ಭಾಗಮಂಡಲ, ಅ. ೨೯ : ಇಡೀ ಜಗತ್ತಿಗೆ ಮಾರ್ಗದರ್ಶನವನ್ನು ಅಧ್ಯಾತ್ಮಿಕ ಸಂಸ್ಕೃತಿಯನ್ನು ಜೀವನದ ಮೌಲ್ಯವನ್ನು ಶತಶತಮಾನಗಳಿಂದ ಕೊಡುತ್ತಾ ಬಂದ ದೇಶ ನಮ್ಮದು ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಭಾಗಮಂಡಲದಲ್ಲಿ ರಾಮ ಮಂದಿರ ನಿರ್ಮಾಣ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಅನಾಚಾರ, ಜಾತಿಯ ಸಂಘರ್ಷ, ಅವೈಜ್ಞಾನಿಕ ಸಂಘಟನೆಯನ್ನು ತಡೆಯದೆ ಹೋದಲ್ಲಿ ಸಮಾಜ ಕೂಡ ನಾಶವಾಗಲಿದೆ. ಅಧ್ಯಾತ್ಮಿಕ ಸಂಸ್ಕೃತಿಯನ್ನು ಜೀವನದ ಮೌಲ್ಯವನ್ನು ನಮ್ಮದೇಶ ನಮಗೆ ಕೊಟ್ಟಿದೆ ಎಂದರು. ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಚಾಲಕ ಚಕ್ಕೇರ ಮನು ಕಾವೇರಪ್ಪ ಮಾತನಾಡಿ ರಾಷ್ಟಿçÃಯ ಶಿಕ್ಷಣವನ್ನು ಕೊಡದೆ ನಾವು ವಿದೇಶದಿಂದ ಎರವಲು ಪಡೆದ ಶಿಕ್ಷಣವನ್ನು ಪಡೆಯುತ್ತಿದ್ದೆವು. ಅದರಿಂದ ನಮ್ಮ ದೇಶ ದುರ್ಬಲವಾಗಿದೆ. ಕಾರಣ ಏನೆಂದರೆ ಧಾರ್ಮಿಕ ಮತ್ತು ರಾಷ್ಟಿçÃಯ ಶಿಕ್ಷಣದ ಕೊರತೆ ಇತ್ತು. ಆದರೆ ಇಂದು ಚಿತ್ರಣ ಬದಲಾಗಿದೆ. ಇಂದು ರಾಷ್ಟಿçÃಯ ಮತ್ತು ಧಾರ್ಮಿಕ ಶಿಕ್ಷಣ ಪಡೆಯುವುದರ ಮೂಲಕ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ ಎಂದರು ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ರವಿಕುಶಾಲಪ್ಪ ಮಾತನಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಆಗಬೇಕಾದರೆ ಮನಸ್ಸು ಮುಖ್ಯ ಆಗಿರಬೇಕು.

ಜನಾಂಗ ಜನಾಂಗದ ನಡುವೆ ಸಂಘರ್ಷ ಮಾಡುವುದು ಸಮಾಜದಲ್ಲಿ ಸರಿಯಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಅನುದಾನ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು ಎಂದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ ಸುಮಾರು ೧.೫ ಕೋಟಿ ರೂಪಾಯಿ ವೆಚ್ಚದಲ್ಲಿ ಟ್ರಸ್ಟ್ ವತಿಯಿಂದ ನೀಲಿ ನಕ್ಷೆ ತಯಾರಿಸಲಾಗಿದ್ದು, ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟಿ ನಂಜುAಡಪ್ಪ ೧೯೪೮ -೪೯ ರಲ್ಲಿ ನಮ್ಮ ಹಿರಿಯರು ಊರಿನ ಕ್ಷೇಮ ಮಾಡುವ ದೃಷ್ಟಿಯಿಂದ ಭಾಗಮಂಡಲದಲ್ಲಿ ರಾಮಮಂದಿರವನ್ನು ಈ ಹಿಂದೆ ನಿರ್ಮಿಸಲಾಗಿತ್ತು ಎಂದರು. ರಾಮಮಂದಿರ ದೇವಾಲಯ ಟ್ರಸ್ಟ್ ಅಧ್ಯಕ್ಷ ಸಿ.ಆರ್. ಜಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಮೀತ, ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ. ಹಿಂದೂ ಜಾಗರಣ ವೇದಿಕೆಯ ರಾಷ್ಟಿçÃಯ ಕಾರ್ಯದರ್ಶಿ ಪ್ರಶಾಂತ್ ಬಂದೊಡ್, ಸ್ಥಳ ದಾನಿಗಳಾದ ಸೋಮಶೇಖರ ನಾಯ್ಕ, ಪಿ.ಎಂ. ರಾಜೀವ್, ಗ್ರಾಮ ಪಂಚಾಯಿತಿ ಸದಸ್ಯ ಕಾಳನ ರವಿ, ಟ್ರಸ್ಟ್ ಕಾರ್ಯದರ್ಶಿ ಶಿವ, ಖಜಾಂಚಿ ನಿಡ್ಯಮಲೆ ಚಲನ್ ಇನ್ನಿತರರು ಉಪಸ್ಥಿತರಿದ್ದರು.

- ಸುನಿಲ್ ಕುಯ್ಯಮುಡಿ