ಮಡಿಕೇರಿ, ಅ. ೨೭: ವೀರಾಜಪೇಟೆಯ ಕೊಡಗು ಮಾಜಿ ಸೈನಿಕರ ಸಹಕಾರ ಸಂಘ ವತಿಯಿಂದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ನವೆಂಬರ್ ೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಚೇಂದ್ರ‍್ರಿಮಾಡ ಕೆ. ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ‘ಅಮರ ಜವಾನ ಸ್ಮಾರಕ’ದಲ್ಲಿ ನಡೆಯಲಿದೆ. ಯೋಧರ ಸ್ಮಾರಕ ಸ್ತಂಭದ ಆವರಣದಲ್ಲಿ ಜಿಲ್ಲಾ ಸಶಸ್ತç ಪೊಲೀಸ್ ತುಕಡಿಯ ಗೌರವದೊಂದಿಗೆ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ, ದೇಶ ರಕ್ಷಣೆಗಾಗಿ ಹುತಾತ್ಮರಾದ ಯೋಧರಿಗೆ ಹಾಗೂ ದಿವಂಗತ ಮಾಜಿ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಕರ್ನಲ್ (ನಿವೃತ್ತ) ವಾಟೇರಿರ ಎ. ಸದಾಶಿವ, ವೀರಾಜಪೇಟೆ ಒಐಸಿ ಇಸಿಹೆಚ್‌ಎಸ್‌ನ ಕರ್ನಲ್ ಲಕ್ಷಿö್ಮÃನಾರಾಯಣ, ಶಾಸಕ ಕೆ.ಜಿ. ಬೋಪಯ್ಯ, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆರ್. ಯೋಗಾನಂದ, ವೀರಾಜಪೇಟೆ ಉಪ ಅಧೀಕ್ಷಕರಾದ ಜೈಕುಮಾರ್ ಪಿ.ಪಿ., ವೀರಾಜಪೇಟೆ ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕಿರಣ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಆರ್. ಸುಶ್ಮಿತಾ ಇತರರು ಪಾಲ್ಗೊಳ್ಳಲಿದ್ದಾರೆ.