ವೀರಾಜಪೇಟೆ, ನ. ೧: ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೦-೨೧ನೇ ಸಾಲಿನಲ್ಲಿ ಒಟ್ಟು ರೂ. ೨೫.೨೯ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತAಡ ಸಿ. ಸುಬ್ಬಯ್ಯ ತಿಳಿಸಿದರು.

ಅಮ್ಮತ್ತಿ ಒಂಟಿಯAಗಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆದ ಸಂಘದ ೪೦ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸದಸ್ಯರಿಗೆ ಶೇ. ೧೫ರ ಡಿವಿಡೆಂಡ್ ನೀಡಲಾಗುವುದು ಎಂದರು. ಸಂಘದಲ್ಲಿ ಒಟ್ಟು ೧೪೫೦ ಸದಸ್ಯರಿದ್ದು, ಪಾಲು ಬಂಡವಾಳ ರೂ. ೮೦.೧೨ ಲಕ್ಷ ಆಗಿದೆ. ಸಂಘದಲ್ಲಿ ಕೆಸಿಸಿ ಕೃಷಿ ಸಾಲ, ಸ್ವ-ಸಹಾಯ ಗುಂಪು ಸಾಲ, ವ್ಯಾಪಾರ ಸಾಲ, ಜಾಮೀನು ಸಾಲ, ಆಭರಣ ಸಾಲ, ಜಂಟಿ ಭಾದ್ಯತಾ ಗುಂಪು ಸಾಲ, ನಿತ್ಯ ನಿಧಿ ಠೇವಣಿ ಸಾಲ, ನಿರಖು ಠೇವಣಿ ಸಾಲ ಹಾಗೂ ಸಂಬಳಾಧಾರಿತ ಸಾಲ ಸೇರಿ ಒಟ್ಟು ರೂ. ೭೫೨.೧೮ ಲಕ್ಷಗಳ ಸಾಲ ವಿತರಿಸಲಾಗಿದೆ. ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೪,೮೫೯.೭೫ ಲಕ್ಷಗಳ ವ್ಯವಹಾರ ನಡೆಸಿದ್ದು, ದುಡಿಯುವ ಬಂಡವಾಳವು ರೂ. ೧,೨೭೮.೯೨ ಲಕ್ಷ ಆಗಿದೆ ಎಂದು ತಿಳಿಸಿದರು.

ಸಂಘದ ಸದಸ್ಯರು ಸಂಘದಲ್ಲಿ ವ್ಯವಹರಿಸುವ ಮೂಲಕ ತಮ್ಮಲ್ಲಿರುವ ಹಣವನ್ನು ಸಂಘದಲ್ಲಿ ಠೇವಣಿ ನೀಡುವ ಮೂಲಕ ಸಂಘಕ್ಕೆ ಬಂಡವಾಳ ಕ್ರೋಢೀಕರಿಸಲು ಮತ್ತು ಸದಸ್ಯರುಗಳು ಸಂಘದಲ್ಲೇ ಮಾರಾಟ ಮಾಡುತ್ತಿರುವ ರಸಗೊಬ್ಬರ, ಹತ್ಯಾರು ಇತ್ಯಾದಿಗಳನ್ನು ನಮ್ಮಲ್ಲಿಯೇ ಖರೀದಿಸಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂತೆ ಕೋರಿದರು.

ನಿರ್ದೇಶಕರುಗಳಾದ ಬೊಪ್ಪಂಡ ಪಿ. ಗಣಪತಿ, ಅಪ್ಪಾರಂಡÀ ಎಂ. ಕಾರ್ಯಪ್ಪ, ಕೊಪ್ಪಡ ಎಂ. ಗಣೇಶ್, ಕೆ.ಎಸ್. ದಿನೇಶ್, ಜಿಲ್ಲಂಡ ಸಿ. ಉತ್ತಪ್ಪ, ಪಿ.ಎ. ಮಂಜುನಾಥ, ವಿ.ಆರ್. ಪ್ರಭಾವತಿ, ಹೆಚ್. ತಮ್ಮಯ್ಯ, ಸಂಘದ ಮೇಲ್ವಿಚಾರಕ ಶಂಕರ ಸಿ. ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾತಂಡ ಡಿ. ಭೀಮಯ್ಯ ಉಪಸ್ಥಿತರಿದ್ದರು. ಉಪಾಧ್ಯಕ್ಷ ಹರೀಶ್ ಸ್ವಾಗತಿಸಿ, ನಿರ್ದೇಶಕ ಪೊರ್ಕೊಂಡ ಸವಿತಾ ವಂದಿಸಿದರು.