ಮಡಿಕೇರಿ, ನ. ೪: ಕೊಡಗು ವಿದ್ಯಾಲಯ ಆಪಾರ್ಚುನಿಟಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಇಂದು ನಡೆಯಿತು. ಜಸ್ಟೀಸ್ ಗೋವಿಂದ ಭಟ್ ಹಾಗೂ ಮೀನಾಕ್ಷಿ ಭಟ್ ಸ್ಮಾರಕ ಪ್ರತಿಷ್ಠಾನದ ವತಿಯಿಂದ ನಿರ್ಮಾಣವಾದ ನೂತನ ಕಟ್ಟಡವನ್ನು, ಇಂದು ಆಪಾರ್ಚುನಿಟಿ ಶಾಲೆಯ ೨೫ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಷ್ಠಾನದ ಟ್ರಸ್ಟಿ ಕೆ.ಜಿ ಶಶಿಧರ್ ಅವರು ಉದ್ಘಾಟಿಸಿದರು.

ನಿವೃತ್ತ ಏರ್ ಮಾರ್ಷಲ್ ಕಾರ್ಯಪ್ಪ, ಟ್ರಸ್ಟ್ನ ಅಧ್ಯಕ್ಷ ಸಿ.ಬಿ ದೇವಯ್ಯ, ಸ್ಥಾಪಕ ಟ್ರಸ್ಟಿ ಮೀನಾ ಕಾರ್ಯಪ್ಪ, ಟ್ರಸ್ಟಿ ಗುರುದತ್ ಹಾಗೂ ಇತರರು ಪಾಲ್ಗೊಂಡಿದ್ದರು.