ಚಿಕ್ಕಮಗಳೂರಿನಿಂದ ಬೇಲೂರಿಗೆ ಸಾಗುವ ರಸ್ತೆಯಲ್ಲಿ ದೊಡ್ಡದೊಂದು ಕಮಾನು. ಹಲ್ಮಿಡಿ ಗ್ರಾಮಕ್ಕೆ ಸ್ವಾಗತ ಎಂಬ ಬರಹ ಕಣ್ಣಿಗೆ ಕಾಣುತ್ತದೆ. ಅರೇ.. ಇದು ಅದೇ ಹಲ್ಮಿಡಿಯ ಎಂದು ಮುಖ್ಯರಸ್ತೆಯಿಂದ ೬ ಕಿ.ಮೀ. ದೂರದ ಗ್ರಾಮಕ್ಕೆ ತೆರಳಿದರೆ ಅಲ್ಲಿ ಕಂಗೊಳಿಸುವುದೇ ಕನ್ನಡದ ಅಪೂರ್ವ ಶಾಸನಗಳ ಖಜಾನೆಯ ಸಂಗ್ರಹ.

ಹಲ್ಮಿಡಿ ಎಂಬ ಗ್ರಾಮದಲ್ಲಿ ಇದೆ ಕನ್ನಡದ ಮೊದಲ ಶಿಲಾಶಾಸನ. ಹಾಸನ ಜಿಲ್ಲೆಗೆ ಸೇರಿದ ಹಲ್ಮಿಡಿಯಲ್ಲಿರುವ ಶಾಸನಗಳ ಸಂಗ್ರಹದ ಸ್ಥಳ ಸಂಶೋಧಕರು, ಪ್ರವಾಸಿಗರ ವೀಕ್ಷಣೆಯ ತಾಣವಾಗಿದೆ. ೧,೨೦೦ ಗ್ರಾಮಸ್ಥರಿರುವ ಹಲ್ಮಿಡಿ ಶಿಲಾಶಾಸನದ ಮೂಲಕವೇ ಗಮನ ಸೆಳೆದಿದೆ.

ಕದಂಬರ ಕಾಲದಲ್ಲಿಯೂ ಸಿರಿ ಕನ್ನಡ ಬಳಕೆಯಲ್ಲಿತ್ತು ಎಂಬುದಕ್ಕೆ ಮಹತ್ವದ ಸಾಕ್ಷಿ ನೀಡಿದ್ದೇ ಹಲ್ಮಿಡಿ ಶಾಸನ. ಕ್ರಿ.ಶ. ೪೫೦ ರಲ್ಲಿ ಹಲ್ಮಿಡಿ, ಮುಗಳವಳ್ಳಿ, ಅಲುವಳ್ಳಿ ಗ್ರಾಮಗಳನ್ನು ಗೆಲುವಿನ ಸಂಕೇತವಾಗಿ ವಿಜಯನಗರದ ರಾಜರಿಗೆ ಬಳವಳಿಯಾಗಿ ನೀಡಿದ್ದ ಉಲ್ಲೇಖ ಈ ಶಾಸನದಲ್ಲಿದೆ

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮದಲ್ಲಿ ದೊರೆತ ಕನ್ನಡ ಭಾಷೆಯ ಪ್ರಾಚೀನ ಶಾಸನ, ಕ್ರಿ.ಶ. ೪೫೦ಕ್ಕೆ ಸೇರಿದ ಈ ಶಾಸನವನ್ನು ೧೯೩೦ರ ಸುಮಾರಿಗೆ ಪತ್ತೆಹಚ್ಚಲಾಯಿತು. ಅನಂತರ ಶಾಸನವನ್ನು ಬೆಂಗಳೂರಿನ ಜಯಚಾಮರಾಜೇಂದ್ರ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ ರಕ್ಷಿಸಿಡಲಾಗಿದೆ. ಇದರ ಪ್ರತಿಕೃತಿ ಶಿಲೆ ಪ್ರಸ್ತುತ ಹಲ್ಮಿಡಿ ಗ್ರಾಮದಲ್ಲಿ ಕಂಡುಬರುತ್ತದೆ. ಇದರೊಂದಿಗೆ ಮತ್ತಷ್ಟು ಪ್ರಾಚೀನ ಕಾಲದ ಶಿಲಾಶಾಸನಗಳು ಹಲ್ಮಿಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿರುವ ಸಂಗ್ರಹಾಲಯದಲ್ಲಿ ಭದ್ರವಾಗಿದೆ.

ಹಲ್ಮಿಡಿಯಲ್ಲಿ ದೊರಕಿದ ಕನ್ನಡದ ಮೊದಲ ಶಾಸನಶಿಲೆಯ ಎತ್ತರ ೪ ಅಡಿ, ಅಗಲ ೧ ಅಡಿ, ದಪ್ಪ ೯ ಅಂಗುಲ ಇದೆ. ಇದರಲ್ಲಿ ಮೂರು ಭಾಗಗಳಿವೆ-ಕೆಳಗಣ ಭಾಗ ಹಾಸುಗಲ್ಲಿನ ಗುಡಿಗೆ ಸಿಕ್ಕಿಸಲು ಕೆತ್ತಿರುವ ಪಾದಭಾಗ; ನಯಗೊಳಿಸಿರುವ ಕಂಬದ ಭಾಗ, ಕಂಬದ ಮೇಲೆ ಕಮಾನಿನ ಆಕಾರ ಹೊಂದಿರುವ ಶಿರಭಾಗ, ಶಿರಭಾಗದಲ್ಲಿ ೭ ಅಂಗುಲ ಅಗಲವಿರುವ ಚಕ್ರದ ಕೆತ್ತನೆ ಇದೆ. ಇದರ ಸುತ್ತ ತುಂಡರಿಸಿರುವ ಶ್ಲೋಕದಿಂದ ಅದು ಸುದರ್ಶನ ಚಕ್ರದ ಶಿಲ್ಪವೆಂದು ತಿಳಿಯುತ್ತದೆ, ಶಾಸನಕ್ಕೆ ಬಳಸಿದ ಶಿಲೆ ಒಂದು ಬಗೆಯ ಹಿಟ್ಟುಗಲ್ಲು, ೨೫ ಕನ್ನಡ ಪದಗಳು ಮೊದಲ ಶಾಸನದಲ್ಲಿ ಕಂಡುಬರುತ್ತದೆ.

ಶಾಸನ ಮುಖದಲ್ಲಿ ೧೫ ಸಾಲುಗಳಿವೆ; ೧೬ನೆಯ ಸಾಲನ್ನು ಬಲಭಾಗದಲ್ಲಿ ತುಂಡರಿಸಿದೆ. ಇಲ್ಲಿನ ಲಿಪಿ ಶಾತವಾಹನ ಕಾಲದ ಗುಹಾಲಿಪಿ ಮತ್ತು ಕದಂಬರ ಕಾಲದ ತಾಳಗುಂದ ಶಾಸನದ ಲಿಪಿಗಳನ್ನು ಆಗಿನ ಕನ್ನಡದ ಶಾಸನ ಇದು!

‘‘ಜಯತಿ ಶ್ರೀ ಪರಿಷ್ವರ್ಙ್ಗ ಶ್ಯಾರ್ಙ್ಗ [ವ್ಯಾ]ನತಿರ್ ಅಚ್ಯುತಃ ದಾನಕ್ಷೆರ್ ಯುಗಾನ್ತಾಗ್ನಿಃ [ಶಿಷ್ಟಾನಾನ್ತು ಸುದರ್ಶನಃ ನಮಃ ಶ್ರೀಮತ್ ಕದಂಬಪನ್ ತ್ಯಾಗ ಸಂಪನ್ನನ್ ಕಲಭೋ[ನಾ] ಅರಿ ಕಕುಸ್ಥಭಟ್ಟೋರನ್ ಆಳೆ ನರಿದಾವಿ[ಳೆ] ನಾಡುಳ್ ಮೃಗೇಶನಾಗೇನ್ದ್ರಾಭೀಳರ್ ಭ್ಭಟಹರಪ್ಪೋರ್ ಶ್ರೀ ಮೃಗೇಶ ನಾಗಾಹ್ವಯರ್ ಇರ್ವ್ವರಾ ಬಟರಿ ಕುಲಾಮಲ ವ್ಯೋಮತಾರಾಧಿನಾಥನ್ ಅಳಪ ಗಣ ಪಶುಪತಿಯಾ ದಕ್ಷಿಣಾಪಥ ಬಹುಶತಹವನಾಹವದು[ಳ್] ಪಶುಪ್ರದಾನ ಶೌರ್‌ಯ್ಯೋದ್ಯಮ ಭರಿತೋ[ನ್ದಾನ] ಪಶುಪತಿಯೆನ್ದು ಪೊಗೞೆಪ್ಪೊಟ್ಟಣ ಪಶುಪತಿ ನಾಮಧೇಯನ್ ಆಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ ಸೇನ್ದ್ರಕ ಬಣೋಭಯ ದೇಶದಾ ವೀರಪುರುಷಸಮಕ್ಷದೆ ಕೇಕಯ ಪಲ್ಲವರಂ ಕಾದೆ¾ದು ಪೆತ್ತಜಯನಾ ವಿಜ ಅರಸಂಗೆ ಬಾಳ್ಗ¿ï‌ಚು ಪಲ್ಮಡಿಉಂ ಮೂೞುವಳ್ಳಿಉಂ ಕೊಟ್ಟಾರ್ ಬಟಾರಿ ಕುಲದೊನಳ ಕದಂಬನ್ ಕ¿ï‌ದೋನ್ ಮಹಾಪಾತಕನ್ ಸ್ವಸ್ತಿ ಭಟ್ಟಗ್ಗೀðಗ¿ï‌ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕರ...’’

ವಿಷ್ಣುಸ್ತುತಿಯಿಂದ ಪ್ರಾರಂಭವಾಗುವ ಶಾಸನ ಕದಂಬದೊರೆ ಕಕುಸ್ಥವರ್ಮನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಸೇಂದ್ರೀಕ ಮತ್ತು ಬಾಣ ಸೈನ್ಯದಿಂದ ಕೂಡಿದ ಕದಂಬರಿಗೂ ಕೇಕಯ ಸೈನ್ಯಸಹಿತವಾದ ಪಲ್ಲವರಿಗೂ ಯುದ್ಧವೊಂದು ನಡೆಯಿತು. ಅದರಲ್ಲಿ ಎಲ್ಲಭಟರಿಯ ಮಗನಾದ ವಿಜರನ ಕದಂಬರ ಪರ ಹೋರಾಡಿ ಪಲ್ಲವರನ್ನು ಸೋಲಿಸಿದ. ಆಗ ನರಿದಾವಿಳೆನಾಡಿನ ಇಬ್ಬರು ಅಧಿಕಾರಿಗಳಾದ ಮೃಗೇಶ ಮತ್ತು ನಾಗ ಎಂಬುವರು ವಿಜರಸನಿಗೆ ಹಲ್ಮಿಡಿ ಮತ್ತು ಮೂವಳ್ಳಿ ಎಂಬ ಎರಡು ಗ್ರಾಮಗಳನ್ನು ಕೊಡುಗೆಯಾಗಿ ನೀಡಿದರು. ಇದು ಹಲ್ಮಿಡಿ ಶಾಸನದ ಸಾರ,. . ಎರಿದು, ಕೊಟ್ಟಾರ್, ಅದಾನ್ ಮೊದಲಾದ ಪದಗಳು ಇದರ ಭಾಷೆ "ಪೂರ್ವದ ಹಳೆಗನ್ನಡ" ಎಂಬುದನ್ನು ಸೂಚಿಸುತ್ತವೆ.

ನಾಡಿನ ಸಂಸ್ಕೃತಿಯ ಹಿರಿಮೆಯ ಹಾಗೂ ಪ್ರಾಚೀನತೆಯ ಪ್ರತೀಕವಾಗಿರುವ ಹಲ್ಮಿಡಿ ಶಾಸನದ ಪ್ರತಿಕೃತಿಯೊಂದನ್ನು ಮಾಡಿಸಿ ಹಲ್ಮಿಡಿ ಗ್ರಾಮದಲ್ಲಿ ಇತ್ತೀಚೆಗೆ ಸ್ಥಾಪಿಸಲಾಗಿದೆ.ಹೋಲುತ್ತದೆ. ಶಿಲೆಗೆ ಪೆಟ್ಟಾಗಿರುವುದರಿಂದ ಅಕ್ಷರಗಳು ಅಲ್ಲಲ್ಲಿ ಹಾನಿಗೊಳಗಾಗಿದೆ. ಭಾಷಿಕವಾಗಿ ಕೆಲವು ದೋಷಗಳೂ ಶಿಲಾಶಾಸನದಲ್ಲಿ ಕಂಡುಬರುತ್ತವೆ.

ಹಲ್ಮಿಡಿ ಶಾಸನದ ಭಾಷಾಶೈಲಿ ಸಂಸ್ಕೃತ ಮಿತ್ರ ಕನ್ನಡ, ಕನ್ನಡದ ೨೫ ಪದಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಪ್ರಾರಂಭದ ಸಂಸ್ಕೃತ ಶ್ಲೋಕವನ್ನು ಹೊರತುಪಡಿಸಿ ಉಳಿದೆಲ್ಲ ಪಾಠ ಗದ್ಯದಲ್ಲಿದೆ, ಇಲ್ಲಿನ ಕನ್ನಡವನ್ನು ಪೂರ್ವದ ಹಳಗನ್ನಡವೆಂದು ಕರೆಯಲಾಗಿದೆ. ವ್ಯಾಕರಣದ ದೃಷ್ಟಿಯಿಂದ ಶಾಸನದಲ್ಲಿ ಕರ್ಮಣಿ ಪ್ರಯೋಗದ ಒಂದು ರೂಪವಿರುವುದು ಗಮನಾರ್ಹ.

ಕನ್ನಡ ಭಾಷೆಯ ಪ್ರಾಚೀನತೆಗೆ ಹಲ್ಮಿಡಿ ಶಾಸನ ಸಾಕ್ಷಿಯಾಗಿದೆ. ಈ ಶಾಸನ ಆಗಿನ ಕಾಲದ ಕನ್ನಡಭಾಷೆಯ ಪ್ರೌಢ ಸ್ವರೂಪದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ. ಈ ಶಾಸನದ ಪ್ರಾರ್ಥನಾ ಪದ್ಯ ಸಂಸ್ಕೃತದಲ್ಲಿದೆ. ಉಳಿದ ಭಾಗದಲ್ಲಿ ಹೇರಳವಾದ ಸಂಸ್ಕೃತ ಪದಗಳೂ, ಸಮಾಸಗಳೂ ತುಂಬಿವೆ. ಇದು ಆ ಕಾಲದ ಗ್ರಾಂಥಿಕ ಕನ್ನಡದ ಮೇಲೆ ಇದ್ದ ಸಂಸ್ಕೃತದ ಪ್ರಭಾವವನ್ನು ತೋರಿಸುತ್ತದೆ. ಈ ಶಾಸನದಲ್ಲಿರುವ, ಕನ್ನಡ ವ್ಯಾಕರಣದ ದೃಷ್ಟಿಯಿಂದ ಗಮನಾರ್ಹ ಎಂಬುದು ವಿದ್ವಾಂಸರ ಅಭಿಪ್ರಾಯ. .

ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ನಿಚ್ಚಳವಾಗಿದೆ. ಹಲ್ಮಿಡಿ ಶಾಸನಕ್ಕಿಂತ ಹಿಂದಿನ ಕೆಲವು ಶಾಸನಗಳಲ್ಲಿ ಕನ್ನಡದ ಕೆಲವು ಸ್ಥಳನಾಮಗಳು ಕಾಣಸಿಗುತ್ತವೆಯಾದರೂ ಕನ್ನಡದಲ್ಲಿ ಪ್ರೌಢಮ್ಯದ ಬಳಕೆಯಾದುದು ಈ ಶಾಸನದಿಂದಲೇ. ಇದಕ್ಕೂ ಹಿಂದೆ ಕನ್ನಡ ಸಾಹಿತ್ಯ ಸಾಕಷ್ಟು ಬೆಳೆದಿರಬೇಕೆಂದು ಅಭಿಪ್ರಾಯಪಡಲಾಗಿದೆ. ಶಾಸನದಲ್ಲಿ ಉಕ್ತವಾಗಿರುವ ಸಾದರ್, ಪತ್ತೊ, ಬಾಳೆ, ಕುರುಮ್ಮಿಡಿ ಮುಂತಾದ ವಿಶೇಷ ಪದಗಳ ಬಗ್ಗೆ ವಿದ್ವಾಂಸರು ಸಾಕಷ್ಟು ಚರ್ಚಿಸಿದ್ದಾರೆ.

ಕನ್ನಡಾಭಿಮಾನಿಗಳು ಖಂಡಿತವಾಗಿಯೂ ಹಲ್ಮಿಡಿ ಗ್ರಾಮಕ್ಕೆ ಭೇಟಿ ನೀಡಿ ಕನ್ನಡದ ಪ್ರಥಮ ಶಾಸನವನ್ನು ನೋಡಲೇಬೇಕು. ಈ ಮೂಲಕ ವಿನೂತನ ಅನುಭವವನ್ನು ಸಂದರ್ಶಕರು ಹೊಂದಬಹುದಾಗಿದೆ. ಹಲ್ಮಿಡಿ ಗ್ರಾಮದ ಸುತ್ತಲೂ ತೊರೆಯೊಂದು ಹರಿಯುತ್ತಿದ್ದು ಸಮೃದ್ಧವಾದ ಹಸಿರು ಭೂಮಿಯಲ್ಲಿ ವೈವಿಧ್ಯಮಯ ತೋಟಗಾರಿಕಾ ಬೆಳೆ ಬೆಳೆಯಲಾಗುತ್ತಿದೆ. ಹಲ್ಮಿಡಿ ಗ್ರಾಮಸ್ಥರ ಆದರಾತಿಥ್ಯವೂ ಸ್ಮರಣಾರ್ಹ. ಚಿತ್ರ - ಲೇಖನ - ಅನಿಲ್ ಎಚ್.ಟಿ.