ಬಾಳೆಲೆ, ನ. ೩: ನಿಟ್ಟೂರು ಗ್ರಾಮದಲ್ಲಿ ಅಕ್ಟೋಬರ್ ೩೦ರಂದು ನಿಗದಿಯಾಗಿದ್ದ ಜಿಲ್ಲಾಧಿಕಾರಿ ನಡಿಗೆ ಹಳ್ಳಿ ಕಡೆಗೆ ಜನಸಂಪರ್ಕ ಸಭೆ ಕಾರಣಾಂತರದಿAದ ರದ್ದಾಗಿದ್ದು, ಈ ಸಭೆಯನ್ನು ತಕ್ಷಣ ಮತ್ತೆ ನಡೆಸುವಂತೆ ನಿಟ್ಟೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು.
ಇಂದು ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಚೆಕ್ಕೇರ ಸೂರ್ಯ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ತಾ. ೨೮ರಂದು ಜಿಲ್ಲಾಧಿಕಾರಿಗಳು ನಿಗದಿಪಡಿಸಿದ್ದ ಸಭೆಯನ್ನು ಗ್ರಾಮ ಪಂಚಾಯಿತಿ ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಡೆಸಿರುವುದರಿಂದ ಗ್ರಾಮಸ್ಥರಿಗೆ ಮಾಹಿತಿ ಸರಿಯಾಗಿ ಮುಟ್ಟಲಿಲ್ಲ . ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡದ ಕಾರಣ ಜನರಿಗೆ ಈ ಕಾರ್ಯಕ್ರಮದ ಅರಿವಾಗಲೇ ಇಲ್ಲ. ಅಲ್ಲದೆ ಜನ ಸಂಪರ್ಕ ಸಭೆಗೆ ಜಿಲ್ಲಾಧಿಕಾರಿ, ತಹಶೀಲ್ದಾರ್, ಶಿಕ್ಷಣ, ಅರಣ್ಯ, ಪಶುಸಂಗೋಪನೆ, ಪೊಲೀಸ್, ಅಬಕಾರಿ, ಆಹಾರ, ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸದೆ ತಮ್ಮ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಕೆಳಹಂತದ ಅಧಿಕಾರಿಗಳನ್ನು ಕಳುಹಿಸಿದ ಕಾರಣ ಪ್ರಚಾರ ಮತ್ತು ಪ್ರಸಾರ ಕೊರತೆಯಿಂದ ಜನರು ಸಹ ಬಾರದ ಕಾರಣ ಸಭೆಯನ್ನು ಮುಂದೂಡಲಾಯಿತು. ಸರ್ಕಾರದ ಮಹತ್ವದ ಯೋಜನೆ ಜನರಿಗೆ ಮುಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ದಿನಾಂಕವನ್ನು ಜಿಲ್ಲಾಡಳಿತ ಮತ್ತೆ ನಿಗದಿಪಡಿಸಿ ಸರ್ಕಾರದ ಮಾರ್ಗ ಸೂಚಿಯಂತೆ ಆಡಳಿತ ಯಂತ್ರವನ್ನು ಜನ ಸಾಮಾನ್ಯರಿಗೆ ಮುಟ್ಟಿಸಲು ಒತ್ತಾಯಿಸಿ ಇಂದು ನಿಟ್ಟೂರು ಗ್ರಾಮದ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಸಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಪಡಿಞರಂಡ ಕವಿತಾಪ್ರಭು, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಅಳಮೇಂಗಡ ಪವಿತಾ, ಅಮ್ಮಣಿ, ರಾಜು, ಅಮ್ಮಯ್ಯ, ಪಿಡಿಓ ಮನಮೋಹನ್ ಹಾಜರಿದ್ದರು.