ಮಡಿಕೇರಿ, ನ. ೧: ಕೃಷಿ ಇಲಾಖೆಯ ಜಲಾನಯನ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣದ ಸೌಲಭ್ಯವಿದ್ದು, ಹೊಂಡ ನಿರ್ಮಾಣವಾಗದಿದ್ದರೂ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಬೇನಾಮಿ ಹೆಸರಿನಲ್ಲಿ ಚೆಕ್ ಪಡೆದು ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ. ವೀರಾಜಪೇಟೆ ತಾಲೂಕಿನ ಹಾಲುಗುಂದ ಗ್ರಾಮದ ಕೊಂಡAಗೇರಿಯಲ್ಲಿ ೧೦ ಕ್ಕೂ ಹೆಚ್ಚು ಮಂದಿಯ ಹೆಸರಿನಲ್ಲಿ ಕೃಷಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಣ ಪಡೆದಿರುವುದಾಗಿ ಹಾಲುಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎ ಯೂಸಫ್ ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ.

ಇದಕ್ಕೆ ಸಂಬAಧಿಸಿದAತೆ ಪಿ.ಎ ಯೂಸಫ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಇದೀಗ ತನಿಖೆ ಚುರುಕುಗೊಂಡ ಬೆನ್ನಲ್ಲೇ ಯೂಸಫ್ ಅವರಿಗೆ ಸೇರಿದ ಜಾಗದಲ್ಲಿ ಅಕ್ಟೋಬರ್ ೧೨ ರಿಂದ ಕೃಷಿ ಹೊಂಡ ನಿರ್ಮಾಣ ಮಾಡುವ ಕಾರ್ಯದಲ್ಲಿ ಗುತ್ತಿಗೆದಾರರು ತೊಡಗಿದ್ದು ಇದೀಗ ಕಾಮಗಾರಿ ಪೂರ್ಣಗೊಂಡಿರುವುದಾಗಿ ಯೂಸಫ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಇನ್ನುಳಿದಂತೆ ಕುಂಞÂ ಅಹಮ್ಮದ್, ಹಸೈನಾರ್, ಉಮ್ಮರ್, ಅಬೂಬಾಕರ್, ಹಂಸ, ಕೆ.ಮಮ್ಮದ್, ಬಶೀರ್ ಅಹಮದ್, ಯೂಸಫ್ ಶರೀಫ್ ಹಾಗೂ ಅಬ್ದುಲ್ ರೆಹಮಾನ್ ಅವರುಗಳಿಗೆ

(ಮೊದಲ ಪುಟದಿಂದ) ಮಂಜೂರಾದ ಕೃಷಿ ಹೊಂಡ ಕಾಮಗಾರಿಯ ಹೆಸರಿನಲ್ಲಿ, ಹೊಂಡ ಕಾಮಗಾರಿ ನಡೆಯದಿದ್ದರೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಬೇನಾಮಿ ಹೆಸರಿಗೆ ಚೆಕ್ ಮೂಲಕ ಹಣ ಪಾವತಿಸಿಕೊಂಡಿರುವುದಾಗಿ ಯೂಸಫ್ ಅವರು ಕೃಷಿ ಸಚಿವರಿಗೆ ದೂರು ನೀಡಿದ್ದಾರೆ.

ಮಾಹಿತಿ ಹಕ್ಕು ವಿವರ: ಹಾಲುಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎ. ಯೂಸಫ್ ಅವರು ಜನವರಿ ೭ ರಂದು ಮಾಹಿತಿ ಹಕ್ಕು ಅರ್ಜಿಯಲ್ಲಿ ಜಲಾನಯನ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಕೃಷಿ ಹೊಂಡ ಕಾಮಗಾರಿಯ ಬಗ್ಗೆ ಮಾಹಿತಿ ಕೋರಿದ್ದರು.

೨೦೧೪ನೇ ಸಾಲಿನಿಂದ ೨೦೧೯ನೇ ಸಾಲಿನಲ್ಲಿ ಹಾಲುಗುಂದ ಗ್ರಾಮದ ಯೂಸಫ್ ಹಾಗೂ ಕುಂಞ ಅಹಮ್ಮದ್ ಅವರಿಗೆ ಕೃಷಿ ಹೊಂಡ ನಿರ್ಮಿಸಿಕೊಟ್ಟಿರುವ ದಾಖಲಾತಿಗಳನ್ನು ಕೋರಿದ್ದರು. ಮಾಹಿತಿ ಹಕ್ಕು ಕಾಯ್ದೆಯಡಿ ಕೃಷಿ ಇಲಾಖೆ ಮಾಹಿತಿ ನೀಡಿದ್ದು, ಯೂಸಫ್ ಅವರಿಗೆ ಕೃಷಿ ಹೊಂಡವನ್ನು ತಾ. ೪.೭.೨೦೧೮ ರಿಂದ ೧೭.೭.೨೦೧೮ ಅವಧಿಯಲ್ಲಿ ನಿರ್ಮಾಣ ಮಾಡಿದಕ್ಕಾಗಿ ಚೆಕ್ ಸಂಖ್ಯೆ ೨೩೫೨೭೭ರಲ್ಲಿ ರೂ. ೪೯,೨೭೦ ಮಣಿಕಂಠ ಅವರ ಹೆಸರಿಗೆ ಪಾವತಿಸಲಾಗಿದೆ. ಅದೇ ರೀತಿ ಕುಂಞ ಅಹಮ್ಮದ್ ಅವರ ಹೆಸರಿನಲ್ಲಿ ಕೃಷಿ ಹೊಂಡಕ್ಕೆ ಮಂಜೂರಾದ ಮೊತ್ತ ರೂ. ೪೮,೭೮೪ ಚೆಕ್ಕು ಸಂಖ್ಯೆ ೨೩೫೨೭೭ ರಂತೆ ಆಶೀಫ್ ಎಂಬವರ ಹೆಸರಿಗೆ ವರ್ಗಾವಣೆಯಾಗಿದೆ.

ಈ ಎರಡೂ ಕೃಷಿ ಹೊಂಡಗಳ ಉಸ್ತುವಾರಿ ಜಲಾನಯನ ಅಭಿವೃದ್ಧಿ ಅಧಿಕಾರಿಗಳಾದ ಸಹಾಯಕ ಕೃಷಿ ಅಧಿಕಾರಿ ಶಿವಯ್ಯಗೌಡ ಹಾಗೂ ಕೃಷಿ ಸಹಾಯಕ ಚಂದ್ರಶೇಖರ್ ವಹಿಸಿಕೊಂಡಿದ್ದಾಗಿ ಮಾಹಿತಿ ಹಕ್ಕಿನ ಅರ್ಜಿ ಮೂಲಕ ಉತ್ತರ ದೊರೆತಿದೆ.

ಲೋಕಾಯುಕ್ತಕ್ಕೆ ದೂರು

ಮಾಹಿತಿ ಹಕ್ಕಿನಿಂದ ದೊರೆತ ಮಾಹಿತಿ ಅನ್ವಯ ಪಿ.ಎ ಯೂಸಫ್ ಹಾಗೂ ಕುಂಞ ಅಹಮ್ಮದ್ ಜುಲೈ ೩೦ ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಕೃಷಿ ಅಧಿಕಾರಗಳಾದ ಚಂದ್ರಶೇಖರ್ ಹಾಗೂ ಶಿವಯ್ಯಗೌಡ ಅವರ ವಿರುದ್ಧ ದೂರು ನೀಡಲಾಗಿದೆ.

ಇಂದು ಅಧಿಕಾರಿಗಳಿಂದ ಪರಿಶೀಲನೆ

ಲೋಕಾಯುಕ್ತಕ್ಕೆ ದೂರು ನೀಡಿರುವ ಹಿನ್ನೆಲೆ ಇಂದು ಲೋಕಾಯುಕ್ತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ದೂರುದಾರ ಯೂಸಫ್ ತಿಳಿಸಿದ್ದಾರೆ.