ಗೋಣಿಕೊಪ್ಪಲು, ಅ.೨೭: ಗೋಣಿಕೊಪ್ಪ ಪಟ್ಟಣವನ್ನು ಸ್ವಚ್ಛವಾಗಿಡಲು ನಗರವಾಸಿಗಳು ಪಣ ತೊಡಬೇಕೆಂದು ಚೇಂಬರ್ ಅಧ್ಯಕ್ಷ ಕಡೆಮಾಡ ಸುನಿಲ್ ಮಾದಪ್ಪ ತಿಳಿಸಿದರು.

ಗೋಣಿಕೊಪ್ಪಲುವಿನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಗರ ಶುಚಿತ್ವದ ಬಗ್ಗೆ ಕರೆಯಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಇತ್ತೀಚೆಗೆ ನಗರದ ಶುಚಿತ್ವದ ಹೊಣೆಯನ್ನು ಮಹಿಳಾ ಒಕ್ಕೂಟಕ್ಕೆ ವಹಿಸಿದ ನಂತರ ನಗರದ ಶುಚಿತ್ವ ಚೇತರಿಸಿಕೊಂಡಿದೆ. ಪಂಚಾಯಿತಿ ಹಾಗೂ ಸರ್ಕಾರದ ಆದೇಶದಂತೆ ಸಂಜೀವಿನಿ ಮಹಿಳಾ ಸ್ತಿçà ಶಕ್ತಿ ಒಕ್ಕೂಟ ಮುಂದೆ ಬಂದು ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ, ಗ್ರಾಮದ ಜನತೆ ಶುಚಿತ್ವಕ್ಕೆ ಆದ್ಯತೆ ನೀಡುವ ಮೂಲಕ ನಮ್ಮ ನಗರವನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕು,

ಕಸ ನಿರ್ವಹಣೆಗೆ ಸಂಬAಧಿಸಿದAತೆ ಸಾರ್ವಜನಿಕರು ಸಕಾಲದಲ್ಲಿ ಶುಲ್ಕ ಪಾವತಿಸಬೇಕು, ಈ ಬಗ್ಗೆ ಪಂಚಾಯಿತಿ ಕಠಿಣ ಕ್ರಮಕೈಗೊಳ್ಳಲು ಸಲಹೆ ನೀಡಿದರು. ಕಸ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಎಂ.ಮAಜುಳ ಮಾತನಾಡಿ ಕಸ ನಿರ್ವಹಣೆಯ ಜವಾಬ್ದಾರಿಯನ್ನು ಕಳೆದ ಎರಡು ತಿಂಗಳಿನಿAದ ನಿಭಾಯಿಸುತ್ತಿದ್ದೇವೆ. ಇದೀಗ ಕಸ ನಿರ್ವಹಣೆ ಹತೋಟಿಗೆ ಬಂದಿದೆ, ಇನ್ನೂ ಕೆಲವು ತಿಂಗಳಲ್ಲಿ ಸಂಪೂರ್ಣ ಹತೋಟಿ ಬರುವ ಸಾಧ್ಯತೆ ಇದೆ. ಈ ಬಗ್ಗೆ ಪಂಚಾಯಿತಿ ನಿಗದಿ ಪಡಿಸಿದ ಶುಲ್ಕವನ್ನು ನಿಗದಿತ ಸಮಯದಲ್ಲಿ ನಾಗರಿಕರು ನೀಡಿದರೆ ಕಸ ನಿರ್ವಹಣೆ ಸಾಧ್ಯ ಎಂದರು.

ಪAಚಾಯಿತಿ ಪಿಡಿಒ ತಿಮ್ಮಯ್ಯ ಮಾತನಾಡಿ, ಕಸ ನಿರ್ವಹಣೆ ಜವಾಬ್ದಾರಿಗೆ ಸಾಕಷ್ಟು ಹಣವನ್ನು ವಿನಿಯೋಗ ಮಾಡಲಾಗುತ್ತಿದೆ, ಹಂತ ಹಂತವಾಗಿ ಪರಿಸ್ಥಿತಿ ಹತೋಟಿಗೆ ಬರಲಿದೆ ಎಂದರು. ಪಂಚಾಯಿತಿ ಸದಸ್ಯರಾದ ಬಿ.ಎನ್.ಪ್ರಕಾಶ್ ಮಾತನಾಡಿ ನಗರದ ಶುಚಿತ್ವ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸರ್ವರು ಸಹಕರಿಸಬೇಕು ಎಂದರು.

ಚೇAಬರ್‌ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್ ಮಾತನಾಡಿ ಕಸ ನಿರ್ವಹಣೆ ವಿಚಾರದಲ್ಲಿ ಸಂಗ್ರಹಿಸುತ್ತಿರುವ ಶುಲ್ಕ ಸ್ವಲ್ಪ ಮಟ್ಟಿಗೆ ಅಧಿಕವಾಗಿದೆ ಈ ಬಗ್ಗೆ ಪಂಚಾಯಿತಿ ಆಡಳಿತ ಮಂಡಳಿ ಪುನರ್ ಪರಿಶೀಲನೆ ನಡೆಸಬೇಕೆಂದರು. ಸದಸ್ಯರಾದ ಅರವಿಂದ್ ಕುಟ್ಟಪ್ಪ ಮಾತನಾಡಿ ಕಸ ನಿರ್ವಹಣೆಗೆ ಹೆಚ್ಚಿನ ದರ ಪಡೆಯುವುದು ಪ್ರಸ್ತುತ ಸನ್ನಿವೇಶದಲ್ಲಿ ಸರಿಯಲ್ಲ ಎಂದರು.

ಚೇAಬರ್‌ನ ಪ್ರಮುಖರಾದ ರಾಜಶೇಕರ್, ಕಿರಿಯಮಾಡ ಅರುಣ್ ಪೂಣಚ್ಚ, ಅಜೀತ್ ಅಯ್ಯಪ್ಪ, ನೋಬನ್ ಸೇರಿದಂತೆ ಹಲವಾರು ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು. ಪಂಚಾಯಿತಿ ಅಧ್ಯಕ್ಷೆ ಚೈತ್ರ, ಚೇಂಬರ್ ಕಾರ್ಯದರ್ಶಿ ತೆಕ್ಕಡ ಕಾಶಿ, ಕೃಷ್ಣಪ್ಪ, ಮಾಚಿಮಾಡ ಅನಿತ, ಮುಂತಾದವರು ಉಪಸ್ಥಿತರಿದ್ದರು. ಪೊನ್ನಿಮಾಡ ಸುರೇಶ್ ಸ್ವಾಗತಿಸಿ, ಪ್ರಭಾಕರ್ ನೆಲ್ಲಿತ್ತಾಯ ವಂದಿಸಿದರು.