ನಾಪೋಕ್ಲು, ನ. ೨: ತ್ರಿಪುರದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿ, ಹಿಂಸಾಚಾರವನ್ನು ನಿಲ್ಲಿಸುವಂತೆ ಒತ್ತಾಯಿಸಿ ನಗರದಲ್ಲಿ ಇಂದು ಎಸ್.ಡಿ.ಪಿ.ಐ. ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಎಸ್.ಡಿ.ಪಿ.ಐ ಮುಖಂಡ ಅಬುಬಕ್ಕರ್, ಮುಸ್ಲಿಮರ ಮೇಲೆ ಸರಕಾರ ದಾಳಿ ನಡೆಸುತ್ತಿದೆ ಇದು ಖಂಡನೀಯ. ಇಂದು ರಾಜ್ಯದ ಪೊಲೀಸ್ ಠಾಣೆ ಸಂಘ ಪರಿವಾರದ ಕಚೇರಿ ಆಗುತ್ತಿದೆ. ಬಾಂಗ್ಲಾದಲ್ಲಿ ಆದ ಘಟನೆಗೆ ಇಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯವನ್ನು ಸಂಘ ಪರಿವಾರದವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್.ಡಿ.ಪಿ.ಐ, ವೀರಾಜಪೇಟೆ ಕ್ಷೇತ್ರದ ಬ್ಲಾಕ್ ಅಧ್ಯಕ್ಷ ಹನೀಫ್ ಕೊಂಡAಗೇರಿ, ಎಸ್.ಡಿ.ಪಿ.ಐ. ಮುಖಂಡ ಅಬ್ದುಲ್ ಅಡ್ಕಾರ್, ಮಾತನಾಡಿದರು. ಈ ಸಂದರ್ಭ ನಾಪೋಕ್ಲು ಗ್ರಾಮ ಪಂಚಾಯತ್ ಸದಸ್ಯ ಕೆ.ವೈ. ಅಶ್ರಫ್, ವಿರಾಜಪೇಟೆ ಬ್ಲಾಕ್ ಕಾರ್ಯದರ್ಶಿ ರೋಷನ್ ಮತ್ತು ಎಸ್.ಡಿ.ಪಿ.ಐ. ಕಾರ್ಯಕರ್ತರು ಇದ್ದರು.