ಗೋಣಿಕೊಪ್ಪ ವರದಿ, ಅ. ೩೦: ಗೋಣಿಕೊಪ್ಪ ರೋಟರಿ ಸಂಸ್ಥೆ ಅರಣ್ಯದಲ್ಲಿ ೧ ಲಕ್ಷಕ್ಕೂ ಅಧಿಕ ಬಿದಿರು ಬೀಜ ಬಿತ್ತನೆ ಮೂಲಕ ರಾಷ್ಟçಮಟ್ಟದ ಸಾಧನೆ ಮಾಡಿದೆ ಎಂದು ರೋಟರಿ ಜಿಲ್ಲಾ ಗರ‍್ನರ್ ಎ.ರವೀಂದ್ರ ಭಟ್ ಹೇಳಿದರು.

ಗೋಣಿಕೊಪ್ಪ ರೋಟರಿ ಸಂಸ್ಥೆ ವತಿಯಿಂದ ಕಕೂನ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಗರ‍್ನರ್ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಷ್ಟçಮಟ್ಟದಲ್ಲಿ ಬಿದಿರು ಬೀಜ ಬಿತ್ತನೆ ಕಾರ್ಯ ರೋಟರಿ ಮೂಲಕ ನಡೆಸಲಾಗಿದೆ. ಇದರಲ್ಲಿ ಗೋಣಿಕೊಪ್ಪ ಘಟಕ (೩೦೦ ಕೆ.ಜಿ.) ೧ ಲಕ್ಷಕ್ಕೂ ಹೆಚ್ಚು ಬೀಜ ಬಿತ್ತನೆ ಮಾಡಿ, ಹೆಚ್ಚು ಬೀಜ ಬಿತ್ತಿದ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.

ರೋಟರಿ ಫೌಂಡೇಶನ್ ಮೂಲಕ ವಿಶ್ವವ್ಯಾಪಿ ಸಂಕಷ್ಟದಲ್ಲಿರುವ ಜನರಿಗೆ ಮೂಲಸೌಕರ್ಯ, ಆರ್ಥಿಕ ನೆರವು ನಿರಂತರವಾಗಿ ನೀಡಲಾಗು ತ್ತಿದ್ದು ಇದಕ್ಕೆ ರೋಟರಿ ಸದಸ್ಯರು ಉತ್ತಮವಾಗಿಯೇ ಸ್ಪಂದಿಸಿದ್ದಾರೆ. ಭಾರತದ ರೋಟರಿ ಸದಸ್ಯರು ರೂ. ೩೮೦ ಕೋಟಿ ಅನುದಾನವನ್ನು ಪ್ರಧಾನ ಮಂತ್ರಿಗಳ ಖಾತೆಗೆ ನೆರವಿನ ಕೊಡುಗೆ ನೀಡಿದ್ದಾರೆ ಎಂದರು.

ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮಾತನಾಡಿ, ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಸಾವಿಗೀಡಾದವರಿಗೆ ಗೌರವಯುತ ಅಂತ್ಯಸAಸ್ಕಾರ ನಡೆಸಿದ ಪರಿಸ್ಥಿತಿ ಗಮನಿಸಿದ ಈ ವರ್ಷ ಸಂಸ್ಕಾರ್ ಹೆಸರಿನಲ್ಲಿ ಹಲವಾರು ಗ್ರಾಮೀಣ ಪ್ರದೇಶಗಳ ರುದ್ರಭೂಮಿಗೆ ಕಾಯಕಲ್ಪ ನೀಡಲು ಮುಂದಾಗಿದೆ. ಧರ್ಮಸ್ಥಳ ಗ್ರಾಮೀಭಿವೃದ್ಧಿ ಯೋಜನೆ ಸಹಯೋಗದಲ್ಲಿ ಅನುಷ್ಠಾನ ಗೊಳಿಸಲಾಗುವುದು, ಜಿಲ್ಲೆಯಲ್ಲಿ ೨೨ ಕಡೆ ಈಗಾಗಲೇ ರುದ್ರಭೂಮಿಗಳ ಕಾಯಕಲ್ಪ ಯೋಜನೆ ರೂಪಿಸಲಾಗಿದೆ ಎಂದರು.

ಸನ್ಮಾನ: ಗೋಣಿಕೊಪ್ಪ ಗ್ರಾ.ಪಂ. ಪೌರ ಕಾರ್ಮಿಕರಾದ ಗೌರಮ್ಮ, ಗಣೇಶ್ ಮತ್ತು ಸೆಸ್ಕ್ ಸಿಬ್ಬಂದಿ ಪ್ರವೀಣ್ ಸನ್ಮಾನಿಸ ಲಾಯಿತು. ಗೋಣಿಕೊಪ್ಪ ರೋಟರಿ ಅಧ್ಯಕ್ಷೆ ತೀತಮಾಡ ನೀತಾ ಕಾವೇರಮ್ಮ, ಕಾರ್ಯದರ್ಶಿ ಜೆ.ಕೆ. ಸುಭಾಷಿಣಿ, ವಲಯ ಕಾರ್ಯದರ್ಶಿ ಹೆಚ್.ಎಸ್. ವಸಂತ ಕುಮಾರ್, ವಲಯ ಸೇನಾನಿ ಕೆ.ಹೆಚ್. ಆದಿತ್ಯ ಇದ್ದರು.