ಮಡಿಕೇರಿ, ಅ. ೨೯: ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪಡೆದುಕೊಂಡಿದೆ. ಸಮಗ್ರ ಆಡಳಿತ ನಿರ್ವಹಣೆ ವ್ಯವಹಾರ, ರೈತ ಸದಸ್ಯರಿಗೆ ಸ್ಪಂದನ ಮುಂತಾದ ವಿಚಾರಗಳನ್ನು ಸಂಪಾಜೆ ಸೊಸೈಟಿ ನಿರ್ವಹಿಸಿದ ಅಂಶಗಳನ್ನು ಆಧರಿಸಿ ಜಿಲ್ಲಾ ಪ್ರಶಸ್ತಿ ನೀಡಲಾಗಿದೆ.

ತಾ. ೧೨ ರಂದು ಮಡಿಕೇರಿ ಕೊಡವ ಸಮಾಜದಲ್ಲಿ ನಡೆದ ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೇಂದ್ರ ಬ್ಯಾಂಕಿನ ಹಿರಿಯ ನಿರ್ದೇಶಕ ಹೊಸೂರು ಸತೀಶ್ ಕುಮಾರ್, ಪಯಸ್ವಿನಿ ಸಹಕಾರ ಸಂಘದ ಅಧ್ಯಕ್ಷ ಯನ್.ಸಿ ಅನಂತ್ ಊರುಬೈಲು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಆನಂದ ಅವರುಗಳು ಪ್ರಶಸ್ತಿ ಸ್ವೀಕರಿಸಿದರು.