ ಘಟನೆಯೊಂದು ನಡೆದಿದೆ. ಮೂಲತಃ ವೀರಾಜಪೇಟೆ ಚಿಕ್ಕಪೇಟೆ ಬೋಯಿ ಕೇರಿಯ ನಿವಾಸಿ ಅಮ್ಮುಣಿಚಂಡ ರವಿ ಮೊಣ್ಣಪ್ಪ (೬೬) ಅವರು ತಾ. ೪ ರಂದು ನಿಧನರಾಗಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿದ್ದ ಇವರ ಪುತ್ರಿಯ ನಿಶ್ಚಿತಾರ್ಥ ತಾ. ೫ ರಂದು (ಇಂದು) ನಡೆಯಬೇಕಿತ್ತು. ಇದಕ್ಕಾಗಿ ಆಗಮಿಸಿದ್ದ ಇವರು ನಿನ್ನೆ ರಾತ್ರಿ ಕುಟ್ಟದ ಸಂಬAಧಿಕರ ನಿವಾಸಕ್ಕೆ ತೆರಳಿದ್ದರು. ತಾ. ೪ ರ ಬೆಳಗ್ಗಿನ ಜಾವ ಇವರು ಹೃದಯಾಘಾತದಿಂದ ಅಸ್ವಸ್ಥತೆಗೆ ಒಳಗಾಗಿದ್ದು, ಗೋಣಿಕೊಪ್ಪಲು ಲೋಪಾಮುದ್ರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.