ನಾಪೋಕ್ಲು, ಅ. ೩೧ : ಕೊಳಕೇರಿ ನಿವಾಸಿ ಕುಂಡ್ಯೋಳAಡ ಸಂಪತ್ ದೇವಯ್ಯ ಎಂಬವರ ತೋಟದಲ್ಲಿನ ಫಸಲು ಬರುವ ಕರಿಮೆಣಸು

ಬಳ್ಳಿಗಳನ್ನು ಯಾರೋ ದುಷ್ಕರ್ಮಿಗಳು ಕಡಿದು ನಷ್ಟ ಉಂಟು ಮಾಡಿದ್ದು ಫಸಲು ಬರುವ ಬಳ್ಳಿ ಒಣಗಿರುವುದಾಗಿ ಸಂಪತ್ ದೇವಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ವಾರ ತಾನು ಬೆಂಗಳೂರಿಗೆ ತೆರಳಿದ್ದ ಸಂದರ್ಭ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.