ಶನಿವಾರಸಂತೆ, ನ. ೨: ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ೨೦೧೯-೨೦೨೦ ಮತ್ತು ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎನ್.ಕೆ. ಅಪ್ಪಸ್ವಾಮಿ ವಹಿಸಿದ್ದರು. ಭಾರತಿ ವಿದ್ಯಾಸಂಸ್ಥೆಯಲ್ಲಿ ಸುಮಾರು ೩೫೦ ಮಂದಿ ಸದಸ್ಯರಿದ್ದಾರೆ. ಆದರೆ ಮಹಾಸಭೆಗೆ ಕೇವಲ ಬೆರಳೆಣಿಕೆಯಷ್ಟು ಸದಸ್ಯರುಗಳು ಹಾಜರಿದ್ದಾರೆ ಎಂದು ಸದಸ್ಯರುಗಳಾದ ಸಿ.ಕೆ. ಕೊಮಾರಪ್ಪ, ಎಂ.ಡಿ. ದೇವರಾಜ್, ಕೃಷ್ಣಪ್ಪ, ದೊಡ್ಡಪ್ಪ, ಅಮೀರ್, ವೆಂಕಟೇಶ್ ಇತರರು ಬೇಸರವ್ಯಕ್ತಪಡಿಸಿದರು.
೨೦೧೮-೧೯ನೇ ಸಾಲಿನ ಮಹಾಸಭೆಯ ನಡಾವಳಿಯನ್ನು ಎ.ಬಿ. ರಾಜಶೇಖರ್ ಸಭೆಗೆ ಮಂಡಿಸಿದರು. ಆಡಳಿತ ಮಂಡಳಿಯ ವರದಿಯನ್ನು ಗೌರವ ಕಾರ್ಯದರ್ಶಿ ಕೆ.ಎಂ. ಜಗನ್ಪಾಲ್ ಮಂಡಿಸಿದರು. ೨೦೧೯-೨೦೨೦-೨೧ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಅಂಗೀಕರಿಸಿ, ಆಯ-ವ್ಯಯವನ್ನು ಮಂಡಿಸಲಾಯಿತು. ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಹೆಚ್.ಪಿ. ಶೇಷಾದ್ರಿ, ನಿರ್ದೇಶಕರುಗಳಾದ ಬಿ.ಕೆ. ಚಿಣ್ಣಪ್ಪ, ಗೌರವ ಕಾರ್ಯದರ್ಶಿ ಕೆ.ಎಂ. ಜಗನ್ಪಾಲ್, ಎ.ಎಂ. ಆನಂದ್, ಎನ್.ಜಿ. ಅನಿಲ್, ಎಂ.ಯು. ಮಹಮ್ಮದ್ ಪಾಶಾ, ಎಂ.ಹೆಚ್. ಮಹಮದ್ ಗೌಸ್, ಕೆ.ಸಿ. ಉತ್ತಪ್ಪ, ಎನ್.ಬಿ. ನಾಗಪ್ಪ, ಬಿ.ಟಿ. ರಂಗಸ್ವಾಮಿ, ಕೆ.ಪಿ. ಪುಷ್ಪಾ, ಗಾಯತ್ರಿ ತಮ್ಮಯ್ಯ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಈ.ಎಂ. ದಯಾನಂದ, ಪ.ಪೂ. ಕಾಲೇಜು ಪ್ರಾಂಶುಪಾಲ ಎಸ್.ಜೆ. ಅಶೋಕ್, ಪ್ರೌಢಶಾಲಾ ವಿಭಾಗ ಸಹ ಶಿಕ್ಷಕರಾದ ಪಿ. ನರಸಿಂಹ ಮೂರ್ತಿ, ಶಿಕ್ಷಕರು, ಉಪನ್ಯಾಸಕರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಾದ ಸಂಜನಾ ತಂಡದಿAದ ಪ್ರಾರ್ಥನೆ, ಜಗನ್ಪಾಲ್ ಸ್ವಾಗತಿಸಿ, ಆನಂದ್ ವಂದಿಸಿದರು.