ಮಡಿಕೇರಿ, ಅ.೩೧: ಕೋವಿಡ್ ಲಸಿಕಾ ಮೆಗಾ ಮೇಳವು ತಾ. ೨ ರಂದು ನಡೆಯಲಿದ್ದು, ಎರಡನೇ ವರಸೆಗೆ ಬಾಕಿ ಇರುವ ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಜಿಲ್ಲಾ ಮಟ್ಟದಿಂದ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಎರಡನೇ ವರಸೆಗೆ ಬಾಕಿ ಇರುವ ಫಲಾನುಭವಿಗಳ ಪಟ್ಟಿಯನ್ನು ಆಶಾ ಕಾರ್ಯಕರ್ತೆಯರಿಗೆ ಹಾಗೂ ಪ್ರಾಥಮಿಕ ಆರೋಗ್ಯ ಅಧಿಕಾರಿಗಳಿಗೆ (ಮಹಿಳಾ) ರವರಿಗೆ ನೀಡಿ ಲಸಿಕಾಕರಣಕ್ಕೆ ಸೋಷಿಯಲ್ ಮೊಬಲೈಜೇಷನ್ ಮಾಡಲಾಗಿದೆ ಎಂದರು.

ಒಂದನೇ ವರಸೆಗೆ ಬಾಕಿ ಇರುವ ಫಲಾನುಭವಿಗಳನ್ನು ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಗ್ರಾಮ ಪಂಚಾಯತ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಗುರುತಿಸಿ ಅವರನ್ನು ಲಸಿಕಾ ಮೇಳಕ್ಕೆ ಕರೆತರಲು ಅಗತ್ಯ ಕ್ರಮ ವಹಿಸಲಾಗಿದೆ.

(ಮೊದಲ ಪುಟದಿಂದ) ಈ ಸಂಬAಧ ಗ್ರಾಮ ಮಟ್ಟದಲ್ಲಿ ಲಸಿಕಾ ಟಾಸ್ಕ್ ಪೋರ್ಸ್ ಸಭೆ ನಡೆಯಲಿದೆ ಎಂದು ಡಿಎಚ್‌ಒ ಅವರು ತಿಳಿಸಿದರು. ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಗ್ರಾಮ ಪಂಚಾಯತ್‌ನ ಅಧ್ಯಕ್ಷರು ಹಾಗೂ ಸದಸ್ಯರ ಮುಖಾಂತರ ಎರಡನೇ ವರಸೆಗೆ ಬಾಕಿ ಇರುವ ಫಲಾನುಭವಿಗಳನ್ನು ಮನವೊಲಿಸಿ ಲಸಿಕಾಕರಣ ನಡೆಸಲಾಗುವುದು ಎಂದರು.

ಗ್ರಾಮ ಪಂಚಾಯತ್ ವತಿಯಿಂದ ಗ್ರಾಮಾಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಕಂದಾಯ ಅಧಿಕಾರಿಗಳ ಮುಖಾಂತರ ಧ್ವನಿ ವರ್ಧಕಗಳಿಂದ ಸಾರ್ವಜನಿಕರಿಗೆ ಅರಿವು ಹಾಗೂ ಪ್ರಚಾರಗೊಳಿಸಲು ಕ್ರಮವಹಿಸಲಾಗಿದೆ ಎಂದರು.

ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳು ಎರಡು ವರಸೆಯ ಲಸಿಕೆಯನ್ನು ಪಡೆಯಬೇಕಾಗಿದ್ದು, ಸಂಬAಧಿಸಿದ ಅಧಿಕಾರಿ/ ವ್ಯವಸ್ಥಾಪಕರು ತಮ್ಮ ಎಲ್ಲಾ ಸಿಬ್ಬಂದಿಗಳಿಗೆ ಎರಡು ವರಸೆಯ ಲಸಿಕೆಯನ್ನು ಪಡೆದಿರುವ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತಿದೆ. ಪಡೆಯದೇ ಇರುವ ಸಿಬ್ಬಂದಿಗಳು ಲಸಿಕಾ ಮೇಳದಲ್ಲಿ ಲಸಿಕೆ ಪಡೆಯಲು ಕ್ರಮ ವಹಿಸಲಾಗುವುದು ಎಂದರು.

ಲಸಿಕೆಯನ್ನು ನಿರಾಕರಿಸುವವರನ್ನು ಗುರುತಿಸಿ ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರ ಮುಖಾಂತರ ಮನವೊಲಿಸಲಾಗುವುದು. ಜಿಲ್ಲೆಗೆ ತೋಟ/ ಕಟ್ಟಡ ಕಾರ್ಮಿಕರ ರೂಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಆಗಮಿಸುತ್ತಿದ್ದು, ಇವರು ಲಸಿಕೆ ಪಡೆದುಕೊಳ್ಳದೇ ಇದ್ದಲ್ಲಿ, ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಸೂಚಿಸಲು ತೋಟ ಮಾಲೀಕರು ಹಾಗೂ ಗುತ್ತಿಗೆದಾರರಿಗೆ ತಿಳಿಸಲಾಗುವುದು ಎಂದು ಡಾ.ವೆಂಕಟೇಶ್ ಹೇಳಿದರು.

ಸಾರ್ವಜನಿಕ ಸಂಪರ್ಕಕ್ಕೆ ಬರುವ ಟ್ಯಾಕ್ಸಿ ಚಾಲಕರು, ವಾಹನ ಚಾಲಕರು/ ನಿರ್ವಾಹಕರು ಎಲ್ಲರೂ ಕೂಡ ಕಡ್ಡಾಯವಾಗಿ ಎರಡೂ ವರಸೆಯ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಕೋರಿದರು.

ಶಾಲಾ/ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ೧೮ ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಎರಡೂ ವರಸೆಯ ಲಸಿಕೆ ಪಡೆದಿರಬೇಕು. ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಶಾಲಾ-ಕಾಲೇಜುಗಳಿಗೆ ಕಳುಹಿಸುವ ವಿದ್ಯಾರ್ಥಿಗಳ ಪೋಷಕ ವರ್ಗದ ಕುಟುಂಬದ ಎಲ್ಲಾ ೧೮ ವರ್ಷ ಮೇಲ್ಪಟ್ಟ ಸದಸ್ಯರು ಕೂಡ ಎರಡು ವರಸೆಯ ಲಸಿಕೆ ಪಡೆದುಕೊಂಡಿರಬೇಕು ಎಂದರು.

ನ್ಯಾಯ ಬೆಲೆ ಅಂಗಡಿಗಳಿಗೆ ಬರುವ ಪಡಿತರ ಚೀಟಿದಾರರು ಯಾವುದೇ ಖರೀದಿಗೆ ಬಂದ ಸಂದರ್ಭ ಪಡಿತರ ಚೀಟಿಯಲ್ಲಿ ನೋಂದಾಯಿತರಾಗಿರುವ ೧೮ ವರ್ಷ ಮೇಲ್ಪಟ್ಟ ಎಲ್ಲಾ ಸದಸ್ಯರಿಗೂ ಲಸಿಕೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಕೋರಿದರು.

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ವಲಯದ ಎಲ್ಲಾ ಅಂಗಡಿ ಮುಂಗಟ್ಟುಗಳು, ಗ್ಯಾರೇಜುಗಳು, ಪೈನಾನ್ಸ್, ಕಾರ್ಖಾನೆಗಳು, ಏಜೆನ್ಸಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾಲೀಕರು ಸಹಿತ ಪ್ರತಿಯೊಬ್ಬ ಸಿಬ್ಬಂದಿ ಕೂಡ ಎರಡು ಲಸಿಕೆಯನ್ನು ಪಡೆದಿರುವ ದಾಖಲೆಯನ್ನು ಹೊಂದಿಕೊAಡಿರಬೇಕು ಎಂದರು. ಲಸಿಕಾ ಮೇಳ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸುವಂತೆ ಡಾ.ಆರ್ ವೆಂಕಟೇಶ್ ಮನವಿ ಮಾಡಿದರು.