ಸುಂಟಿಕೊಪ್ಪ, ನ. ೧: ಸುಂಟಿಕೊಪ್ಪ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ಸಭೆಯು ಶಕ್ತಿ ಕೇಂದ್ರದ ಪ್ರಮುಖ್ ಬಿ.ಕೆ. ಪ್ರಶಾಂತ್ (ಕೋಕ) ಹಾಗೂ ವಾಸುದೇವ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ತಾಲೂಕು ಒಬಿಸಿ ಮಂಡಲ ಅಧ್ಯಕ್ಷ ಗಂಗಾಧರ ಅವರ ಸಮ್ಮುಖದಲ್ಲಿ ಹಾಗೂ ಜಿಲ್ಲಾ ಒಬಿಸಿ ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು, ತಾಲೂಕು ಒಬಿಸಿ ಮೋರ್ಚಾದ ಪದಾಧಿಕಾರಿಗಳು, ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಸುಂಟಿಕೊಪ್ಪ ಒಬಿಸಿ ಮೋರ್ಚಾದ ಅಧ್ಯಕ್ಷರಾಗಿ ಸುನಿಲ್‌ಕುಮಾರ್, ಉಪಾಧ್ಯಕ್ಷರಾಗಿ ರಾಜನ್ ಜಿ., ಪ್ರಧಾನ ಕಾರ್ಯದರ್ಶಿಯಾಗಿ ಎಂ. ವಿಘ್ನೇಶ್ ಹಾಗೂ ಒಬಿಸಿ ಮಹಾಶಕ್ತಿ ಕೇಂದ್ರದ ಘಟಕಕ್ಕೆ ಸಂತೋಷ್‌ಕುಮಾರ್ ಹಾಗೂ ಬಿ.ಎಂ. ಸುರೇಶ್ (ಪುಟ್ಟ) ಅವರನ್ನು ನೇಮಕಗೊಳಿಸಲಾಯಿತು.