ಕೂಡಿಗೆ, ಅ. ೨೯: ಅಂರ‍್ರಾಷ್ಟಿçÃಯ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್ ವತಿಯಿಂದ ಕೋವಿಡ್ ಹಿನ್ನೆಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾಂಶ ಗಳುಳ್ಳ ವಿದ್ಯಾಸೇತು ಎಂಬ ಪುಸ್ತಕ ವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿ ಗಳು ಇದರ ಸದುಪಯೋಗ ಪಡೆಸಿಕೊಳ್ಳಿ ಎಂದು ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಹೇಳಿದರು.

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ವತಿಯಿಂದ ಉಚಿತವಾಗಿ ವಿದ್ಯಾಸೇತು ಪುಸ್ತಕ ವಿತರಿಸಿ ಅವರು ಮಾತನಾಡಿದರು. ರೋಟರಿ ಸಂಸ್ಥೆಯ ನಿಯೋಜಿತ ಸಹಾಯಕ ರಾಜ್ಯಪಾಲ ಎಸ್.ಕೆ. ಸತೀಶ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆ ಸುಗಮವಾಗಿ ನಡೆಯದಿರುವ ಕಾರಣ ಶಿಕ್ಷಣ ತಜ್ಞರು ಮತ್ತು ಅನುಭವಿ ಶಿಕ್ಷಕರ ಬಳಗ ಮಕ್ಕಳ ಕಲಿಕೆಗೆ ವಿದ್ಯಾಸೇತು ಪುಸ್ತಕ ರಚಿಸಿದೆ. ಇದು ವಿದ್ಯಾರ್ಥಿಗಳ ಕಲಿಯುವಿಕೆಗೆ ಸಹಕಾರಿಯಾಗಿದೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ಶಿಕ್ಷಣ, ಆರೋಗ್ಯ ಸೇವೆಯೊಂದಿಗೆ ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಶ್ಲಾಘನೀಯವಾದುದು ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ರಿಚರ್ಡ್ ಡಿಸೋಜ, ಮಾಜಿ ಅಧ್ಯಕ್ಷ ಕೆ.ಎಂ. ಜೇಕಬ್, ಎನ್. ಮಹೇಶ್ ಕುಮಾರ್, ದೈಹಿಕ ಶಿಕ್ಷಕ ಡಿ. ರಮೇಶ್ ಇದ್ದರು. ಶಿಕ್ಷಕಿ ಅನ್ಸಿಲಾ ರೇಖಾ ಸ್ವಾಗತಿಸಿ, ಕೆ. ಗೋಪಾಲಕೃಷ್ಣ ವಂದಿಸಿದರು.