* ಸಿದ್ದಾಪುರ, ನ. ೨: ಮೊನ್ನೆ ತಾನೆ ಅಮ್ಮ ಸಾವನ್ನಪ್ಪಿದ ದುಃಖದ ನಡುವೆ ಅಮ್ಮನ ಶುದ್ಧಕಾರ್ಯ ನೆರವೇರಿಸಲು ಅಣಿಯಾಗುತ್ತಿದ್ದ ಮಗ ಕೂಡ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ ಮನಕಲಕುವ ಘಟನೆ ಸಂಭವಿಸಿದೆ.

ಮೂಲತಃ ಅವಂದೂರು ನಿವಾಸಿ, ಮಡಿಕೇರಿಯ ಅಪ್ಪಚ್ಚಕವಿ ರಸ್ತೆಯಲ್ಲಿ ನೆಲೆಸಿದ್ದ, ಏಲಕ್ಕಿ ಸಹಕಾರ ಸಂಘದ ನಿವೃತ್ತ ಉದ್ಯೋಗಿ ಕಾಳೇರಮ್ಮನ ಚಂದ್ರಾವತಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಕಳೆದ ನಾಲ್ಕು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಇವರಿಗೆ ಈರ್ವರು ಪುತ್ರರಿದ್ದು, ಓರ್ವ ಪುತ್ರ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮತ್ತೋರ್ವ ಪುತ್ರ ಮಧು (೫೪) ಮನೆಯಲ್ಲೇ ತಾಯಿಯ ಸೇವೆ ಮಾಡಿಕೊಂಡಿದ್ದರು. ಅನಾರೋಗ್ಯದಿಂದ ತಾಯಿ ಮೊನ್ನೆ ದಿನ ನಿಧನರಾದರು. ಸಂಪ್ರದಾಯದAತೆ ತಾಯಿಯ ಶುದ್ಧ ಕಾರ್ಯ ತಾ. ೩ ರಂದು (ಇಂದು) ನೆರವೇರಬೇಕಿತ್ತು. ಈ ಸಂಬAಧ ತಯಾರಿ ಮಾಡಿಕೊಂಡಿದ್ದ ಮಧು ಇಂದು ಮಧ್ಯಾಹ್ನ ಮನೆಯಲ್ಲಿ ನೆಂಟರಿಷ್ಟರೊAದಿಗೆ ಊಟ ಮಾಡಿ, ಸೋಫಾದಲ್ಲಿ ಕುಳಿತು ಮಾತನಾಡಿಕೊಂಡಿದ್ದರು. ಇದ್ದಕ್ಕಿದ್ದಂತೆ ಕುಳಿತಲ್ಲಿಯೇ ಕುಸಿದು ಬಿದ್ದವರನ್ನು ಆಸ್ಪತ್ರೆಗೆ ಸಾಗಿಸಿ ಪರೀಕ್ಷಿಸಲಾಗಿ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವದು ದೃಢಪಟ್ಟಿದೆ. ತಾಯಿಯ ಕಾರ್ಯ ನೆರವೇರಿಸಬೇಕಿದ್ದ ಮಗ ಕೂಡ ವಿಧಿಯಾಟಕ್ಕೆ ಬಲಿಯಾಗಿರುವುದು ಕುಟುಂಬದಲ್ಲಿ ದುಃಖದ ಮಡುವನ್ನು ಇಮ್ಮಡಿಗೊಳಿಸಿದೆ. - ಅಂಚೆಮನೆ ಸುಧಿ