ಭಾಗಮಂಡಲ, ನ. ೧: ಸುಮಾರು ೪೧ ವರ್ಷಗಳ ಹಿಂದೆ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಒಟ್ಟುಗೂಡಿದರು. ತಮ್ಮ ಕಷ್ಟ-ಸುಖಗಳನ್ನು ಹಂಚಿಕೊAಡರು. ವೃತ್ತಿ ಜೀವನದ ಅನುಭವಗಳನ್ನು ತೆರೆದಿಟ್ಟರು. ವಿದ್ಯಾರ್ಥಿ ಜೀವನದ ಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಂಡರೆ ಮತ್ತೆ ಕೆಲವರು ತಮ್ಮ ಆಪ್ತರನ್ನು ಕಳೆದುಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಬಗ್ಗೆ ಅಳಲು ತೋಡಿಕೊಂಡು ದುಃಖತಪ್ತರಾದರು. ಸಾಂತ್ವನ ಹೇಳಿಕೊಂಡರು. ಉನ್ನತ ಹುದ್ದೆಯಲ್ಲಿ ದ್ದವರಿಗೆ ಶುಭ ಹಾರೈಸಿದರು; ವಿದೇಶದಲ್ಲಿ ದುಡಿಯುತ್ತಿದ್ದವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸುಂದರ ಸಮ್ಮಿಲನ ಕಾರ್ಯಕ್ರಮ ಗ್ರಾಮದಲ್ಲಿ ನಡೆದು ಹಳೆಯ ವಿದ್ಯಾರ್ಥಿಗಳ ಸಮಾಗಮಕ್ಕೆ ಸಾಕ್ಷಿಯಾಯಿತು.

ನೆನಪುಗಳನ್ನು ಹಂಚಿಕೊAಡರು.

ಈ ಸಂದರ್ಭ ಉನ್ನತ ಹುದ್ದೆಯನ್ನು ಅಲಂಕರಿಸಿದವರನ್ನು ಸನ್ಮಾನಿಸಲಾಯಿತು. ಕಷ್ಟದಲ್ಲಿರುವವರಿಗೆ ನೆರವು ನೀಡಲು ನಿರ್ಧರಿಸಲಾಯಿತು. ಸುಮಾರು ೨೬ ಮಂದಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರೆ, ಇಬ್ಬರು ವಿದೇಶದಿಂದ ವಿಡಿಯೋ ಕಾಲ್ ಮೂಲಕ ಭಾಗಿಯಾಗಿ ಅನುಭವವನ್ನು ಹಂಚಿಕೊAಡರು. ಕಷ್ಟದಲ್ಲಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ಗುಂಪು ಕಾರ್ಯಾಚರಿಸಲಿದೆ ಎಂದು ಆಯೋಜಕರು ತಿಳಿಸಿದರು. ಅವರನ್ನು ಗುಂಪಿನ ಸದಸ್ಯರು ಸನ್ಮಾನಿಸಿದರು. ಮಾದೇಯಂಡ ರಾಜ, ಬಾಳೆಯಡ ಸದಾ, ಕೈಬುಲಿರ ಲೈಲಾ, ಬಾಳೆಯಡ ಟಿಟ್ಟು ನೆನಪಿನ ಕಾಣಿಕೆ ನೀಡಿದರು. ಒಟ್ಟಿನಲ್ಲಿ ಸರಳವಾಗಿ ಸುಂದರವಾಗಿ ನಡೆದ ಸಮಾರಂಭ ಅಪರೂಪದ ಸಮ್ಮಿಲನ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು.

-ಸುನಿಲ್ ಕುಯ್ಯಮುಡಿ