ಮಡಿಕೇರಿ, ಅ. ೨೯; ಹಿಂದೂ ಧರ್ಮದ ಮುಗ್ಧ ಜನರನ್ನು ಕ್ರೆöÊಸ್ತ ಧರ್ಮಕ್ಕೆ ಮತಾಂತರ ಮಾಡುವವರನ್ನು ತಡೆಯಲು ಹೋದವರ ವಿರುದ್ಧವೇ ದೂರು ದಾಖಲಿಸುವ ಕಾರ್ಯವಾಗುತ್ತಿದೆ, ಇದು ಸಲ್ಲದು, ಮತಾಂತರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು; ಧರ್ಮ ಅಂತಸತ್ವದಿAದ ಕೂಡಿರಬೇಕು, ಬಲವಂತದ ಮತಾಂತರದಿAದ ಏನೂ ಸಾಧಿಸಲಾಗದು, ಕೆಲವು ಕ್ರೆöÊಸ್ತ ಮೆಷಿನರಿಗಳು ಪರಿಶಿಷ್ಟರಿರುವ ಕೇರಿ, ಕಾಲೋನಿಗಳನ್ನು ಗುರಿಯಾಗಿರಿಸಿ ಕೊಂಡು ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ. ಮತಾಂತರ ಗೊಂಡವರ ಹೆಸರು ಮಾತ್ರ ಬದಲಾಗುತ್ತದೆಯೇ ಹೊರತು ಬೇರೇನೂ ಉಪಯೋಗ ವಾಗುವದಿಲ್ಲ, ಕೇವಲ ಪ್ರಾರ್ಥನೆಯಿಂದ ಕಷ್ಟ ಪರಿಹಾರ, ಕಾಯಿಲೆ ವಾಸಿಯಾಗುವದಾದರೆ ಆಸ್ಪತ್ರೆಗಳು, ವೈದ್ಯರು, ದುಡಿಮೆ ಯಾಕೆ ಬೇಕು ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಸಮಾಜ ಜಾಗೃತವಾಗಬೇಕು, ಇದರಲ್ಲಿ ಎಲ್ಲರೂ ಜವಬ್ದಾರರು ಎಂದರು.

ಸವಲತ್ತು ಸ್ಥಗಿತ

ಮತಾಂತರಗೊAಡವರಿಗೆ ಸರಕಾರ ದಿಂದ ಕೊಡ ಮಾಡುವ ಸವಲತ್ತು ಗಳನ್ನು ಸ್ಥಗಿತಗೊಳಿಸ ಲಾಗುವದು. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿ ಗಳು ಮತಾಂತರಗೊAಡವರ ಮನವೊಲಿಸಿ ಅವರಿಗೆ ಮನವರಿಕೆ ಮಾಡಿಕೊಡಬೇಕು, ಮತಾಂತರ ವಾಗುವದನ್ನು ತಡೆಯಬೇಕು, ಪೊಲೀಸರು ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ನದಿ ತಟ ಒತ್ತುವರಿ ತೆರವು

ಕಾವೇರಿ ನದಿ ತಟವನ್ನು ಅತಿಕ್ರಮಿಸಿಕೊಂಡಿರುವದನ್ನು ತೆರವು ಗೊಳಿಸಿ ಗಡಿ ಗುರುತಿಸಲಾಗುವದು. ಯಾರೇ ಆಗಿದ್ದರೂ ತೆರವು ಗೊಳಿಸಲಾಗುವದೆಂದರು. ಕುಶಾಲನಗರ ಬಳಿಯ ನಿಸರ್ಗಧಾಮದ ಸನಿಹ ಕೆಲವು ಖಾಸಗಿಯವರು ನದಿ ತಟದಲ್ಲೇ ಪ್ರವಾಸಿ ಚಟುವಟಿಕೆಗಳನ್ನು ನಡೆಸುತ್ತಿರುವದು ಗಮನಕ್ಕೆ ಬಂದಿದೆ, ಇವುಗಳನ್ನು ಕೂಡ ತೆರವು ಗೊಳಿಸಲಾಗುವದೆಂದು ಹೇಳಿದರು.

ತೈಲ ಬೆಲೆಯಿಂದ ಜನತೆಗೆ ಸೌಲಭ್ಯ

ತೈಲ ಬೆಲೆ ಏರಿಕೆ ಜನತೆಗೆ ಹೊರೆಯಾಗಿದೆ, ಜನರ ತಿಂಗಳ ಖರ್ಚಿನ ಮೇಲೆ ಪರಿಣಾಮ ಬೀರುತ್ತಿದೆ ಎಂಬದು ಸರಕಾರಕ್ಕೆ ಗೊತ್ತಿದೆ. ರಾಜ್ಯದ ೫೬ ಲಕ್ಷ ಸಣ್ಣ, ಅತಿಸಣ್ಣ ರೈತರಿಗೆ ಕೃಷಿ ಸಮ್ಮಾನ್ ಯೋಜನೆಯಡಿ ರೂ.೧೦ ಸಾವಿರ ನೀಡಲಾಗುತ್ತಿದೆ. ೯೪ ಕೋಟಿ ಉಚಿತ ಲಸಿಕೆ ನೀಡಲಾಗಿದೆ, ಕೋವಿಡ್ ಸಂದರ್ಭದಲ್ಲಿ ಸೇನೆ, ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ನಿಭಾಯಿಸಬೇಕಾಗಿದೆ. ಸರಕಾರದ ಜವಾಬ್ದಾರಿ ಇದೆ, ತೈಲ ದರದಲ್ಲಿ ಎಲ್ಲವನ್ನೂ ಸರಿದೂಗಿಸಬೇಕಿದೆ ಎಂದು ಹೇಳಿದರು. ಕೋವಿಡ್ ಚೇತರಿಕೆ ಬಳಿಕ ಎಲ್ಲವೂ ಒಂದು ಹಂತಕ್ಕೆ ಬರಲಿದೆ ಎಂದರು.