*ವೀರಾಜಪೇಟೆ, ನ. ೧: ವೀರಾಜಪೇಟೆಯ ತಾಲೂಕು ಮೈದಾನದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯ ಸಂಯುಕ್ತಾಶ್ರ ಯದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಸರಳವಾಗಿ ಜರುಗಿತು.
ಧ್ವಜಾರೋಹಣ ಕಾರ್ಯಕ್ರಮ ವನ್ನು ತಾಲೂಕು ದಂಡಾಧಿಕಾರಿ ಯೋಗಾನಂದ್ ಅವರು ನೆರವೇರಿಸಿ ದರು. ವೀರಾಜಪೇಟೆ ನಗರ ಠಾಣಾಧಿ ಕಾರಿ ಜಗದೀಶ್ ಧೂಳ್‌ಶೆಟ್ಟಿಯವರ ನೇತೃತ್ವದಲ್ಲಿ ಧ್ವಜಾವಂದನೆಯನ್ನು ಸಲ್ಲಿಸಲಾಯಿತು. ತಹಶೀಲ್ದಾರ್ ಯೋಗಾನಂದ್ ಅವರು ಧ್ವಜವಂದನೆಯನ್ನು ಸ್ವೀಕರಿಸಿದರು.
ಧ್ವಜಾರೋಹಣ ಮಾಡಿದ ಬಳಿಕ ಕನ್ನಡ ರಾಜ್ಯೋತ್ಸವದ ಸಂದೇಶವನ್ನು ತಿಳಿಸುತ್ತಾ ಮಾತನಾಡಿದ ತಾಲೂಕು ದಂಡಾಧಿಕಾರಿ ಯೋಗಾನಂದ್ ಅವರು ಈ ಬಾರಿ ಕನ್ನಡದ ಮೇರುನಟ ಪುನೀತ್‌ರಾಜ್ ಕುಮಾರ್ ಅವರ ನಿಧನದಿಂದ ಎಲ್ಲೆಲ್ಲಿಯೂ ದುಃಖ ಮಡುಗಟ್ಟಿದೆ. ಅಷ್ಟೊಂದು ಸಂಭ್ರಮವಿಲ್ಲ, ಅದ್ಧೂರಿತನವಿಲ್ಲ. ಮನುಷ್ಯನಿಗೆ ಸಂವಹನಕ್ಕೆ ಭಾಷೆಯಿಲ್ಲ ಅಂದಿದ್ದರೇ ಆತ ಪ್ರಾಣಿಯಾಗುತ್ತಿದ್ದ. ಶೇಕ್ಸ್ ಪೀಯರ್ ಸಾಹಿತ್ಯ ಬರೆಯುವುದಕ್ಕಿಂತ ಮುಂಚಿತವಾಗಿ ಅದರೆ ಆರು ನೂರು ವರ್ಷಗಳ ಹಿಂದೆಯೇ ಪಂಪ ಹುಟ್ಟಿದ್ದ ಸಾಹಿತ್ಯವನ್ನು ರಚನೆ ಮಾಡಿದ್ದ.
(ಮೊದಲ ಪುಟದಿಂದ)
ಇAದಿನ ತಲೆಮಾರಿನವರು ದೇಶ, ಭಾಷೆಯ ಬಗ್ಗೆ, ನೆಲ-ಜಲದ ಬಗ್ಗೆ ಸ್ಪಂದಿಸಬೇಕಾಗುತ್ತದೆ. ಈ ಕುರಿತಾದ ಸಂವೇದನೆಗಳು ಬಹಳ ಮುಖ್ಯ. ನಿಮ್ಮ ಕುಟುಂಬಕ್ಕೆ ಗಮನ ಕೊಡುವಷ್ಟೇ ವಿಶ್ವ ಕುಟುಂಬಕ್ಕೂ ಗಮನ ಕೊಡಿ. ಭಾಷೆಯನ್ನೇ ಅಧ್ಯಯನ ಮಾಡದ ಡಾ.ರಾಜ್‌ಕುಮಾರ್ ಈ ನಾಡಿನ ಭಾಷೆಗೆ ಸಲ್ಲಿಸಿದ ಸೇವೆ ಅನನ್ಯ. ಯಾವತ್ತೂ ಭಾಷೆಯ ಬಗೆಗಿನ ಒಲವು ಒಳಗಿನಿಂದ ಬರಬೇಕು. ಕನ್ನಡವನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಹೊಣೆ. ಅದಕ್ಕಾಗಿ ನಾವೂ ಮಾಡಬೇಕಿರುವುದು ಇಷ್ಟೇ ಸ್ಪಷ್ಟವಾದ, ಉಚ್ಛಾರಣೆ ತಪ್ಪಿಲ್ಲದ ಕನ್ನಡ ಮಾತನಾಡುವುದು ಎಂದರು. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಸಂತ ಅನ್ನಮ್ಮ ಶಾಲೆಯ ಮಕ್ಕಳು ರಾಷ್ಟçಗೀತೆ, ನಾಡಗೀತೆ, ರೈತಗೀತೆಯನ್ನು ಹಾಡಿದರು.ಕಾರ್ಯಕ್ರಮದ ವೇದಿಕೆಯಲ್ಲಿ, ತಾಲೂಕು ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಶಿಕ್ಷಣ ಸಮನ್ವಯಧಿಕಾರಿ ವನಜಾಕ್ಷಿ, ನಗರ ಠಾಣಾಧಿಕಾರಿ ಜಗದೀಶ್ ಧೂಳ್‌ಶೆಟ್ಟಿ, ಮುಖ್ಯಾಧಿಕಾರಿ ಚಂದ್ರಕುಮಾರ್ ಇದ್ದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಶಿಕ್ಷಕರು, ಸಾರ್ವಜನಿಕರು ಹಾಜರಿದ್ದರು. ಕನ್ನಡ ಜಾಗೃತ ಬಳಗದ ಸರ್ವ ಸದಸ್ಯರು ಹಾಜರಿದ್ದರು. ಶಿಕ್ಷಕ ಮಂಜುನಾಥ್ ಕಾರ್ಯಕ್ರಮ ನಿರೂಪಣೆ ಮಾಡಿದರು.