ಮಡಿಕೇರಿ, ಅ. ೩೧: ಮಂಗಳೂರಿನಿAದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ (ಕೆ.ಎ.೫೧ ಬಿ. ೨೪೭೩) ಬ್ರೇಕ್‌ವಿಫಲಗೊಂಡ ಪರಿಣಾಮ ಬೋಯಿಕೇರಿ ಯ ಖಾದರ್ ಎಂಬವರ ಅಂಗಡಿ ಗೆ ಅಪ್ಪಳಿಸಿದ್ದು, ಚಾಲಕ ಸೇರಿದಂತೆ ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಈ ನಡುವೆ ಅವಘಡ ಸಂಭವಿಸಿದ್ದನ್ನು ವೀಕ್ಷಿಸಲು ತೆರಳಿದ್ದ ಸ್ಥಳೀಯರಾದ ಕೆ.ಆರ್. ಚಂದ್ರಶೇಖರ್ ಎಂಬವರ ಕಾಲಿಗೆ ಅಂಗಡಿಯ ತುಂಡಾದ ಗೋಡೆ ಬಿದ್ದು, ಪೆಟ್ಟಾಗಿದ್ದು, ಸುಳ್ಯ ಆಸ್ಪತ್ರೆಗೆ ಸಾಗಿಸಲಾಗಿದೆ.