ಗೋಣಿಕೊಪ್ಪಲು, ಅ. ೨೭: ಕರ್ನಾಟಕ ಗ್ರಾಮ ಪಂಚಾಯಿತಿ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಗೋಣಿಕೊಪ್ಪಲುವಿನ ಪೌರಕಾರ್ಮಿಕರ ವಸತಿ ಗೃಹಕ್ಕೆ ಖುದ್ದು ಭೇಟಿ ನೀಡಿ ಪೌರ ಕಾರ್ಮಿಕರ ಸಮಸ್ಯೆಯನ್ನು ಆಲಿಸಿದರು. ನಂತರ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಪೌರಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಪಂಚಾಯಿತಿ ಅಧ್ಯಕ್ಷರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನ ಸೆಳೆದರು.
ಸರ್ಕಾರದ ಆದೇಶದಂತೆ ಪ್ರತಿ ಪೌರಕಾರ್ಮಿಕನಿಗೆ ಕನಿಷ್ಟ ವೇತನ ನೀಡುವುದು ಕಾನೂನಿನ ನಿಯಮ ವಾಗಿದೆ. ಆದರೆ ಪಂಚಾಯಿತಿಯಲ್ಲಿ ನಿಯಮವನ್ನು ಗಾಳಿಗೆ ತೂರಲಾಗಿದೆ. ಮುಂದಿನ ತಿಂಗಳಿನಿAದ ಕನಿಷ್ಟ ವೇತನ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಾರ್ಮಿಕರು ವಾಸಿಸುತ್ತಿರುವ ಪ್ರದೇಶವು ಜನರು ವಾಸಿಸಲು ಯೋಗ್ಯವಲ್ಲದ ಪರಿಸ್ಥಿತಿಯಲ್ಲಿದೆ. ಕೂಡಲೇ ಸುಸಜ್ಜಿತ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದು ಅಧ್ಯಕ್ಷರ ಹಾಗೂ ಸದಸ್ಯರ ಗಮನ ಸೆಳೆದರು. ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್.ಪ್ರಕಾಶ್ ಪೌರ ಕಾರ್ಮಿಕರಿಗೆ ಸುಸಜ್ಜಿತ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇವೆ. ಗೋಣಿಕೊಪ್ಪ ಪಂಚಾಯಿತಿಯಲ್ಲಿ ಅಗತ್ಯಕ್ಕೆ ಮೀರಿದ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರದಿಂದ ಕೆಲವು ಸಿಬ್ಬಂದಿಗಳಿಗಷ್ಟೆ ಅನುಮೋದನೆ ದೊರೆತಿದೆ. ತಾಂತ್ರಿಕ ಸಮಸ್ಯೆಯನ್ನು ಹಲವು ಸಮಯದಿಂದ ಎದುರಿಸುತ್ತಿದ್ದೇವೆ. ಬಹುತೇಕ ಇಲ್ಲಿನ ಪೌರಕಾರ್ಮಿಕರಿಗೆ ಪಂಚಾಯಿತಿ ಅನುದಾನದಿಂದ ವೇತನ ನೀಡ ಲಾಗುತ್ತಿದೆ. ಬಹಳಷ್ಟು ಅನುದಾನವು ಇವರ ವೇತನಕ್ಕಾಗಿ ಖರ್ಚಾಗುತ್ತಿದೆ. ಒತ್ತಡವಿದ್ದರೂ, ಹಣಕಾಸಿನ ತೊಂದರೆ ಇದ್ದರೂ ಯಾವುದೇ ಪೌರ ಕಾರ್ಮಿಕರನ್ನು ಕೆಲಸದಿಂದ ಇಲ್ಲಿಯ ತನಕ ವಜಾಗೊಳಿಸಿಲ್ಲ. ಇರುವ ವ್ಯವಸ್ಥೆಯಲ್ಲಿ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ ಎಂದರು.
ತಾ.೨೮ರAದು ನಡೆಯುವ ಗ್ರಾ.ಪಂ.ಆಡಳಿತ ಮಂಡಳಿಯ ಸಭೆಗೆ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರು ಆಗಮಿಸುವಂತೆಯೂ, ಆ ಸಭೆಯಲ್ಲಿ ಪೌರಕಾರ್ಮಿಕರ ಬಗ್ಗೆ ಸರ್ವ ಸದಸ್ಯರ ಸಮ್ಮುಖದಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳೋಣ ಎಂದು ಪಂಚಾಯಿತಿ ಅಧ್ಯಕ್ಷೆ ಚೈತ್ರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು. ಭೇಟಿಯ ಸಂದರ್ಭ ಕರ್ನಾಟಕ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರ ಸಂಘದ ಪದಾಧಿಕಾರಿ ಗಳಾದ ಮಂಚಯ್ಯ, ದಿನೇಶ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್, ರಾಮಕೃಷ್ಣ, ಪಿಡಿಒ ತಿಮ್ಮಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.