ಸೋಮವಾರಪೇಟೆ, ನ. ೨: ಕಳೆದ ೪ ದಶಕಗಳ ನಂತರ ಸೋಮವಾರ ಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಫಿಲ್ಟರ್ ಘಟಕ ಸಂಪೂರ್ಣವಾಗಿ ದುರಸ್ತಿ ಯಾಗುತ್ತಿದೆ. ಈ ಹಿಂದೆ ಸಣ್ಣಪುಟ್ಟ ಶುದ್ಧೀಕರಣ ಕಾರ್ಯಗಳು ನಡೆದಿದ್ದು, ಈ ಬಾರಿ ರೂ. ೨೯ ಲಕ್ಷ ವೆಚ್ಚದಲ್ಲಿ ಘಟಕವನ್ನು ಸಂಪೂರ್ಣ ವಾಗಿ ದುರಸ್ತಿಗೊಳಿಸಲಾಗುತ್ತಿದೆ.
ಕಳೆದ ೨೦ ದಿನಗಳಿಂದ ಫಿಲ್ಟರ್ ಹೌಸ್ನಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಕಾಮಗಾರಿ ಸಂಪೂರ್ಣ ವಾಗಿ ಮುಕ್ತಾಯವಾಗಲಿದೆ.
ಸೋಮವಾರಪೇಟೆ ಪಟ್ಟಣಕ್ಕೆ ಪ್ರಮುಖವಾಗಿ ದುದ್ದುಗಲ್ಲು ಹೊಳೆ ಹಾಗೂ ಹಾರಂಗಿಯಿAದ ಕುಡಿಯುವ ನೀರು ಸರಬರಾಜಾಗುತ್ತಿದೆ. ದುದ್ದುಗಲ್ಲು ಹೊಳೆಯಲ್ಲಿ ಚೆಕ್ಡ್ಯಾಂ ನಿರ್ಮಿಸಿ, ಹಾನಗಲ್ಲು ಬಳಿಯಲ್ಲಿ ಮೋಟಾರ್ ಪಂಪ್ ಅಳವಡಿಸಿ ಅಲ್ಲಿಂದ ಪಟ್ಟಣಕ್ಕೆ ನೀರನ್ನು ತರಲಾಗುತ್ತಿದೆ.
ಇದರೊಂದಿಗೆ ಹಾರಂಗಿಯಿAದ ನೀರು ತರಲಾಗುತ್ತಿದ್ದು, ಯಡವನಾಡು ಹಾಗೂ ಬೇಳೂರು ಬಾಣೆಯಲ್ಲಿ ಮೋಟಾರ್ ಪಂಪ್ ಅಳವಡಿಸ ಲಾಗಿದೆ. ಈ ಎರಡೂ ಹೊಳೆಯಿಂದ ಬರುವ ನೀರನ್ನು ಪಟ್ಟಣದ ಪಂಪ್ಹೌಸ್ನಲ್ಲಿ ಶುದ್ದೀಕರಿಸಿ ನಂತರ ಟ್ಯಾಂಕ್ಗಳಿಗೆ ತುಂಬಿ ಅಲ್ಲಿಂದ ಮನೆ, ಹೊಟೇಲ್ಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಕಳೆದ ೪ ದಶಕಗಳಿಂದಲೂ ಪಟ್ಟಣದ ಪಂಪ್ಹೌಸ್ನಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯ ನಡೆದಿದ್ದರೆ, ಇದೀಗ ರೂ. ೨೯ ಲಕ್ಷ ವೆಚ್ಚದಲ್ಲಿ ಸಂಪೂರ್ಣವಾಗಿ ಶುದ್ದೀಕರಣ ಕಾರ್ಯ ಕೈಗೊಳ್ಳಲಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿAದ ಲಭ್ಯವಾಗಿರುವ ಅನುದಾನ ಹಾಗೂ ಎಸ್ಎಫ್ಸಿ-೧೪ನೇ ಹಣಕಾಸು ಯೋಜನೆಯ ಹಣದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ.
ನೀರು ಸಂಗ್ರಹಣಾ ತೊಟ್ಟಿಗಳಲ್ಲಿ ಸಂಗ್ರಹವಾಗಿದ್ದ ಶಿಲ್ಟ್ಗಳನ್ನು ತೆಗೆದು ಹೊಸದಾಗಿ ಇಟ್ಟಿಗೆ, ಮರಳು, ಗುಜರಾತ್ನಿಂದ ತರಿಸಲಾದ ಪಾಲಿಶ್ ಫಿಲ್ಟರ್ ಮರಳನ್ನು ಹಾಕಲಾಗಿದೆ. ೫ ಹಂತಗಳಲ್ಲಿ ನೀರು ಶುದ್ಧೀಕರಣ ಗೊಂಡು ನಂತರ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.
ಇದರೊಂದಿಗೆ ನೀರು ಶುದ್ದೀಕರಣ ಘಟಕಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸುವ ಉದ್ದೇಶದಿಂದ ಮೇಲ್ಭಾಗದಲ್ಲಿ ಛಾವಣಿ ನಿರ್ಮಿಸಿ ಶೀಟ್ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಟ್ಯಾಂಕ್ ಸುತ್ತಮುತ್ತ ಶುಚಿತ್ವ ಕಾಪಾಡಿಕೊಂಡು ಸಣ್ಣ ಉದ್ಯಾನ ನಿರ್ಮಿಸಲು ಯೋಜನೆ ತಯಾರಿಸಲಾಗಿದೆ.
ಸದ್ಯ ಫಿಲ್ಟರ್ ಹೌಸ್ನ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಪಟ್ಟಣ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಯಿAದ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಫಿಲ್ಟರ್ ಹೌಸ್ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯ ಗೊಳ್ಳಲಿದ್ದು, ನಂತರ ಸಮಸ್ಯೆ ಬಗೆಹರಿಯಲಿದೆ ಎಂದು ಪ.ಪಂ. ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಗತಿಯಲ್ಲಿರುವ ಕಾಮಗಾರಿ ಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಉಪಾಧ್ಯಕ್ಷ ಬಿ. ಸಂಜೀವ, ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯ ನಿರೀಕ್ಷಕ ಜಾಸಿಮ್ ಖಾನ್ ಸೇರಿದಂತೆ ಸದಸ್ಯರುಗಳಾದ ಶೀಲಾ ಡಿಸೋಜ, ಶುಭಕರ್, ಮೋಹಿನಿ, ಬಿ.ಆರ್.ಮಹೇಶ್ ಅವರುಗಳು ಪರಿಶೀಲನೆ ನಡೆಸಿ, ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಸಂಬAಧಿಸಿದ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
- ವಿಜಯ್