ನಾಪೋಕ್ಲು, ನ.೧ : ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಂದೋಡ ಗ್ರಾಮದಲ್ಲಿ ಬೆಳೆದು ನಿಂತ ಭತ್ತದ ಬೆಳೆಗೆ ಕಾಡಾನೆ ಮತ್ತು ಕಾಡುಹಂದಿಗಳ ಹಾವಳಿಯಿಂದ ಅಪಾರ ಬೆಳೆ ನಷ್ಟವಾಗಿದೆ ಎಂದು ಈ ಗ್ರಾಮದ ಪಂಚಾಯತ್ ಸದಸ್ಯ ಚೊಯಮಾಡಂಡ ಹರಿ ಮೊಣ್ಣಪ್ಪ ಅವರು ತಿಳಿಸಿದ್ದಾರೆ.
ನಿರಂತರ ಕಾಡಾನೆಗಳು ಮತ್ತು ಕಾಡುಹಂದಿಗಳು ಹಿಂಡು ಹಿಂಡಾಗಿ ಬಂದು ಬೆಳೆಯನ್ನು ತಿಂದು ತುಳಿದು ಗದ್ದೆಯಲ್ಲಿ ಓಡಾಡಿ ಅಪಾರ ನಷ್ಟವನ್ನುಂಟು ಮಾಡಿದೆ. ಹೇಗೋ ಕಷ್ಟ ಪಟ್ಟು ಬೆಳೆಯನ್ನು ಬೆಳೆದರೂ ಈಗ ಕದಿರು ಬರುವ ಸಮಯ ಈ ರೀತಿಯಾಗಿದ್ದು ಕೈ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗಿದೆ ಎಂದು ನೊಂದು ನುಡಿಯುತ್ತಾರೆ ಹರಿ ಮೊಣ್ಣಪ್ಪ. ಸರಕಾರ ಕೂಡಲೇ ಇವರಿಗೆ ಪರಿಹಾರ ಒದಗಿಸ ಬೇಕು ಇಲ್ಲದಿದ್ದರೆ ಮುಂದೆ ಈ ಭಾಗದಲ್ಲಿ ಯಾರೂ ಬೆಳೆಯನ್ನು ಬೆಳೆಯಲು ಮುಂದೆ ಬರಲಾರದು ಆದುದರಿಂದ ಸಂಬAಧಿಸಿದ ಅರಣ್ಯ ಇಲಾಖೆಯವರು ಆದ ನಷ್ಟಕ್ಕೆ ಕೂಡಲೇ ಪರಿಹಾರವನ್ನು ಒದಗಿಸಿಕೊಟ್ಟು ಬೆಳೆಗಾರರನ್ನು ಕಾಪಾಡ ಬೇಕೆಂದು ಈ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.