ಮಡಿಕೇರಿ, ಅ. ೩೦: ಕೊಡುಗೈ ದಾನಿ ಎನಿಸಿದ್ದ, ಕಾಫಿ ಬೆಳೆಗಾರರಾಗಿದ್ದ ಮುದ್ದುರ ಮುದ್ದಪ್ಪ ತಮ್ಮಯ್ಯ (೮೭) ಅವರು ಶನಿವಾರ ಬೆಳಿಗ್ಗೆ ಮಡಿಕೇರಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.

ತಮ್ಮಯ್ಯ ಅವರು ಜಿಲ್ಲೆಯಲ್ಲಿ ಅನೇಕ ಉತ್ತಮ ಕಾರ್ಯಗಳಿಗೆ ಉದಾರ ಧನ ಸಹಾಯ ನೀಡಿ ಕೊಡುಗೈ ದಾನಿಯಾಗಿದ್ದರು. ಮಡಿಕೇರಿಯ ವಿಶ್ವ ಹಿಂದೂ ಪರಿಷತ್ ಆಡಳಿತದ ಅಶ್ವಿನಿ ಆಸ್ಪತ್ರೆಗೆ ಸುಸಜ್ಜಿತ ಶಸ್ತçಚಿಕಿತ್ಸಾ ಕೊಠಡಿಯನ್ನು ನಿರ್ಮಿಸಲು ತಮ್ಮಯ್ಯ ಅವರು ತಮ್ಮ ದಿವಂಗತ ಪತ್ನಿ ಪೂವಿ ಅವರ ಹೆಸರಿನಲ್ಲಿ ನೆರವು ನೀಡಿದ್ದರು. ಮಡಿಕೇರಿಯ ಶ್ರೀ ಕೋದಂಡರಾಮ ದೇವಾಲಯ ನಿರ್ಮಾಣ ಸೇರಿದಂತೆ ಅನೇಕ ಸಾರ್ವತ್ರಿಕ ಕಾರ್ಯಗಳಿಗೆ ಅವರು ನೆರವು ನೀಡಿದ್ದರು.

ರಾಣಿಪೇಟೆ ಕೊಡವಕೇರಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ದಿವಂಗತರ ಬಂಧುಮಿತ್ರರು ಸೇರಿ ಮೃತರ ಅಂತ್ಯಕ್ರಿಯೆಯನ್ನು ಕೊಡವ ರುದ್ರಭೂಮಿಯಲ್ಲಿ ಶನಿವಾರ ನೆರವೇರಿಸಿದರು.