ಮಡಿಕೇರಿ, ಅ.೩೧: ಅಸಂಘಟಿತ ಕಾರ್ಮಿಕ ವಲಯಗಳನ್ನು ಒಂದುಗೂಡಿಸಿ ಸಂಘ-ಸAಸ್ಥೆ ಸ್ಥಾಪನೆಗೆ ಸಹಕಾರ ನೀಡಬೇಕು ಮತ್ತು ಅಂತಹ ಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟಿçÃಯ ದತ್ತಾಂಶ (ಇ-ಶ್ರಮ್) ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.
ಸೇವಾ ಸಿಂಧು ಯೋಜನೆಯಡಿ ಸರ್ಕಾರಿ ಕಾರ್ಯಾಗಾರವನ್ನು ಅಸಂಘಟಿತ ಕಾರ್ಮಿಕರಿಗೆ ಅರಿವು ಮೂಡಿಸುವ ಸಲುವಾಗಿ ನಡೆಸಬೇಕು ಎಂದರು.
ಸಾಮಾನ್ಯ ಮಾಹಿತಿ ಕೇಂದ್ರಗಳಲ್ಲಿ (ಸಿಎಸ್‌ಸಿ) ಉಚಿತವಾಗಿ ಇ-ಶ್ರಮ್ ಪೋರ್ಟಲ್ ಮೂಲಕ ನೋಂದಣಿ ಯನ್ನು ಮಾಡಿಸಿಕೊಡಲಾಗುತ್ತದೆ. ಯಶಸ್ವಿ ನೋಂದಣಿ ನಂತರ ಫಲಾನುಭವಿಗಳು ಸ್ಥಳದಲ್ಲಿಯೇ ಗುರುತಿನ ಚೀಟಿಯನ್ನು ಪಡೆಯ ಬಹುದು. ಇದು ದೇಶದಾದ್ಯಂತ ಹಾಗೂ ಜೀವಿತಾವಧಿಯವರೆಗೆ ಮಾನ್ಯತೆ ಹೊಂದಿರುತ್ತದೆ ಅದರ ಸದುಪಯೋಗ ಎಲ್ಲರು ಪಡೆಯುವಂತಾಗಬೇಕು ಆ ಸಂಬAಧ ಇಲಾಖಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು.
ಸಾಮಾನ್ಯ ಮಾಹಿತಿ ಕೇಂದ್ರಗಳ (ಸಿಎಸ್‌ಸಿ) ಪಟ್ಟಿಯ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಬೇಕು. ಸರ್ಕಾರದ ಸವಲತ್ತುಗಳು ಅಸಂಘಟಿತ ವಲಯಗಳ ಕಾರ್ಮಿಕರಿಗೆ ದೊರಕುವಂತಾಗಬೇಕು ಎಂದರು.
ಇ-ಶ್ರಮ್ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು ಅಸಂಘಟಿತ ಕಾರ್ಮಿಕರಿಗೆ ಅರಿವು ಮೂಡಿಸುವ ಸಲುವಾಗಿ ನಡೆಸಬೇಕು ಎಂದರು.
ಸಾಮಾನ್ಯ ಮಾಹಿತಿ ಕೇಂದ್ರಗಳಲ್ಲಿ (ಸಿಎಸ್‌ಸಿ) ಉಚಿತವಾಗಿ ಇ-ಶ್ರಮ್ ಪೋರ್ಟಲ್ ಮೂಲಕ ನೋಂದಣಿ ಯನ್ನು ಮಾಡಿಸಿಕೊಡಲಾಗುತ್ತದೆ. ಯಶಸ್ವಿ ನೋಂದಣಿ ನಂತರ ಫಲಾನುಭವಿಗಳು ಸ್ಥಳದಲ್ಲಿಯೇ ಗುರುತಿನ ಚೀಟಿಯನ್ನು ಪಡೆಯ ಬಹುದು. ಇದು ದೇಶದಾದ್ಯಂತ ಹಾಗೂ ಜೀವಿತಾವಧಿಯವರೆಗೆ ಮಾನ್ಯತೆ ಹೊಂದಿರುತ್ತದೆ ಅದರ ಸದುಪಯೋಗ ಎಲ್ಲರು ಪಡೆಯುವಂತಾಗಬೇಕು ಆ ಸಂಬAಧ ಇಲಾಖಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು.
ಸಾಮಾನ್ಯ ಮಾಹಿತಿ ಕೇಂದ್ರಗಳ (ಸಿಎಸ್‌ಸಿ) ಪಟ್ಟಿಯ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಬೇಕು. ಸರ್ಕಾರದ ಸವಲತ್ತುಗಳು ಅಸಂಘಟಿತ ವಲಯಗಳ ಕಾರ್ಮಿಕರಿಗೆ ದೊರಕುವಂತಾಗಬೇಕು ಎಂದರು.
ಇ-ಶ್ರಮ್ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು ನೋಂದಾಯಿಸಿಕೊಳ್ಳಲು ೧೬ ರಿಂದ ೫೯ ವಯೋಮಾನದವರಾಗಿದ್ದು, ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು. ಅವಶ್ಯಕ ದಾಖಲೆಗಳಾದ ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕಾಗುತ್ತದೆ ಎಂ¨ ಮಾಹಿತಿ ನೀಡಿದರು.
ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ಎಂ.ಬಿ.ದೇವಯ್ಯ, ಜಿ.ಪಂ.ಯೋಜನಾ ನಿರ್ದೇಶಕರಾದ ಶೀಕಂಠಮೂರ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ, ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎA. ಯತ್ನಟ್ಟಿ ಇತರರು ಹಲವು ಮಾಹಿತಿ ನೀಡಿದರು. ಪ್ಲಾಂರ‍್ಸ್ ಅಸೋಷಿಯೇಷನ್‌ನ ಬೆಳ್ಳಿಯಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮುದ್ದಣ್ಣ, ಬಿಸಿಯೂಟ ಕಾರ್ಯ ನಿರ್ವಹಣಾಧಿಕಾರಿ ಹಸೀನ, ವಿಷ್ಣು, ಸಂಪತ್, ವೆಂಕಟೇಶ್, ಕಾರ್ಮಿಕ ವೃತ್ತಿಪರರು, ಕರಕುಶಲ ಕಾರ್ಮಿಕರು ಮತ್ತಿತರರು ಉಪಸ್ಥಿತರಿದ್ದರು.