ಸೋಮವಾರಪೇಟೆ, ನ. ೨: ಶಿಟಾರಿಯೊ ಸ್ಫೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಲೊಯೊಲಾ ಕಾಲೇಜು ಸಭಾಂಗಣದಲ್ಲಿ ನಡೆದ ೧೦ನೇ ರಾಷ್ಟç ಮಟ್ಟದ ದಕ್ಷಿಣ ಭಾರತ ಆಲ್ ಸ್ಟೆöÊಲ್ ಕರಾಟೆ, ಕುಂಗ್ಪೂ ಓಪನ್ ಚಾಂಪಿಯನ್ಶಿಪ್ನ ೧೦ ವರ್ಷದೊಳಗಿನ ಬಾಲಕಿಯರ ಕುಮಿತೆ ವಿಭಾಗದಲ್ಲಿ ಬಜೆಗುಂಡಿ ಗ್ರಾಮದ ಪಿ.ಎಲ್. ಇಬ್ಬನಿ ದ್ವಿತೀಯ ಹಾಗೂ ಕತಾ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾಳೆ.
ಪಟ್ಟಣ ಸಮೀಪದ ಬಜೆಗುಂಡಿ ಗ್ರಾಮದ ಪಿ.ಎ. ಲೋಕೇಶ್ ಹಾಗೂ ನಯನ ದಂಪತಿಗಳ ಪುತ್ರಿಯಾಗಿರುವ ಈಕೆ ೨೦೧೮ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಷ್ಟಿçÃಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದಳು. ನೃತ್ಯಗಾರ್ತಿಯೂ ಆಗಿರುವ ಈಕೆ, ರಾಮನಾಥಪುರ ದಕ್ಷಿಣ ಕಾಶಿ ವಿದ್ಯಾಸಂಸ್ಥೆಯಲ್ಲಿ ೬ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕಳೆದ ಆರು ವರ್ಷಗಳಿಂದ ಫೃಥ್ವಿರಾಜ್ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾಳೆ.