*ಗೋಣಿಕೊಪ್ಪ, ನ. ೧: ಆಸ್ತಿ ವಿಚಾರದಲ್ಲಿ ಕುಟುಂಬದ ಒಳಗೆ ನಡೆದ ಕಲಹಕ್ಕೆ ನೊಂದು ತಿತಿಮತಿ-ಭದ್ರಗೊಳ ಗ್ರಾಮದ ನಿವಾಸಿ ಈರಪ್ಪ (೭೦) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ಸಾಯುವ ಮುನ್ನ ಪೊಲೀಸರಿಗೆ ನೀಡಿದ್ದ ಹೇಳಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದ್ದು, ಸಹಜ ಸಾವು ಎಂದು ಬಿಂಬಿಸಲಾಗಿದ್ದ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ.
ಹಲವು ವರ್ಷಗಳಿಂದ ಈರಪ್ಪ ಹಾಗೂ ರಾಮಕೃಷ್ಣ ಅವರ ನಡುವೆ ಆಸ್ತಿಗೆ ಸಂಬAಧಿಸಿದAತೆ ವಿವಾದಗಳು ಸೃಷ್ಟಿಯಾಗುತ್ತಿತ್ತು. ಈ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೇ ದೂರು ದಾಖಲಾಗಿತ್ತು. ನಂತರವೂ ನಿರಂತರವಾಗಿ ನಡೆದ ಆಸ್ತಿ ಕಲಹದಿಂದ ಮನನೊಂದು ಈರಪ್ಪ ಅವರು ಕಳೆನಾಶಕ ಔಷಧಿಯನ್ನು ಸೇವಿಸಿದ್ದಾರೆ. ಈರಪ್ಪ ಅವರನ್ನು ಪ್ರಥಮ ಚಿಕಿತ್ಸೆಗಾಗಿ ಲೋಪಮುದ್ರಾ ಆಸ್ಪತ್ರೆಗೆ ದಾಖಲಿಸಿದ ಸಂದರ್ಭ ಈರಪ್ಪ ಅವರು ಪೊಲೀಸ್ ಹೇಳಿಕೆಯಲ್ಲಿ ನನ್ನನ್ನು ಸಾವಿಗೆ ದೂಡುವ ಪರಿಸ್ಥಿಗೆ ತಂದವರು ರಾಮಕೃಷ್ಣ ಎಂದು ಹೇಳಿಕೆ ನೀಡಿದ್ದಾರೆ. ನಂತರ ಕೆಲ ಸಮಯದಲ್ಲೇ ಈರಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವೃತ್ತನಿರೀಕ್ಷಕ ಜಯರಾಮ್ ಅವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ರಾಮಕೃಷ್ಣ ಅವರ ಮೇಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ ೩೦೬ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.