*ವೀರಾಜಪೇಟೆ, ಅ. ೩೧: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಬಾಳುಗೋಡು ಗ್ರಾಮದಲ್ಲಿ ನಡೆಯಿತು.
ತಹಶೀಲ್ದಾರ್ ಯೋಗಾನಂದ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಾಳುಗೋಡುವಿನಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಈ ಸಭೆ ಏರ್ಪಡಿಸಲಾಗಿದ್ದು, ಗ್ರಾಮಸ್ಥರು ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳಿ, ಸಾಧ್ಯವಾಗದಿದ್ದರೇ ವೀರಾಜಪೇಟೆಯ ತಾಲೂಕು ಕಚೇರಿಗೆ ಬನ್ನಿ ನಿಮ್ಮ ಸಮಸ್ಯೆಳನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗುವುದೆಂದರು.
ಬಾಳುಗೋಡುವಿನಲ್ಲಿ ತಾತ್ಕಾಲಿಕ ಶೆಡ್ಗಳನ್ನು ಹಾಕಿಕೊಂಡಿರುವ ಜನರಿಗೆ ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿಯೇ ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡಲಾಗುವುದು. ಗ್ರಾಮಲೆಕ್ಕಿಗರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಅಲ್ಲಿನ ನೈಜವಾದ ನಿವಾಸಿಗಳ ಪಟ್ಟಿಯನ್ನು ತಯಾರಿಸಿ ಅದನ್ನು ಗ್ರಾಮಸಭೆಯ ಮುಂದಿರಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಲಾಯಿತು. ಅಲ್ಲದೇ ಮುಂದಿನ ದಿನಗಳಲ್ಲಿ ಅವರಿಗೆ ಅಲ್ಲಿಯೇ ಜಾಗ ಗುರುತಿಸಲು ನಿರ್ದೇಶನ ನೀಡಲಾಯಿತು.
ಬಿಟ್ಟಂಗಾಲದ ಆಟದ ಮೈದಾನದ ಬಗ್ಗೆ ಗ್ರಾಮಸ್ಥರು ಮಾತನಾಡಿ, ಆಟದ ಮೈದಾನವÀನ್ನು ಹಾಗೆಯೇ ಉಳಿಸಿಕೊಳ್ಳಲು ಬಯಸುವುದಾಗಿ ತಿಳಿಸಿದರು. ಇದಕ್ಕೆ ಉತ್ತರ ನೀಡಿದ ತಹಶೀಲ್ದಾರ್ ಶಾಲೆ ಇರುವ ಕಡೆ ಸರ್ಕಾರಿ ಜಾಗವಿದ್ದರೇ ಅದನ್ನು ಆಟದ ಮೈದಾನಕ್ಕೆ ಬಿಟ್ಟುಕೊಡುವ ವ್ಯವಸ್ಥೆ ಮಾಡಬಹುದು. ಎಲ್ಲೆಂದರಲ್ಲಿ ಆಟದ ಮೈದಾನಕ್ಕೆ ಜಾಗ ನೀಡಲಾಗುವುದಿಲ್ಲ. ಮೊದಲು ಮನೆ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡುತ್ತೇವೆ ನಂತರ ಮೈದಾನಕ್ಕೆ ಅವಕಾಶ ಎಂದರು.
ವಿ. ಬಾಡಗ ಗ್ರಾಮದಲ್ಲಿ ಸರಕಾರಿ ಜಾಗದಲ್ಲಿ ಅರಣ್ಯ ಇಲಾಖೆಯ ವಸತಿ ಗೃಹ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯ ಅನುಮತಿ ಪಡೆಯದ ಬಗ್ಗೆ ಪಂಚಾಯಿತಿ ಸದಸ್ಯ ಕಂಜಿತAಡ ಉತ್ತಪ್ಪ ತಹಶೀಲ್ದಾರ್ ಅವರ ಗಮನ ಸೆಳೆದರು. ಗ್ರಾಮಲೆಕ್ಕಿಗರ ಬಳಿ ಈ ಬಗ್ಗೆ ಮಾಹಿತಿ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಹಶೀಲ್ದಾರ್ ಹೇಳಿದರು.
ಪಳನಿಪ್ರಕಾಶ್ ಮಾತನಾಡಿ, ಈ ಸ್ಥಳದಲ್ಲಿ ೨೦೧೯ ರಲ್ಲಿ ಜಾಗ ಗುರುತಿಸಿ ಸರ್ವೆ ಮಾಡಿಸಿ ಎರಡು ಎಕರೆ ಎಂಬತ್ತೆöÊದು ಸೆಂಟ್ ಜಾಗದಲ್ಲಿ ನಿವೇಶನ ರಹಿತ ಕುಟುಂಬದ ಸದಸ್ಯರಿಗೆ ವಸತಿ ಸೌಕರ್ಯ ಒದಗಿಸಲು ಪ್ರತಿಭಟನೆ ನಡೆಸಿದ ಬಗ್ಗೆ ಮಾಹಿತಿ ನೀಡಿದರು. ಅದಕ್ಕೆ ತಹಶೀಲ್ದಾರ್ ಅವರು ಅಂದಿನಿAದ ಇಂದಿನವರೆಗೂ ಅದೇ ಸ್ಥಳದಲ್ಲಿ ಯಾರೆಲ್ಲ ವಾಸಿಸುತ್ತಿದ್ದಾರೆ ಅವರಿಗೆ ಮೊದಲ ಆದ್ಯತೆಯ ಮೇರೆಗೆ ನೀಡುತ್ತೇವೆ. ಈ ವಿಚಾರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇರುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಸೋಮಯ್ಯ ಅವರು ಪಿಂಚಣಿ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಕೆಲವು ಬಿಪಿಎಲ್ ಕಾರ್ಡುಗಳು ಎಪಿಎಲ್ ಆಗಿವೆ ಎಂದು ತಹಶೀಲ್ದಾರ್ ಗಮನಕ್ಕೆ ತಂದರು. ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧÀ್ಯಕೆÀ್ಷ ರಮ್ಯಾ, ಉಪಾಧ್ಯಕ್ಷೆ ಸರಸು, ಯೋಜನಾ ಅಧಿಕಾರಿ ಅಪ್ಪಣ್ಣ, ಪೊಲೀಸ್ ಇಲಾಖೆಯ ಶ್ರೀಧರ್, ರೆವಿನ್ಯೂ ಅಧಿಕಾರಿ ಹರೀಶ್, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.