*ಗೋಣಿಕೊಪ್ಪ: ೬೬ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಗೋಣಿಕೊಪ್ಪ ಆಟೋ ಚಾಲಕರ ಸಂಘದ ವತಿಯಿಂದ ಆಚರಿಸಲಾಯಿತು.

ಕನ್ನಡಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕನ್ನಡ ದ್ವಜಾರೋಹಣವನ್ನು ಸಂಘದ ಅಧ್ಯಕ್ಷ ಕುಲ್ಲಚಂಡ ಬೋಪಣ್ಣ ನೇತೃತ್ವದಲ್ಲಿ ಮುಖ್ಯ ಅತಿಥಿಗಳಾದ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಚಂದ್ರಶೇಖರ್ ಹಾಗೂ ಹಿರಿಯ ವೈದ್ಯ ಕಾಳಿಮಾಡ ಶಿವಪ್ಪ ಅವರು ಧ್ವಜಾರೋಹಣವನ್ನು ನೆರವೇರಿಸಿದರು.

ನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಯಥೇಚ್ಚವಾಗಿ ಬಳಸುವ ಮೂಲಕ ಬಾಷೆ ಮತ್ತು ಸಂಸ್ಕöÈತಿಯ ಉಳಿವಿಗೆ ಪ್ರತಿಯೊಬ್ಬರು ಮುಂದಾಗಬೇಕೆAದು ಡಾ. ಚಂದ್ರಶೇಖರ್ ಸಲಹೆ ನೀಡಿದರು. ಮನೆಯಲ್ಲಿ ಯಾವುದೇ ಭಾಷೆಯನ್ನು ಮಾತನಾಡುತ್ತಿದ್ದರೂ ಮನೆಯಿಂದ ಹೊರಬಂದ ನಂತರ ಕನ್ನಡದಲ್ಲೇ ವ್ಯವಹಾರ ನಡೆಸುವುದರಿಂದ ಕನ್ನಡ ಬೆಳವಣಿಗೆ ಸಾಧ್ಯ ಎಂದು ಡಾ. ಶಿವಪ್ಪ ಅವರು ತಿಳಿಸಿದರು.

ಆಟೋ ಚಾಲಕರ ಸಂಘದ ಅಧ್ಯಕ್ಷ ಹೆಚ್.ಎಸ್. ಜಿಮ್ಮ ಸುಬ್ಬಯ್ಯ, ಉಪಾಧ್ಯಕ್ಷ ರಾಜಬಾಬು, ಕಾರ್ಯದರ್ಶಿ ವಿನು, ಸಹಕಾರ್ಯದರ್ಶಿ ಸುರೇಶ, ಖಜಾಂಜಿ ಪಿ.ಪಿ. ರಂಜು, ನಿರ್ದೇಶಕರುಗಳಾದ ದೇವಪ್ಪ, ವಿ.ಆರ್. ವಿನು, ನಿಸಾರ್ ಅಹಮ್ಮದ್, ಜೆ.ಪಿ. ವಸಂತ, ವೈ.ಬಿ. ಗಣೇಶ, ಎಂ.ಸಿ. ಕುಟ್ಟಪ್ಪ, ರಂಜಿತ್, ಚಂದ್ರಬಾನು, ಕ್ರಿಸ್ಟೋಪರ್, ಕಿರಣ್ ಸಿ.ಸಿ, ಹೆಚ್.ಇ. ರಾಜ, ಜೆ. ರವಿ, ಹೆಚ್.ಆರ್ ಮೂರ್ತಿ, ಕೆ.ವೈ. ಆಶ್ವತ್, ಕೆ.ಡಿ. ರಾಜೀವ, ಕೆ.ಆರ್. ಅಯ್ಯಪ್ಪ ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು.

ಚೆಟ್ಟಳ್ಳಿ: ಶ್ರೀ ಬೊಟ್ಲಪ್ಪ ಯುವ ಸಂಘದ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು. ಸಂಘದ ಆವರಣದಲ್ಲಿ ಧ್ವಜಾರೋಹಣವನ್ನು ಸ್ಥಾಪಕ ಅಧ್ಯಕ್ಷ ಬಿ.ಎಸ್. ಜಯಪ್ಪ ನೆರವೇರಿಸಿದರು. ನಂತರ ನಾಡಗೀತೆಯನ್ನು ಹಾಡಲಾಯಿತು. ಕನ್ನಡ ನಾಡು ನುಡಿ ಕರ್ನಾಟಕದ ಏಕೀಕರಣ ಸಂಸ್ಕೃತಿ ಬಗ್ಗೆ ಧ್ವಜಾರೋಹಣವನ್ನು ನೆರವೇರಿಸಿದ ಬಿ.ಎಸ್. ಜಯಪ್ಪ ಮಾತನಾಡಿದರು.

ಯುವ ಸಂಘದ ಅಧ್ಯಕ್ಷ ಪಿ.ಎಂ. ಸುರೇಶ್, ಮಾಜಿ ಅಧ್ಯಕ್ಷ ಕೆ.ಪಿ. ತಿಮ್ಮಯ್ಯ, ಸಂಘದ ಸದಸ್ಯರು ಹಾಜರಿದ್ದರು. ಕಾರ್ಯಕ್ರಮವನ್ನು ಅವಿನಾಶ್ ಬೊಟ್ಲಪ್ಪ ನಿರೂಪಿಸಿ, ಕೆ.ಬಿ. ಆದಿತ್ಯ ಸ್ವಾಗತಿಸಿ, ವಂದಿಸಿದರು. ಕೂಡಿಗೆ: ಕೂಡಿಗೆ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ ಕೆ ನಾಗರಾಜಶೆಟ್ಟಿ ವಹಿಸಿದ್ದರು. ದಿನದ ಮಹತ್ವದ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಡಾ. ಬಸಪ್ಪ ಮಾತಾನಾಡಿದರು.

ಈ ಸಂದರ್ಭ ಕಾಲೇಜಿನ ಉಪನ್ಯಾಸಕರಾದ ನಾಗಪ್ಪ ,ರಮೇಶ್, ಸತೀಶ್, ಕಾವೇರಮ್ಮ, ಹನುಮರಾಜ್, ಪಲ್ಲವಿ, ಲಿನೇಟ್, ಪಾವನ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮುಳ್ಳೂರು: ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೬೬ನೇ ಕನ್ನಡ ರಾಜ್ಯೋತ್ಸವವನ್ನು ಶಾಲೆಯ ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಆಚರಿಸಿದರು. ವಿದ್ಯಾರ್ಥಿಗಳು ಬೆಳಗ್ಗೆ ಶಾಲಾ ಆವರಣದಲ್ಲಿ ಕರ್ನಾಟಕದ ನಕ್ಷೆ ಚಿತ್ರಿಸಿ ಹಳದಿ ಮತ್ತು ಕೆಂಪು ಹೂವುಗಳಿಂದ ಅಲಂಕರಿಸಿ ಕರ್ನಾಟಕದ ಪ್ರಸಿದ್ದ ವ್ಯಕ್ತಿಗಳಾದ ಅಕ್ಕಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಸಂಗೋಳಿ ರಾಯಣ್ಣ, ಯಕ್ಷಗಾನದ ವೇಷ, ಕನ್ನಡ ತಾಯಿ ಭುವನೇಶ್ವರಿ ಮೊದಲಾದವರ ವೇಷಾಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕಳೆ ತಂದರು. ಶಾಲಾ ಆವರಣದ ಎಲ್ಲೆಡೆಯಲ್ಲಿ ಹಳದಿ, ಕೆಂಪು ಕನ್ನಡ ಬಾವುಟಗಳು ಹಾರಾಡುತ್ತಿದ್ದದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತಂದಿತು.

ಕನ್ನಡದ ಕವಿ, ಸಾಹಿತಿಗಳ ಚಿತ್ರಪಟ ಮತ್ತು ಕನ್ನಡದ ಮೇರು ಕೃತಿಗಳ ಪ್ರದರ್ಶನವನ್ನು ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಕನ್ನಡ ಪರ ಘೋಷಣೆಗಳನ್ನು ಕೂಗುತ್ತಾ ಕನ್ನಡದ ಮಹತ್ವ ಸಾರಿದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಪುಟ್ಟಪುಟ್ಟ ವಿದ್ಯಾರ್ಥಿಗಳ ಕನ್ನಡ ಪ್ರೇಮ ಇತರರಿಗೆ ಮಾದರಿಯಾಗಿತ್ತು. ರಾಜ್ಯೋತ್ಸವ ಕಾರ್ಯಕ್ರಮ ಶಾಲೆಯ ಕ್ರಿಯಾಶೀಲ ಶಿಕ್ಷಕ ಸಿ.ಎಸ್.ಸತೀಶ್ ಅವರ ಮಾರ್ಗದರ್ಶನದಂತೆ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪೋಷಕರ ಸಮಿತಿಯ ಪ್ರಮುಖರು, ಪೋಷಕರು, ಗ್ರಾಮಸ್ಥರು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.

ಸೋಮವಾರಪೇಟೆ: ಸಮೀಪದ ನೇರುಗಳಲೆ ಸರ್ಕಾರಿ ಪ್ರೌಢಶಾಲೆ ಹಾಗೂ ಹಳೆ ವಿದ್ಯಾರ್ಥಿಗಳ ಬಳಗದಿಂದ ಕನ್ನಡ ರಾಜ್ಯೋತ್ಸವ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು.

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಉತ್ತಮ ಸಾಧನೆ ತೋರಿದ ಹಳೆ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಪದ್ಮಾವತಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಯುವ ಬರಹಗಾರ ಲೋಹಿತ್, ಗ್ರಾ.ಪಂ. ಮಾಜಿ ಅಧ್ಯಕ್ಷ ಲೋಕಾನಂದ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಜಿತ್‌ಕುಮಾರ್, ಗ್ರಾ.ಪಂ. ಸದಸ್ಯ ವಿನಯ್ ಸಂಭ್ರಮ್, ಹೆಚ್.ಆರ್. ಪ್ರಕಾಶ್, ಪ್ರಮುಖರಾದ ಎಂ.ಸಿ. ಲಲಿತ, ಮುಖ್ಯ ಶಿಕ್ಷಕ ಕೃಷ್ಣೇಗೌಡ, ಶಿಕ್ಷಕ ರತ್ನಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶನಿವಾರಸಂತೆ : ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಭಾರತಿ ವಿದ್ಯಾಸಂಸ್ಥೆ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವವನ್ನು ಜಂಟಿಯಾಗಿ ಆಚರಿಸಲಾಯಿತು.

ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಕೆ. ಅಪ್ಪಸ್ವಾಮಿ, ಕನ್ನಡ ಉಪನ್ಯಾಸಕ ಸೋಮಶೇಖರ್ ಮಾತನಾಡಿದರು. ಸಮಾರಂಭದಲ್ಲಿ ಭಾರತಿ ವಿದ್ಯಾಸಂಸ್ಥೆಯ ನಿರ್ದೇಶಕರುಗಳಾದ ಬಿ.ಕೆ. ಚಿಣ್ಣಪ್ಪ, ಬಿ.ಟಿ. ರಂಗಸ್ವಾಮಿ, ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ದಯಾನಂದ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕ್, ಉಪ ಪ್ರಾಂಶುಪಾಲ ನರಸಿಂಹಮೂರ್ತಿ, ಉಪನ್ಯಾಸಕರುಗಳು, ಸಹ ಶಿಕ್ಷಕರುಗಳು, ಲಯನ್ಸ್ ಕ್ಲಬ್‌ನ ಅಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರುಗಳಾದ ಎಸ್.ಎಸ್. ಚಂದ್ರಶೇಖರ್, ವಕೀಲ ಶಂಕರ್, ಸಿ.ಪಿ. ಹರೀಶ್, ಬಿ.ಸಿ. ಧರ್ಮಪ್ಪ, ಕೆ.ಎನ್. ಕಾರ್ಯಪ್ಪ. ಎಸ್.ಜಿ. ನರೇಶಚಂದ್ರ, ಟಿ.ಆರ್. ಕೇಶವಮೂರ್ತಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ದಯಾನಂದ ಸ್ವಾಗತಿಸಿ, ಕನ್ನಡ ಶಿಕ್ಷಕಿ ಭವಾನಿ ನಿರೂಪಣೆ ಮಾಡಿ, ನರಸಿಂಹಮೂರ್ತಿ ವಂದಿಸಿದರು. ಕೂಡಿಗೆ: ಕೂಡಿಗೆಯ ಸದ್ಗುರು ಅಪ್ಪಯ್ಯ ಪ್ರೌಢಶಾಲೆಯಲ್ಲಿ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.ಧ್ವಜಾರೋಹಣವನ್ನು ಶಾಲೆ ಮುಖ್ಯೋಪಾಧ್ಯಾಯ ದುರ್ಗೆಶ್ ನೆರವೇರಿಸಿದರು

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಶಾಲನಗರ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ಕನ್ನಡ ರಾಜ್ಯೋತ್ಸವ ದಿನದ ಬಗ್ಗೆ ಮಾತಾನಾಡಿದರು. ಶಾಲೆಯ ಕನ್ನಡ ಶಿಕ್ಷಕಿ ಪುಷ್ಪನವರು ಕನ್ನಡ ಭಾಷೆಯ ಇತಿಹಾಸ ಮತ್ತು ಪ್ರಸ್ತುತ ಕನ್ನಡ ಭಾಷೆಯ ಸ್ಥಿತಿಗತಿ ಬಗ್ಗೆ ಹೇಳಿದರು. ವಿದ್ಯಾರ್ಥಿಗಳಿಂದ ಸಂಸ್ಕೃತಿ ಕಾರ್ಯಕ್ರಮಗಳು ನಡೆದವು ಇದೆ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಉ,ರಾ, ನಾಗೇಶ್ ನವರನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶಿಕ್ಷಕರಾದ ಶಿವಪ್ರಸಾದ್, ಸುಲೋಚನ ,ಸೋಮಯ್ಯ, ಕುಸುಮ, ಹೇಮಲತಾ, ಸುರೇಶ್ ಮೋಹನೇಶ್ವರಿ ಉಪಸ್ಥಿತರಿದ್ದರು.ವೀರಾಜಪೇಟೆ: ವೀರಾಜಪೇಟೆ ಕರ್ನಾಟಕ ಸಂಘದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಘದ ಅಧ್ಯಕ್ಷ ಮಾಳೇಟಿರ ಎಂ.ಬೆಲ್ಲು ಬೋಪಯ್ಯ ಅವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ, ಕಾರ್ಯದರ್ಶಿ ಮೂಕಚಂಡ ಬಿ.ಅರುಣ್ ಅಪ್ಪಣ್ಣ ಹಾಗೂ ಎಂ.ಸಿ.ಅಶೋಕ, ಕೋಶಾಧಿಕಾರಿ ಕೆ.ಯು.ಗಣೇಶ್ ತಮ್ಮಯ್ಯ, ನಿರ್ದೇಶಕರಾದ ಸಿ.ಪಿ.ಕಾವೇರಪ್ಪ, ಸಿ.ಎಂ.ಸುರೇಶ್ ನಾಣಯ್ಯ, ಎ.ಎಂ.ಜೋಯಪ್ಪ, ಪಿ.ಎಸ್.ನಂದ, ಬಿ.ಎಂ.ಸುರೇಶ್, ಎಂ.ಜಿ.ಪೂಣಚ್ಚ, ಬಿ.ಗಣೇಶ್ ಬಿದ್ದಪ್ಪ ಇತರರು ಉಪಸ್ಥಿತರಿದ್ದರು. ಮಡಿಕೇರಿ: ಕರ್ನಾಟಕ ರಾಜ್ಯೋತ್ಸವದ ಭಾಗವಾಗಿ ವೀರಾಜಪೇಟೆಯ ಅನ್ವಾರ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಆಡಳಿತಾಧಿಕಾರಿಯಾದ ಶಾಫಿ ಅನ್ವಾರಿ ಸಖಾಫಿ ಕೊಡಗರಹಳ್ಳಿ ರವರು ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಕಾರ್ಯದರ್ಶಿ ಲಿಯಾಕತ್ ಆಲಿ ಗುಂಡಿಕೆರೆ ವಹಿಸಿ ರಾಜ್ಯೋತ್ಸವ ಆಚರಣೆಯ ಹಿನ್ನೆಲೆಯನ್ನು ವಿವರಿಸಿದರು.

ಶಾಲಾ ಸಮಿತಿ ನಿರ್ದೇಶಕ ಯಾಕೂಬ್ ಮಾಸ್ಟರ್ ಕೊಳಕೇರಿ, ಪ್ರಾಂಶುಪಾಲ ಚಂದ್ರು ಕುಮಾರ್, ಕನ್ನಡ ಉಪನ್ಯಾಸಕ ಸಕೀರ್ ಪೊನ್ನತ್ಮೊಟ್ಟೆ, ಗಣಿತ ಶಿಕ್ಷಕ ವೇಣುಗೋಪಾಲ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ನಾಡಗೀತೆ, ಭಾಷಣ, ವಚನ ವಾಚನ, ಸಾಮೂಹಿಕ ಹಾಡು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮಡಿಕೇರಿ : ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಬೆಳಿಗ್ಗೆ ೯ ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಿಂಚನ ತಂಡದವರು ಪ್ರಾರ್ಥಿಸಿದರೆ, ಸಂಘದ ಉಪಾಧ್ಯಕ್ಷೆ ಶೈಲಾ ಮಂಜುನಾಥ್ ಸ್ವಾಗತ ಭಾಷಣ ಮಾಡಿದರು. ಸಂಘದ ಅಧ್ಯಕ್ಷೆ ಸವಿತಾ ಭಟ್ ಪ್ರಾಸ್ತಾವಿಕ ಭಾಷಣ ಮತ್ತು ಕನ್ನಡದ ಬಗ್ಗೆ ಮಾತನಾಡಿದರು. ನಂತರ ಹಿರಿಯ ಸಾಹಿತಿ ಮತ್ತು ಜಾನಪದ ಕಲಾವಿದೆ ಬೈತಡ್ಕ ಜಾನಕಿ ಬೆಳ್ಯಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಕಾರ್ಯಕ್ರಮಗಳನ್ನು ಕನ್ನಂಡ ಕವಿತಾ ಬೊಳ್ಳಪ್ಪ ಮತ್ತು ಕನ್ನಂಡ ಸುನೀತಾ ಸಂಪತ್ ನಿರೂಪಿಸಿದರು. ಪಳಂಗAಡ ಕಮಲಾ ಸುಬ್ಬಯ್ಯ ವಂದಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ವಸುಂಧರಾ ಪ್ರಸನ್ನ, ಉಮಾ ಈಶ್ವರ್, ಸುಶೀಲಾ ವಾಸುದೇವ್, ಆಯಿಷಾ ಹಮೀದ್ ಮತ್ತು ಸಂಘದ ಇತರ ಸದಸ್ಯರು ಉಪಸ್ಥಿತರಿದ್ದರು.

ಸುಂಟಿಕೊಪ್ಪ: ಸುಂಟಿಕೊಪ್ಪ ತಲೆಹೊರೆ ಕನ್ನಡಾಭಿಮಾನಿ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಮಾರುಕಟ್ಟೆ ರಸ್ತೆಯ ಸಂಘದ ಕಚೇರಿಯಲ್ಲಿ ಆಚರಿಸಲಾಯಿತು.

ಚುಟುಕು ಸಾಹಿತಿ ವಹೀದ್‌ಜಾನ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪಿ.ಎಫ್. ಸಬಾಸ್ಟೀನ್, ಪಿ.ಆರ್. ಸುನಿಲ್‌ಕುಮಾರ್, ರಫೀಕ್‌ಖಾನ್, ಸೋಮನಾಥ್, ಶಾಂತಿ, ರೇಷ್ಮ, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕರಾದ ಬಿ.ಡಿ. ರಾಜು ರೈ, ಸುಂಟಿಕೊಪ್ಪ ತಲೆಹೊರೆ ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಸಂತೋಷ್, ಮಾಜಿ ಅಧ್ಯಕ್ಷ ರಾಜು, ಸಂಘದ ಪದಾಧಿಕಾರಿಗಳು ಇದ್ದರು.ಮಡಿಕೇರಿ: ೬೬ನೇ ಕನ್ನಡ ರಾಜ್ಯೋತ್ಸವವನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್ ಮನುಶೆಣೈ ಧ್ವಜಾರೋಹಣ ಮಾಡುವ ಮೂಲಕ ಪತ್ರಿಕಾ ಭವನದಲ್ಲಿ ಆಚರಿಸಲಾಯಿತು. ಆ ಸಂದರ್ಭ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಕೋಶಾಧಿಕಾರಿ ಎಂ.ಪಿ.ಕೇಶವಕಾಮತ್, ಹಾಗೂ ಸುಮಾಶೆಣೈ, ನಮಿತಶೆಣೈ, ಬೇಬಿಮ್ಯಾಥ್ಯೂ, ಶ್ವೇತ ಸಿಬ್ಬಂದಿಗಳಾದ ಯಮುನ, ಸವಿತ, ರಾಜೇಶ್, ಹಾಗೂ ಅಶ್ರಫ್, ರಾಮಣ್ಣ, ಲೀಲಾವತಿ, ರೆಹಮಾನ್ ಪುಟಾಣಿಗಳಾದ, ಚರಿತ, ಕಾವೇರಿ ಭಾಗವಹಿಸಿದ್ದರು.ಮಡಿಕೇರಿ: ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಹಾಗೂ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ಕುವೆಂಪು ಉದ್ಯಾನವನದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕೊಡಗು ಜಿಲ್ಲಾ ಲೇಖಕ ಕಲಾವಿದರ ಬಳಗದ ಅಧ್ಯಕ್ಷ ಕೇಶವ ಕಾಮತ್ ಅವರು ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಮಾಜಿ ನಗರಸಭಾ ಸದಸ್ಯ ಕೆ. ಟಿ. ಬೇಬಿ ಮ್ಯಾಥ್ಯು ಅವರು ಧ್ವಜಾರೋಹಣ ನೆರವೇರಿಸಿದರು.

ಅಕಾಲಿಕವಾಗಿ ನಿಧನರಾದ ಪುನೀತ್ ರಾಜಕುಮಾರ್ ಅವರಿಗೆ ವೇದಿಕೆ ಸದಸ್ಯರಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೇದಿಕೆಯ ಗೌರವಾಧ್ಯಕ್ಷ ಭಾರತಿ ರಮೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ರವಿಗೌಡ, ಮಹಿಳಾ ಘಟಕದ ಅಧ್ಯಕ್ಷೆ ರೋಹಿಣಿ, ಮಡಿಕೇರಿ ನಗರ ಅಧ್ಯಕ್ಷ ದೇವೋಜಿ, ಮಡಿಕೇರಿ ಮಹಿಳಾ ಘಟಕದ ಅಧ್ಯಕ್ಷೆ ಮೀನಾಜ್ ಪ್ರವೀಣ್. ತಾಲೂಕು ಉಪಾಧ್ಯಕ್ಷ ನಾಗೇಶ್, ತಾಲೂಕು ಉಪ ಕಾರ್ಯದರ್ಶಿ ಅಕ್ಷಿತ್, ತಾಲೂಕು ಮಹಿಳಾ ಪ್ರಧಾನ ಕಾರ್ಯದರ್ಶಿ ಲತಾ ಮೂರ್ನಾಡು, ಲಕ್ಷಿö್ಮÃ ಪ್ರಸಾದ್ ಪೆರ್ಲ ಸೇರಿದಂತೆ ಇನ್ನಿತರರು ಹಾಜರಿದ್ದರು.