ಗೋಣಿಕೊಪ್ಪಲು, ನ. ೧: ಸತತ ಮೂರು ದಿನಗಳ ಕಾಲ ನಡೆದ ಶೋಧ ಕಾರ್ಯಾಚರಣೆಯಲ್ಲಿ ಮುಳುಗು ತಜ್ಞರು ಯಶಸ್ವಿಯಾಗಿದ್ದು ಸೋಮವಾರ ಸಂಜೆಯ ವೇಳೆಯಲ್ಲಿ ಬಾಲಕನ ಮೃತದೇಹ ಪತ್ತೆ ಹಚ್ಚಿದ್ದಾರೆ.
ಮುಂಜಾನೆಯಿAದಲೇ ತಾಲೂಕು ತಹಶೀಲ್ದಾರ್ ಯೋಗಾನಂದ್, ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಲಕ್ಷö್ಮಣ ತೀರ್ಥ ನದಿಯಲ್ಲಿ ಬಾಲಕನ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆಗೆ ಇಳಿದಿದ್ದರು.
ಆದರೆ ಪ್ರಯೋಜನವಾಗಿರಲಿಲ್ಲ. ಮಧ್ಯಾಹ್ನ ೧೨ ಗಂಟೆ ವೇಳೆ ತಹಶೀಲ್ದಾರ್ ಯೋಗಾನಂದ್ ಅವರು ಅನುಭವಿ ಮುಳುಗು ತಜ್ಞರನ್ನು ಭಾಗಮಂಡಲ ದಿಂದ ಬರಮಾಡಿಕೊಂಡು ಮತ್ತೆ ನದಿಯ ಉದ್ದಗಲಕ್ಕೂ ಕಾರ್ಯಾಚರಣೆ ನಡೆಸಿದರು.
ಸಂಜೆ ೫ ಗಂಟೆ ವೇಳೆ ಬಾಲಕನ ಮೃತದೇಹ ನದಿಯಲ್ಲಿ ಇರುವುದನ್ನು ಈಜುಗಾರರು ಖಚಿತ ಪಡಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಸತತ ಮೂರು ದಿನಗಳಿಂದ ನಡೆಸುತ್ತಿದ್ದ ಕಾರ್ಯಾಚರಣೆಗೆ ತೆರೆ ಎಳೆಯಲಾಯಿತು.
ಟೀ.ಶೆಟ್ಟಿಗೇರಿ ಗ್ರಾಮದ ರೇವತಿ ಹಾಗೂ ಮಗ ಕಾರ್ಯಪ್ಪ ಕಳೆದ ಮೂರು ದಿನಗಳ ಹಿಂದೆ ಮನೆಯ ಸಮೀಪದ ಲಕ್ಷö್ಮಣ ತೀರ್ಥ ನದಿಯ ಬದಿಯಲ್ಲಿ ಹಸುವನ್ನು ಮೇಯಿಸಲು ತೆರಳಿದ ವೇಳೆ ಆಕಸ್ಮಾತ್ತಾಗಿ ಹೊಳೆಗೆ ಜಾರಿ ಪ್ರಾಣ ಕಳೆದುಕೊಂಡಿದ್ದರು.
ಭಾನುವಾರ ರೇವತಿ ಅಲಿಯಾಸ್ (ರೇಖಾ-೩೨)ಳ ಮೃತದೇಹ ಪತ್ತೆಯಾಗಿದ್ದು, ಸಂಜೆಯ ವೇಳೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
(ಮೊದಲ ಪುಟದಿಂದ)
ರೇಖಾಳೊAದಿಗೆ ತೆರಳಿದ್ದ ಮಗ ಕಾರ್ಯಪ್ಪನ ಮೃತದೇಹದ ಶೋಧ ಕಾರ್ಯ ಸಂಜೆಯವರೆಗೂ ಮುಂದುವರೆದರೂ ಪತ್ತೆಯಾಗಿರಲಿಲ್ಲ.
ಇದರಿಂದಾಗಿ ತಹಶೀಲ್ದಾರ್ ಯೋಗಾನಂದ್ ಬೆಳಿಗ್ಗೆಯಿಂದಲೇ ತಮ್ಮ ಸಿಬ್ಬಂದಿಗಳ ಸಮ್ಮುಖದಲ್ಲಿ ಹಾಜರಿದ್ದು ಶೋಧ ಕಾರ್ಯ ಮುಂದುವರೆಸಿದ್ದರು. ಸಂಜೆಯ ವೇಳೆ ಮೃತದೇಹ ಪತ್ತೆಯಾಯಿತು.
ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯೆದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಮೃತಪಟ್ಟ ಯುವಕ ಶ್ರೀಮಂಗಲ ಖಾಸಗಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ, ಪ್ರತಿಭಾವಂತ ವಿದ್ಯಾರ್ಥಿಯಾಗಿ ಶಿಕ್ಷಕರ ಮೆಚ್ಚುಗೆ ಗಳಿಸಿದ್ದ.
ಶಾಲೆಗೆ ರಜೆ ಇದ್ದ ಕಾರಣ ತನ್ನ ತಾಯಿಯೊಂದಿಗೆ ಹಸು ಮೇಯಿಸಲು ಮನೆಯ ಸಮೀಪದ ನದಿಯ ತೀರಕ್ಕೆ ತೆರಳಿದ್ದ. ಆಕಸ್ಮಿಕವಾಗಿ ಹೊಳೆಗೆ ಜಾರಿ ಮೃತಪಟ್ಟಿದ್ದ. ಮೂರು ದಿನಗಳ ನಂತರ ಈತನ ಮೃತದೇಹ ಪತ್ತೆಹಚ್ಚುವಲ್ಲಿ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮುಳುಗು ತಜ್ಞರು ಯಶಸ್ವಿಯಾದರು.
ಕಾರ್ಯಾಚರಣೆ ವೇಳೆ ಟಿ.ಶೆಟ್ಟಿಗೇರಿ ಗ್ರಾಮದ ಬಿಜೆಪಿ ಕೃಷಿ ಮೋರ್ಚಾದ ತಾಲೂಕು ಅಧ್ಯಕ್ಷ ಕಟ್ಟೆರ ಈಶ್ವರ, ಕಂದಾಯ ಅಧಿಕಾರಿಗಳಾದ ಸುಧೀರ್, ಎಸ್.ಐ. ರವಿಶಂಕರ್, ಎ.ಎಸ್.ಐ. ಅರುಣ್, ಸಿಬ್ಬಂದಿಗಳಾದ ಮಂಜು ಸಾಲಿಯಾನ್, ದನಪತಿ, ವಿಶ್ವನಾಥ್,ಧನ್ಯ ಇನ್ನಿತರರು ಭಾಗವಹಿಸಿದ್ದರು.
- ಹೆಚ್.ಕೆ. ಜಗದೀಶ್