ಬೆAಗಳೂರು, ಅ. ೩೦: ನಿನ್ನೆ ದಿನ ನಿಧನರಾದ ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್ ಅಂತ್ಯಕ್ರಿಯೆ ತಾ. ೩೧ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆ ಯೊಳಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಲಿದೆ. ಪುನಿತ್ ಅಂತಿಮ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ದಂಡು ಹರಿದು ಬಂದಿದ್ದು, ಜರ್ಮನಿಯಲ್ಲಿದ್ದ ಪುತ್ರಿ ಧೃತಿ ಇಂದು ಬೆಂಗಳೂರಿಗೆ ತಲುಪಿ ತಂದೆಯ ಅಂತಿಮ ದರ್ಶನ ಪಡೆದಳು.ಈ ನಡುವೆ ತೆಲುಗು ಮಗಾಸ್ಟಾರ್ ಚಿರಂಜೀವಿ, ತಮಿಳಿನ ಶರತ್‌ಕುಮಾರ್, ಜೂ.ಎನ್‌ಟಿಆರ್, ಪ್ರಭುದೇವ್ ಸೇರಿದಂತೆ ಚಲನ ಚಿತ್ರರಂಗದ ಸಾಕಷ್ಟು ಪ್ರಸಿದ್ಧ ನಟರು, ವಿವಿಧ ಮಠಾಧಿಪತಿಗಳು, ರಾಜಕೀಯ ಮುಖಂಡರುಗಳು, ಅಭಿಮಾನಿಗಳು ಪುನಿತ್ ಅವರು ನಡೆಸುತ್ತಿದ್ದ ವೃದ್ಧಾಶ್ರಮದ ಮಂದಿ, ಶಾಲೆಗಳ ಮಕ್ಕಳು ಪುನೀತ್ ರಾಜ್‌ಕುಮಾರ್ ಅವರ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟರು. ತಾ. ೩೧ ರಂದು (ಇಂದು) ಬೆಳಿಗ್ಗೆ ೬ ಗಂಟೆ ಪುನಿತ್ ರಾಜ್‌ಕುಮಾರ್ ಮೃತದೇಹದ ಅಂತಿಮಯಾತ್ರೆ ಆರಂಭವಾಗಲಿದ್ದು, ಅವರ ಸಹೋದರ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲಿದ್ದಾರೆ. ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.

ಕೊನೆಯ ಭೇಟಿ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲಿದ್ದಾರೆ. ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.

ಕೊನೆಯ ಭೇಟಿ ಕೊಡಗಿಗೆ ಪುನೀತ್ ರಾಜ್‌ಕುಮಾರ್ ಹಲವು ಬಾರಿ ಭೇಟಿ ನೀಡಿದ್ದಾರೆ. ಆದರೆ ಈ ಜನವರಿ ತಿಂಗಳಿನಲ್ಲಿ ಅವರು ಬಂದಿದ್ದು ಕುಡಿದು ವಾಹನ ಚಾಲಿಸುವುದು, ಸೀಟ್ ಬೆಲ್ಟ್ ಹಾಕದಿರುವುದು ಈ ಕುರಿತು ಪುನೀತ್ ಜಾಗೃತಿಗಾಗಿ ಸಂದೇಶ ನೀಡಿದ್ದರು.