*ಗೋಣಿಕೊಪ್ಪ, ನ. ೩: ಕಾಫಿ ಬೆಳೆಗಾರರು ಹಾಗೂ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ವಿದ್ಯುತ್ ಹಾಗೂ ಇತರ ಸೌಕರ್ಯಗಳನ್ನು ಚೆಸ್ಕಾಂ ಇಲಾಖೆ ಒದಗಿಸಿಕೊಡಬೇಕೆಂದು ತಾಲೂಕು ಬಿಜೆಪಿ ಕೃಷಿ ಮೋರ್ಚಾ ವತಿಯಿಂದ ಗೋಣಿಕೊಪ್ಪ ಚೆಸ್ಕಾಂ ಇಲಾಖೆಗೆ ತಾಲೂಕು ಅಧ್ಯಕ್ಷ ಕಟ್ಟೇರ ಈಶ್ವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಚೆಸ್ಕಾಂ ಹಿರಿಯ ಸಹಾಯಕ ಸೈಯ್ಯದ್ ಅಬ್ರಾಹಾರ್ ಮನವಿಯನ್ನು ಸ್ವೀಕರಿಸಿದರು.

ಮನವಿ ಪತ್ರದಲ್ಲಿ ರೈತರ ಅನುಕೂಲಕ್ಕಾಗಿ ೮ ಬೇಡಿಕೆಗಳನ್ನು ಸಲ್ಲಿಸಲಾಗಿದ್ದು, ೧೦ ಹೆಚ್.ಪಿ ಪಂಪ್‌ಸೆಟ್ ಹೊಂದಿರುವ ಕೊಡಗಿನ ರೈತ ಮತ್ತು ಬೆಳೆಗಾರರಿಗೆ ಉಚಿತ ವಿದ್ಯುತ್ ಒದಗಿಸುವಂತೆ, ೫ ತಾಲೂಕಿನಲ್ಲಿನ ಸಬ್‌ಸ್ಟೇಷನ್ ಮೇಲ್ದರ್ಜೆಗೆ ಏರಿಸುವಂತೆ, ನಿರಂತರವಾಗಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಜಿಲ್ಲೆಯ ರೈತರ ಪಂಪ್‌ಸೆಟ್‌ಗಳಿಗೆ ನೀಡಿದ ಶುಲ್ಕದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡುವಂತೆ, ನಿಷ್ಕಿçಯಗೊಳಿಸಿದ ರೈತರ ಪಂಪ್ ಸೆಟ್ ಮತ್ತು ಮನೆಗಳಿಗೆ ಕೂಡಲೇ ವಿದ್ಯುತ್ ಪೂರೈಕೆ ಮಾಡುವಂತೆ, ಕೊಡಗಿನ ರೈತರು ವರ್ಷದ ಮೂರು ತಿಂಗಳಿನಲ್ಲಿ ಮಾತ್ರ ಬೆಳೆಗಳಿಗೆ ನೀರು ಹಾಯಿಸಲು ಪಂಪ್‌ಸೆಟ್ ಬಳಕೆ ಮಾಡುವುದನ್ನು ಪರಿಗಣಿಸಿ ನಿಗದಿತ ಶುಲ್ಕ ವಿಧಿಸುವಂತೆ, ಇಲಾಖೆಗೆ ರೈತರು ಕರೆ ಮಾಡಿದಾಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನೋಂದಾಯಿಸಿಕೊಳ್ಳುವ ಮೂಲಕ ಉತ್ತಮ ಮಾಹಿತಿ ಮತ್ತು ಪರಿಹಾರ ಒದಗಿಸಿಕೊಡುವಂತೆ ಹಾಗೂ ಇನ್ನಿತರ ಹಲವು ಬೇಡಿಕೆಗಳನ್ನು ಒಳಗೊಂಡು ಮನವಿ ಪತ್ರವನ್ನು ನೀಡಲಾಯಿತು.

ಜಿಲ್ಲಾ ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂತ್ರAಡ ಕಬೀರ್‌ದಾಸ್, ತಾಲೂಕು ಪ್ರಧಾನ ಕಾರ್ಯದರ್ಶಿ ತೋರಿರ ವಿನು, ಕಾರ್ಯದರ್ಶಿ ಅಡ್ಡಂಡ ನಿರನ್ ಮಂದಣ್ಣ, ಕೊಟ್ಟಂಗಡ ಅಯ್ಯಪ್ಪ, ಖಜಾಂಜಿ ಅಣ್ಣಾಳಮಾಡ ನವೀನ್, ಉಪಾಧ್ಯಕ್ಷ ಚಟ್ಟ್ಟಮಾಡ ಅನಿಲ್ ಹಾಗೂ ಸದಸ್ಯರುಗಳಾದ ರಮೇಶ್, ಮಧು ಪಾಲ್ಗೊಂಡಿದ್ದರು.