ಸೋಮವಾರಪೇಟೆ, ನ. ೩: ಕಳೆದ ಒಂದು ವಾರಗಳಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜನೆ ಗೊಂಡಿದ್ದ ಸೋಮವಾರಪೇಟೆ ಪುಷ್ಪಗಿರಿ ಜೇಸೀ ಸಪ್ತಾಹ-೨೦೨೧ರ ಸಮಾರೋಪ ಸಮಾರಂಭ ಅಧ್ಯಕ್ಷೆ ಮಾಯಾ ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಒಂದು ವಾರಗಳ ಕಾಲ ಹಿರಿಯರು-ಕಿರಿಯರಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಭ್ರಮದಿAದ ಜೇಸೀ ಸಪ್ತಾಹ ನಡೆಯಿತು.

ಸಪ್ತಾಹದಲ್ಲಿ ಯುಕೆಜಿ ಮತ್ತು ೧ ರಿಂದ ೪ನೇ ತರಗತಿಯ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ, ೪ ರಿಂದ ೭, ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳು, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಚೆಸ್, ಜೇಸಿರೇಟ್ಸ್ ಪ್ರಾಯೋಜಕತ್ವದಲ್ಲಿ ಮಹಿಳೆಯರಿಗೆ ಅದೃಷ್ಟದ ಕಣ್ಮಣಿ ಸ್ಪರ್ಧೆ, ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಹಾಗೂ ಬರವಣಿಗೆ ಸ್ಪರ್ಧೆ, ಗ್ರೂಪ್ ಡ್ಯಾನ್ಸ್, ಮಹಿಳೆಯರಿಗೆ ಹೇರ್ ಸ್ಟೆöÊಲ್ ಸ್ಪರ್ಧೆ, ಸಾರ್ವಜನಿಕ ವಿಭಾಗದಲ್ಲಿ ಸೈಕಲ್ ಮತ್ತು ಮೋಟಾರ್ ಸೈಕಲ್ ಚಾಲಿಸುವ ಸ್ಪರ್ಧೆ ಹಾಗೂ ನಾಲ್ಕು ಚಕ್ರಗಳ ವಾಹನಗಳನ್ನು ಹಿಂದಕ್ಕೆ ಚಾಲಿಸುವ ಸ್ಪರ್ಧೆ, ಸೋಲೋ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.

ಜೇಸೀ ಸಂಸ್ಥೆಯ ಮನೋಹರ್ ಮತ್ತು ತಂಡದವರಿAದ ಮೂಡಿಬಂದ ಲಹರಿ ಸಂಗೀತ ರಸಸಂಜೆ ಕಾರ್ಯಕ್ರಮವು ಸಂಗೀತದ ರಸದೌತಣ ಉಣಬಡಿಸುವಲ್ಲಿ ಸಫಲವಾಯಿತು.

ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದ ಉದ್ಯಮಿ ಹರಪಳ್ಳಿ ರವೀಂದ್ರ ಅವರು, ವಿಶ್ವದ ೧೩೫ ದೇಶಗಳಲ್ಲಿ ಜೇಸೀ ಸಂಸ್ಥೆಯ ಪದಾಧಿಕಾರಿಗಳು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ನಿಸ್ವಾರ್ಥ ಸೇವೆಯಿಂದಲೇ ಸಂಸ್ಥೆ ಉತ್ತಮ ಹೆಸರು ಸಂಪಾದಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಜೇಸೀ ಸಂಸ್ಥೆಯ ಮಾಜಿ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್, ಕಾರ್ಯದರ್ಶಿ ನೆಲ್ಸನ್ ಡಿಸೋಜ, ಜೇಸಿರೇಟ್ ಪವಿತ್ರ ಲಕ್ಷಿö್ಮಕುಮಾರ್, ಪ್ರಣವ್ ಕಶ್ಯಪ್, ಕಾರ್ಯಕ್ರಮ ಸಂಯೋಜಕಿ ಎಂ.ಎ. ರುಬೀನಾ ಅವರುಗಳು ಉಪಸ್ಥಿತರಿದ್ದರು.