ಮಡಿಕೇರಿ, ಅ. ೨೭: ಮೂರ್ನಾಡು ವಿದ್ಯಾಸಂಸ್ಥೆಯ ವಾರ್ಷಿಕ ಮಹಾಸಭೆ ತಾ. ೨೧ ರಂದು ನಡೆಯಿತು. ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಆಯ್ಕೆ ನಡೆಯಿತು.
ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಬಾಚೇಟ್ಟಿರ ಜಿ. ಮಾದಪ್ಪ, ಉಪಾಧ್ಯಕ್ಷರಾಗಿ ಪುದಿಯೋಕ್ಕಡ ಸಿ. ಸುಬ್ರಮಣಿ, ಗೌರವ ಕಾರ್ಯದರ್ಶಿಗಳಾಗಿ ಪೆಮ್ಮಡಿಯಂಡ ಎಂ. ಅಪ್ಪಣ್ಣ ಹಾಗೂ ಖಜಾಂಚಿಗಳಾಗಿ ಬಡುವಂಡ ಪಿ. ಸುಬ್ರಮಣಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ತೇಲಪಂಡ ಶೈಲಾ, ಈರಮಂಡ ಯು. ಸೋಮಣ್ಣ, ನಂದೇಟ್ಟಿರ ಎಂ.ರಾಜ ಮಾದಪ್ಪ, ಪಳಂಗAಡ ಬಿ. ವಿಠಲ್ ಪೂವಯ್ಯ, ಮೂಡೇರ ಎಂ. ಕಾಳಯ್ಯ ಅವರನ್ನು ನೇಮಕಗೊಳಿಸಲಾಯಿತು.