ಸೋಮವಾರಪೇಟೆ, ನ. ೧: ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆದ ತಾಲೂಕು ವಿಶ್ವಕರ್ಮ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಮಾಜದ ಅಧ್ಯಕ್ಷ ಕೆ.ಕೆ. ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷ ರನ್ನಾಗಿ ಎಸ್.ಬಿ. ಯಶ್ವಂತ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಯಾಗಿ ಎನ್.ಪಿ. ರಾಜು ಅವರುಗಳನ್ನು ಆಯ್ಕೆಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಎಸ್.ಡಿ. ದೇವದಾಸ್, ತಾಲೂಕು ಗೌರವಾಧ್ಯಕ್ಷ ಎಸ್.ಬಿ. ಲೀಲಾರಾಂ, ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಿ ದೇವದಾಸ್, ಪದಾಧಿಕಾರಿಗಳಾದ ಶೋಭಾ ಯಶ್ವಂತ್, ವಸಂತಿ ಲೀಲಾರಾಂ ಮತ್ತಿತರರು ಇದ್ದರು.