ಮಡಿಕೇರಿ, ಅ. ೨೯ : ನಗರದ ಮುಖ್ಯರಸ್ತೆಯ ಬದಿಯಲ್ಲಿ ಕಸ ಬಿಸಾಡಿದÀ ಹಿನ್ನೆಲೆ ಎರಡು ಮಳಿಗೆಗಳಿಗೆ ತಲಾ ರೂ. ೨೫ ಸಾವಿರ ದಂಡವನ್ನು ನಗರಸಭೆ ವಿಧಿಸಿದೆ.

ಸಾಮಾಜಿಕ ಹೋರಾರಗಾರ ಮಾದೇಟೀರ ತಿಮ್ಮಯ್ಯ ದೂರಿನ ಹಿನ್ನೆಲೆ ಸ್ಥಳಕ್ಕಾಗಮಿಸಿದ ನಗರಸಭೆ ಪೌರಾಯುಕ್ತ ರಾಮದಾಸ್ ದಂಡದ ಜೊತೆಗೆ ವ್ಯಾಪಾರ ಪರವಾನಗಿ ರದ್ದುಗೊಳಿಸಿ, ತಾತ್ಕಾಲಿಕವಾಗಿ ಮಳಿಗೆ ಮುಚ್ಚಲು ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.

ಎಫ್.ಎಂ.ಸಿ.ಕಾಲೇಜು ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಗರದ ಬಟ್ಟೆ ಮಳಿಗೆ ಹಾಗೂ ಗೊಬ್ಬರದ ಅಂಗಡಿಯವರು ಕಸ ಸುರಿದಿರುವುದು ಕಸದ ನಡುವೆ ಇದ್ದ ಬಿಲ್‌ಗಳಿಂದ ತಿಳಿದು ಬಂದಿದೆ. ನಂತರ ಅಂಗಡಿಯವರನ್ನು ಕರೆಸಿ ಎಚ್ಚರಿಕೆ ನೀಡಲಾಯಿತು. ಪೌರಾಯುಕ್ತ ಎಸ್.ವಿ. ರಾಮದಾಸ್ ಮಾತನಾಡಿ, ಮಡಿಕೇರಿಯನ್ನು ಕಸಮುಕ್ತ ಮಾಡಲು ನಗರಸಭೆ ಶ್ರಮಿಸುತ್ತಿದೆ. ಆದರೆ, ಸಾರ್ವಜನಿಕರು ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ತಲಾ ೨೫ ಸಾವಿರ ದಂಡದ ಜೊತೆಗೆ, ಪರವಾನಗಿ ರದ್ದು ಹಾಗೂ ತಾತ್ಕಾಲಿಕವಾಗಿ ಅಂಗಡಿ ಮುಚ್ಚಲು ಕ್ರಮವಹಿಸಲಾಗುವುದು, ಇದರಿಂದ ಇತರರು ಬುದ್ಧಿ ಕಲಿಯುತ್ತಾರೆ ಎಂದರು.

ಮಾದೇಟೀರ ತಿಮ್ಮಯ್ಯ ಮಾತನಾಡಿ, ಸ್ವಚ್ಛ ನಗರ ಮಾಡಬೇಕಾದವರು ಕಸ ಎಸೆದು ನಗರವನ್ನು ಅಶುಚಿತ್ವಗೊಳಿಸುತ್ತಿದ್ದಾರೆ. ಇದರ ವಿರುದ್ಧ ಕಠಿಣ ಕ್ರಮ ಅಗತ್ಯ. ನಾನು ಕಾರ್ ನಿಲುಗಡೆ ಮಾಡಲು ಬಂದಾಗ ಕಸ ಎಸೆದಿರುವುದು ಕಂಡುಬAತು. ತಕ್ಷಣ ಪೌರಾಯುಕ್ತರಿಗೆ ತಿಳಿಸಿದ್ದು, ಅವರು ಸಕರಾತ್ಮಕ ಸ್ಪಂದನ ನೀಡಿದ್ದಾರೆ ಎಂದು ಹೇಳಿದರು.