ಮಡಿಕೇರಿ, ನ. ೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನಡೆಯಿತು.

‘ಕರ್ನಾಟಕ ಹಾಗೂ ಕೊಡಗಿನ ಬಗ್ಗೆ’ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.

ಲಿಖಿತ ರಸಪ್ರಶ್ನೆಯ ವಿಭಾಗದಲ್ಲಿ ಉಮಗೌರಿ ಎಸ್. ಪ್ರಸಾದ್ (ಪ್ರಥಮ), ಗೀತಾ ಸಂಪತ್ ಕುಮಾರ್ (ದ್ವಿತೀಯ), ಸೈಮನ್ ಎಸ್. ನಿರುತ್ ಎಸ್.ಎನ್. (ತೃತೀಯ) ಬಹುಮಾನ ಪಡೆದರು.

ಗುಂಪು ರಸಪ್ರಶ್ನೆ ವಿಭಾಗದಲ್ಲಿ ಉಮಗೌರಿ ಎಸ್. ಪ್ರಸಾದ್ ಮತ್ತು ಗೀತಾ ಸಂಪತ್ ಕುಮಾರ್ (ಪ್ರಥಮ), ದೀಕ್ಷಾ ಜಿ.ಬಿ. ಮತ್ತು ಲಕ್ಷö್ಯ ಎಂ.ಎನ್. (ದ್ವಿತೀಯ), ಪ್ರಾಪ್ತಿ ಮಾದಪ್ಪ .ಬಿ ಮತ್ತು ಸ್ನೇಹ ವಿ.ಬಿ. (ತೃತೀಯ) ಬಹುಮಾನ ಗಳಿಸಿಕೊಂಡರು.

ಕರ್ನಾಟಕ ರಾಜ್ಯೋತ್ಸವ-ಮಹತ್ವ ಮತ್ತು ಪ್ರಸ್ತುತತೆ ಎಂಬ ವಿಷಯದ ಭಾಷಣ ಸ್ಪರ್ಧೆಯಲ್ಲಿ ಸಂತ ಜೋಸೆಫರ ಶಾಲೆಯ ಹೇಮಶ್ರೀ ಪ್ರಥಮ ಹಾಗೂ ಕೊಡಗು ವಿದ್ಯಾಲಯದ ವೈಲವಿ ದ್ವಿತೀಯ ಸ್ಥಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಅಕಾಡೆಮಿ ನಿರ್ದೇಶಕರಾದ ಮಾಚಿಮಾಡ ಜಾನಕಿ ಮಾಚಯ್ಯ, ತೇಲಪಂಡ ಕವನ್ ಕಾರ್ಯಪ್ಪ, ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ ಹಾಗೂ ರಿಜಿಸ್ಟಾçರ್ ಅಜ್ಜಿಕುಟ್ಟಿರ ಸಿ. ಗಿರೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.