*ವೀರಾಜಪೇಟೆ, ಅ. ೨೮: ವೀರಾಜಪೇಟೆಯ ಐತಿಹಾಸಿಕ ಸಂತ ಅನ್ನಮ್ಮ ದೇವಾಲಯದಲ್ಲಿ ಕ್ರೆöÊಸ್ತ ಧರ್ಮದ ಸಂಸ್ಕಾರದ ದೃಢೀಕರಣ ವನ್ನು ಧರ್ಮ ಕೇಂದ್ರದ ಮಕ್ಕಳಿಗೆ ನೀಡಲಾಯಿತು. ಮೈಸೂರು ಧರ್ಮಾಧ್ಯಕ್ಷ ಬಿಷಪ್ ಡಾ. ಕೆ.ಎ. ವಿಲಿಯಂ ನೀಡಿದರು. ಆ ಬಳಿಕ ದಿವ್ಯ ಬಲಿಪೂಜೆಯನ್ನು ನೆರವೇರಿಸಿ ಜನರಿಗೆ ಆಶೀರ್ವಚನವನ್ನು ನೀಡಿದರು. ಸಂತ ಅನ್ನಮ್ಮ ದೇವಾಲ ಯದ ಪ್ರಧಾನ ಧರ್ಮಗುರುಗಳಾದ ರೆ.ಫಾ. ಮದಲೈಮುತ್ತು ಹಾಗೂ ಸಹಾಯಕ ಧರ್ಮಗುರುಗಳಾದ ರೆ.ಫಾ. ಲಿಯೊನಾರ್ಡ್ ಹಾಗೂ ಸಮೀಪದ ಪೊನ್ನಂಪೇಟೆ, ಮಡಿಕೇರಿ ದೇವಾಲಯಗಳ ಗುರುಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು.