*ಗೋಣಿಕೊಪ್ಪ, ನ. ೨: ಪಟ್ಟಣದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಕೇರಳದ ವ್ಯಕ್ತಿಯನ್ನು ಗೋಣಿಕೊಪ್ಪ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳದ ಆಟೋ ಚಾಲಕ ಪಿ. ವಿನೋದ್ ತನ್ನ ಆಪೇ ಗೂಡ್ಸ್ ಆಟೋದಲ್ಲಿ ಫ್ಯಾಬ್ರೀಕೇಷನ್ ಸಾಮಗ್ರಿಗಳನ್ನು ಸಾಗಿಸುವ ನೆಪದಲ್ಲಿ ಆಟೋದ ಒಳಭಾಗದಲ್ಲಿ ಗೋಮಾಂಸ ಸಂಗ್ರಹಿಸಿ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಈತ ಮಾನಂದವಾಡಿಯಿAದ ಕುಟ್ಟ ಮಾರ್ಗವಾಗಿ ಸಂಚಾರ ಕೈಗೊಂಡು ಈ ಮಾರ್ಗದುದ್ದಕ್ಕೂ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದ. ಜೋಡುಬೀಟಿ ಸಮೀಪದಲ್ಲಿ ಮಾಂಸ ವ್ಯಾಪಾರ ನಡೆಸುತ್ತಿದ್ದ ಸಂದರ್ಭದಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸದಸ್ಯರು ಹಾಗೂ ರೈತ ಸಂಘದ ಸದಸ್ಯರುಗಳಿಗೆ ಸಿಕ್ಕಿ ಬಿದ್ದಿದ್ದು, ಗೋಣಿಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈತನ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಅಕ್ರಮ ಗೋಮಾಂಸ ಪ್ರಕರಣದಡಿ ದೂರು ದಾಖಲಾಗಿದೆ ಎಂದು ವೃತ್ತ ನಿರೀಕ್ಷಕ ಜಯರಾಮ್ ಮಾಹಿತಿ ನೀಡಿದ್ದಾರೆ.