ಕರ್ನಾಟಕ ರಾಜ್ಯದಲ್ಲಿ ಪ್ರತಿವರ್ಷ ನವೆಂಬರ್ ಒಂದರAದು ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಗುತ್ತಿದೆ. ೧೯೫೬ ರಲ್ಲಿ ಇದೇ ದಿನ ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ಕರ್ನಾಟಕ ರಾಜ್ಯವನ್ನು ರಚಿಸಲಾಯಿತು. ಇದರ ಸಂಕ್ಷಿಪ್ತ ಇತಿಹಾಸವನ್ನು ತಿಳಿಯುವುದು ಚಾರಿತ್ರಿಕವಾಗಿ ಕನ್ನಡ ಮಾತನಾಡುವ ಪ್ರದೇಶ ದಕ್ಷಿಣದ ಕಾವೇರಿಯಿಂದ ಗೋದಾವರಿ ಯವರೆಗೆ ಹರಡಿತ್ತೆಂದು ರಾಷ್ಟçಕೂಟರ ದೊರೆ ಅಮೋಘವರ್ಷ ನೃಪತುಂಗನ ಕವಿರಾಜ ಮಾರ್ಗ ಎಂಬ ಗ್ರಂಥದಿAದ ತಿಳಿದು ಬರುತ್ತದೆ. ಅನಂತರ ಯದುವಂಶದ ಮೈಸೂರಿನ ಒಡೆಯರ್ ವಂಶಸ್ಥರೂ ಸೇರಿದ್ದಾರೆ.
೧೭೬೬ ರಲ್ಲಿ ಟಿಪ್ಪುವಿನ ಮರಣಾನಂತರ ಹಿಂದಿನ ಮೈಸೂರು ರಾಜ್ಯವನ್ನು ವಿಭಜಿಸಿ ಹೈದರಾಬಾದಿನ ನಿಜಾಮರೂ, ಮಹಾರಾಷ್ಟçದ ಪೇಶ್ವೆಗಳೂ, ಬ್ರಿಟೀಷರೂ ಹಂಚಿಕೊAಡು ಉಳಿದ ಭಾಗವನ್ನು ಮೈಸೂರು ಒಡೆಯರ ವಂಶದವರಿಗೆ ಬಿಟ್ಟುಕೊಡಲಾಯಿತು.
ಅವರು ೧೯೪೭ ರವರೆಗೆ ಈ ಪ್ರದೇಶವನ್ನು ಆಳಿದರು. ಈಗಲೂ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಎಂದು ಕರೆಯುತ್ತಿರುವುದಕ್ಕೆ ಅಂದು ನಡೆದ ಚಾರಿತ್ರಿಕ ವಿಭಜನೇ ಕಾರಣವೆಂದು ಹೇಳಬಹುದು.
ರಾಜಕೀಯವಾಗಿ ಕರ್ನಾಟಕ ರಾಜ್ಯ ವಿಂಗಡಣೆಯಾಗಿದ್ದರೂ ಒಂದು ಭಾಷೆ ಒಂದು ರಾಜ್ಯವೆಂಬ ಭಾವನೆ ಅಳಿಯಲಿಲ್ಲ. ಅದು ಉಳಿದುಕೊಂಡೇ ಇತ್ತು. ಅದೇ ಭಾವನೆಯನ್ನು ಪ್ರೋತ್ಸಾಹಿಸಲು ಅನೇಕ ಚಳುವಳಿಗಳು ನಡೆದವು. ಆಲೂರು ವೆಂಕಟರಾಯರು ಹರಿದು ಹಂಚಿಹೋಗಿರುವ ಕನ್ನಡ ನಾಡಿನ ಏಕೀಕರಣಕ್ಕಾಗಿ ಅನೇಕ ಸಮ್ಮೇಳನಗಳನ್ನು ನಡೆಸಿ ಹೋರಾಟ ಪ್ರಾರಂಭಿಸಿದರು.
೧೯೨೪ ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಿಲ ಗೋಳ ನಾರಾಯಣರಾಯರು ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂಬ ಗೀತೆಯನ್ನು ಹಾಡಿ ಎಲ್ಲರ ಗಮನ ಸೆಳೆದರು. ಆದರೆ ಅನೇಕ ಬಗೆಯ ರಾಜಕೀಯ ಭಿನ್ನಮತದ ಕಾರಣಕ್ಕಾಗಿ ಕರ್ನಾಟಕದ ಏಕೀಕರಣ ಕಾರ್ಯ ತಡವಾಯಿತು.
ಭಾರತ ಸರಕಾರ ಕನ್ನಡ ರಾಜ್ಯ ರಚನೆಗಾಗಿ ಅವಶ್ಯಕ ಆಯೋಗಗಳನ್ನು ರಚಿಸಿತು. ಅವುಗಳಲ್ಲಿ ಮುಖ್ಯವಾಗಿ ಧರ್ ಆಯೋಗ, ವಾಂಛೂ ಸಮಿತಿ, ಫಜಲ್ ಆಲಿ ಸಮಿತಿಗಳನ್ನು ನೇಮಿಸಿ ಈ ವಿಷಯವಾಗಿ ವರದಿಯನ್ನು ತರಿಸಿಕೊಂಡಿತು. ಕೊನೆಗೆ ೧೯೫೬ ನವೆಂಬರ್ ಒಂದರAದು ಹಳೆಯ ಮೈಸೂರಿನ ಭಾಗದೊಂದಿಗೆ ಕನ್ನಡ ಮಾತನಾಡುವ ಮುಂಬೈ ಪ್ರದೇಶ, ಹೈದರಾಬಾದ್, ಮದ್ರಾಸ್ ಮತ್ತು ಕೇರಳ ರಾಜ್ಯಗಳ ಕನ್ನಡ ಮಾತನಾಡುವ ಜನರಿರುವ ಭೂಪ್ರದೇಶವನ್ನು ಒಟ್ಟುಗೂಡಿಸಿ ರಾಜ್ಯವನ್ನು ರಚಿಸಿತು. ಆದರೆ ಹೊಸದಾಗಿ ಸೇರಿದ ಪ್ರದೇಶದವರು ಮೈಸೂರು ಹೆಸರನ್ನು ಇಷ್ಟಪಡದ ಪರಿಣಾಮ ೧೯೭೩ ರ ನವೆಂಬರ್ ೧ ರಂದು ‘ಕರ್ನಾಟಕ’ ಎಂದು ಹೆಸರಿಡಲಾಯಿತು.
೨೦೦೬ ರಲ್ಲಿ ಕರ್ನಾಟಕ ರಾಜ್ಯ ರಚನೆಯಾಗಿ ೫೦ ವರ್ಷಗಳು ತುಂಬಿದ್ದರಿAದ ಸರಕಾರವು ೨೦೦೬ ರ ನವೆಂಬರ್ ೧ ರಿಂದ ೨೦೦೭ ರ ನವೆಂಬರ್ ೧ ರವರೆಗೆ ‘ಸುವರ್ಣ ಕರ್ನಾಟಕ’ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿತ್ತು. ಭೌಗೋಳಿಕವಾಗಿ ಕನ್ನಡ ಭಾಷೆಯ ಜನರೆಲ್ಲಾ ಒಂದುಗೂಡಿದರೂ ಭಾಷೆ ಮಾತ್ರ ಸಾಕಷ್ಟು ಅಭಿವೃದ್ಧಿ ಯಾಗಿಲ್ಲ. ಆರ್ಥಿಕವಾಗಿಯೂ ಸಮಾನತೆ ಕಂಡಿಲ್ಲ. ಇವೆರಡರ ಅಭಿವೃದ್ಧಿಯಾಗಿ ಜನರು ನೆಮ್ಮದಯಿಂದ, ಪರಸ್ಪರ ಸ್ನೇಹದಿಂದ ಬದುಬೇಕಾಗಿದೆ. ಇದರ ಜವಾಬ್ದಾರಿ ಇಂದಿನ ಯುವಜನರ ಕೈಯಲ್ಲಿದೆ. ನಮ್ಮ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಗೆ ಸಂಬAಧಿಸಿದ ಸಮಸ್ಯೆಗಳು ಬಗೆಹರಿಯದೆ ಉಳಿದಕೊಂಡಿದೆ.
ಕರ್ನಾಟಕ - ಮಹಾರಾಷ್ಟç ಗಡಿ ವಿವಾದ, ತಮಿಳುನಾಡಿ ನೊಂದಿಗೆ ಕಾವೇರಿ ಜಲ ವಿವಾದ ಹಾಗೆಯೇ ಮುಂದುವರಿಯುತ್ತಿದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವೆಲ್ಲ ಕೈಜೋಡಿಸೋಣ. ಈ ದಿಸೆಯಲ್ಲಿ ನಮ್ಮ ಯುವಪೀಳಿಗೆ ಕನ್ನಡವನ್ನು ಅಪ್ಪಿಕೊಂಡು, ಅದರ ಏಳಿಗೆಗೆ ಶ್ರಮಿಸುವ ಮನಸ್ಸು ಮಾಡಲಿ. ‘ಜೈ ಕರ್ನಾಟಕ’.
- ಸಣ್ಣುವಂಡ ಅಕ್ಕಮ್ಮ ಸನ್ನಿ, ಹಳ್ಳಿಗಟ್ಟು, ಪೊನ್ನಂಪೇಟೆ