ಕೂಡಿಗೆ, ನ. ೩: ೨೦೧೯- ೨೦ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕುಶಾಲನಗರದ ಸಿ.ಟಿ. ಸುಪ್ರೀತಾ ಇವರು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ‘ಗ್ರೀನ್ ಸಿಂಥೆಸಿಸ್ ಆಪ್ ಕ್ವಾಲಿಟಿ ಎನ್‌ಹ್ಯಾನ್ಸ್ಮೆಂಟ್ ಇನ್ ಏಜ್ಡ್ ಆನಿಯನ್’ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ಶಾಸ್ತçದಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿ ಗಳಿಸಿದ್ದಾರೆ. ಅತೀ ಹೆಚ್ಚು ಅಂಕ ಗಳಿಸುವುದರೊಂದಿಗೆ ಚಿನ್ನದ ಪದಕ ಪಡೆದು ವಿಶ್ವ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಕ್ಟೋಬರ್ ೧೮ ರಂದು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ನಡೆದ ೩೪ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪದವಿ ಮತ್ತು ಚಿನ್ನದ ಪದಕವನ್ನು ಸ್ವೀಕರಿಸಿದ್ದಾರೆ. ಸಿ.ಟಿ. ಸುಪ್ರೀತಾ ಇವರು ಚಪ್ಪೇರ ಸಿ.ಕೆ. ತಮ್ಮಯ್ಯ, ಯಮುನಾ ಕೆ.ಎನ್. ಪುತ್ರಿಯಾಗಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರೊ. ಡಾ. ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.