ವೀರಾಜಪೇಟೆ, ನ. ೩ : ಲಭಿಸಿದ ಪದವಿಯನ್ನು ಗುರುತಿಸಿ ಸನ್ಮಾನಿಸುವುದರಿಂದ ಸಿಗುವ ಗೌರವದಿಂದ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಹೇಳಿದರು.
ಅಮ್ಮತ್ತಿ ಕಾವಾಡಿ ಮಾಚಿಮಂಡ ಐನ್ ಮನೆಯಲ್ಲಿ ಗುರುಕಾರಣರಿಗೆ ಮೀದಿ ಇಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಕೊಡವ ಜನಾಂಗದ ಪದ್ಧತಿ ಪರಂಪರೆ, ಆಚಾರ ವಿಚಾರ ಪ್ರಪಂಚದ ಯಾವ ಮೂಲೆಯಲ್ಲೂ ಕಾಣ ಸಿಗುವುದಿಲ್ಲ. ಬೇರೆ ಜನಾಂಗದಲ್ಲಿ ಇರುವ ರೀತಿಯಲ್ಲಿ ನಮ್ಮ ಜನಾಂಗದಲ್ಲಿ ಮಠ ಮಾನ್ಯ ಅಂತಹ ಯಾವುದೇ ವ್ಯವಸ್ಥೆಗಳಿಲ್ಲ. ಸ್ವಪ್ರಯತ್ನದಿಂದ ಮಾತ್ರ ನಾವು ಮುಂದೆ ಬರಬೇಕಾಗಿದೆ. ಕ್ರೀಡೆ, ಸೈನ್ಯ, ರಾಜಕೀಯ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕೊಡವ ಜನಾಂಗ ಮುಂದಿದ್ದು , ಮುಂದುವರೆಸಿಕೊAಡು ಹೋಗಬೇಕು. ವರ್ಷಕ್ಕೊಮ್ಮೆ ನಮ್ಮನ್ನಗಲಿದ ಗುರು ಹಿರಿಯರಿಗೆ ಮೀದಿ ಇಡುವುದರ ಮೂಲಕ ಅವರ ಸ್ಮರಿಸುವುದು ಪ್ರತಿಯೊಬ್ಬ ಕೊಡವರ ಕರ್ತವ್ಯವಾಗಿದೆ. ಅವರ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ ಎಂದು ಹೇಳಿದರು.
ಈ ಸಂದÀರ್ಭ ಹಾಂಕಾAಗ್‌ನಲ್ಲಿ ಆರ್ಕಿಟೆಕ್ಚರ್ ಇಂಜಿನಿಯರ್ ಆಗಿರುವ ಮೂವೇರÀ ಚೆರಿ ಅಣ್ಣಯ್ಯ, ದೆಹಲಿ ಕೊಡವ ಸಮಾಜ ಅಧ್ಯಕ್ಷ ಮಾಚಿಮಂಡ ಕಾರ್ಯಪ್ಪ, ಯುನೈಟೆಡ್ ನೇಷನ್ ವರ್ಲ್ಡ್ ಬ್ಯಾಂಕ್‌ನ ಅಧಿಕಾರಿ ಮಾಚಿಮಂಡ ದೇವಯ್ಯ, ಸೇನಾಧಿಕಾರಿ ಕರ್ನಲ್ ಮಾಚಿಮಂಡ ವಿವಿನ್ ಮುತ್ತಪ್ಪ, ಮ್ಯೆಸೂರು ವಿಶ್ವವಿದ್ಯಾಲಯ ಸೆನೆಟ್ ಸದಸ್ಯ ಮಾಚಿಮಂಡ ಗಪ್ಪಣ, ಬಿಜೆಪಿ ಮಹಿಳಾ ಮೋರ್ಚಾ ಜಂಟಿ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆ ಮಾಚಿಮಂಡ ಪುಷ್ಪಾ ವಿಠಲ್ ಅವರುಗಳನ್ನು ಸನ್ಮಾನಿಸಲಾಯಿತು. ಮಾಚಿಮಂಡ ವಸಂತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸುವಿನ್ ಗಣಪತಿ ಕಾರ್ಯಕ್ರಮ ನಿರ್ವಹಿಸಿದರು.