ಕುಶಾಲನಗರ, ಅ. ೨೮: ಕುಶಾಲನಗರ ಪ.ಪಂ. ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆಯನ್ನು ಪಡೆಯಲು, ಪರವಾನಿಗೆ ನವೀಕರಿ ಸಲು ನವೆಂಬರ್ ೧೫ರ ತನಕ ವಿಶೇಷ ಅಭಿಯಾನ ನಡೆಸಲಾಗುವುದು ಎಂದು ಪ.ಪಂ. ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು ಕುಶಾಲನಗರ ಪಟ್ಟಣದ ರಥಬೀದಿಯಲ್ಲಿ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಾತ್ಕಾಲಿಕ ಕಚೇರಿಯನ್ನು ಪ್ರಾರಂಭಿಸಲಾಗಿದ್ದು, ಉದ್ದಿಮೆ ಪರವಾನಿಗೆ ಪಡೆಯಲು ಅಥವಾ ನವೀಕರಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ಉದ್ದಿಮೆ ಪರವಾನಿಗೆ ಪಡೆಯಲು ನಿಗದಿತ ನಮೂನೆಯಲ್ಲಿ ಅರ್ಜಿ ಉದ್ದಿಮೆಯ ಮಾಲೀಕರ ಗುರುತಿನ ದಾಖಲೆ, ಉದ್ದಿಮೆ ಸ್ಥಳದ ಗುತ್ತಿಗೆ ಕರಾರು ಪತ್ರ ಹಾಗೂ ಭಾವಚಿತ್ರ ಸಹಿತ ಕಚೇರಿಗೆ ಆಗಮಿಸಿ ದಾಖಲೆ ಪಡೆಯು ವುದು. ನವೀಕರಣ ಮಾಡಬೇಕಾದಲ್ಲಿ ಹಿಂದಿನ ಸಾಲಿನ ಉದ್ದಿಮೆ ಪರವಾನಿಗೆ ಪ್ರತಿಯನ್ನು ನೀಡಿ ದಾಖಲೆಗಳನ್ನು ಪಡೆಯಬಹುದು ಎಂದು ಕೃಷ್ಣಪ್ರಸಾದ್ ತಿಳಿಸಿದ್ದಾರೆ.