ಮಡಿಕೇರಿ, ನ. ೧: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿ ಮ್ಯಾನ್ಸ್ ಕಾಂಪೌAಡ್ ಬಳಿಯ ಮೈದಾನದಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಯಿತು. ಈ ಹಿಂದೆ ರಾಜ್ಯೋತ್ಸವ ದಿನದಂದು ಸಿ.ಎನ್.ಸಿ ಸದಸ್ಯರು ‘ನವದೆಹಲಿ ಚಲೋ’ ಮೂಲಕ ನವದೆಹಲಿಗೆ ತೆರಳಿ ಸಂಫಟನೆಯ ಬೇಡಿಕೆಗಳನ್ನು ಸಲ್ಲಿಸಲಾಗುತ್ತಿತ್ತು. ಕೋವಿಡ್ ಹಿನ್ನೆಲೆ ಇಂದು ಮಡಿಕೇರಿಯಲ್ಲಿಯೇ ಸಂಘಟನೆಯ ಬೇಡಿಕೆಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ ಒದಗಿಸಬೇಕು, ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂಬಿತ್ಯಾದಿ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಕೋವಿ ಹಕ್ಕು ವಿನಾಯಿತಿಯನ್ನು ಶಾಶ್ವತವಾಗಿ ಮುಂದುವರಿಸಬೇಕೆAಬುದಾಗಿಯೂ ಈ ಸಂದರ್ಭ ಒತ್ತಾಯಿಸಲಾಯಿತು. ಸಿ.ಎನ್.ಸಿ ಅಧ್ಯಕ್ಷ ನಂದಿನೆರವAಡ ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಕಲಿಯಂಡ ಪ್ರಕಾಶ, ಬಾಚರಣಿಯಂಡ ಚಿಪ್ಪಣ್ಣ, ನಂದಿನೆರವAಡ ಪಾರ್ವತಿ ನಾಚಪ್ಪ, ಕಲಿಯಂಡ ಮೀನ, ನಂದಿನೆರವAಡ ನಿಶಾ, ಅರೆಯಡ ಗಿರೀಶ್, ಮಂದಪAಡ ಮನೋಜ್ ಮಂದಣ್ಣ, ಪುತ್ತಿಚಂಡ ಡಾನ್, ಚೋಲಪಂಡ ನಾಣಯ್ಯ, ಇತರರು ಪಾಲ್ಗೊಂಡಿದ್ದರು.
ರ್ಯಾಲಿ : ಚೇತನ್ - ನಿಖಿಲ್ ರನ್ನರ್ ಅಪ್