ಮಡಿಕೇರಿ, ಅ. ೨೭: ಕೊಡಗು ಜಿಲ್ಲಾಡಳಿತದ ಸಹಯೋಗದಲ್ಲಿ, ಕೊಡಗು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾ. ೨೩ ರಂದು ಗಾಳಿಬೀಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮಾತನಾಡಿ, ಭಾರತದ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮಕ್ಕೂ ೩೩ ವರ್ಷಗಳ ಮುನ್ನ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಕೆಚ್ಚದೆಯ ವೀರ ಮಹಿಳೆಯಾಗಿದ್ದಾಳೆ. ಸ್ವಾತಂತ್ರಕ್ಕಾಗಿ ಹೋರಾಡಿದ ಕನ್ನಡ ನಾಡಿನ ಪ್ರಥಮ ಮಹಿಳೆಯಾಗಿ ಭಾರತದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ವೀರಮರಣವನ್ನಪ್ಪಿ ಭಾರತದ ಇತಿಹಾಸದಲ್ಲಿ ಅವಿಸ್ಮರ ಣೀಯವಾಗಿದ್ದಾರೆ. ನಮ್ಮ ಯುವ ಜನಾಂಗ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ರೀತಿ ದೇಶ ಪ್ರೇಮ ಬೆಳಸಿಕೊಂಡು ಶೌರ್ಯ ವಂತರಾಗಬೇಕೆAದು ಕರೆನೀಡಿದರು. ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಲಯದ ಪ್ರಾಂಶುಪಾಲ ಪಂಕಜಾಕ್ಷನ್ ಮಾತನಾಡಿ, ನಮ್ಮ ಯುವತಿಯರು ಚೆನ್ನಮ್ಮನ ರೀತಿ ಶೌರ್ಯ ಸಾಹಸಗಳನ್ನು ಬೆಳಸಿ ಕೊಂಡು, ಜೀವನದಲ್ಲಿ ವಿಶಿಷ್ಟವಾ ದದ್ದನ್ನು ಸಾಧಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮನ ಕುರಿತು ಉಪನ್ಯಾಸ ನೀಡಿದ ಮಾರುತಿ ದಾಸಣ್ಣವರ್ ಚೆÀನ್ನಮ್ಮನ ಕಥೆಯನ್ನು ಹೇಳುತ್ತಾ ಅವರÀ ಇತಿಹಾಸವನ್ನು ಸಿಬಿಎಸ್‌ಇ ಮತ್ತು ಎನ್‌ಸಿಆರ್‌ಟಿ ಪಠ್ಯ ಕ್ರಮದಲ್ಲೂ ಸೇರಿಸಿ, ದೇಶದ ಎಲ್ಲಾ ವಿದ್ಯಾರ್ಥಿಗಳು ಓದುವಂತಾಗಬೇಕೆAದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕಿ ದರ್ಶನ ಸ್ವಾಗತಿಸಿದರು. ಸಂಪಾಜೆ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಹೆಚ್.ಜಿ. ಕುಮಾರ್ ಕಾರ್ಯಕ್ರಮ ನಿರೂಪಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ ವಂದಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕಿನ ತಹಶೀಲ್ದಾರ್ ಮಹೇಶ್, ವೈದ್ಯಾಧಿಕಾರಿಗಳಾದ ಡಾ. ಸುರೇಶ್, ಡಾ. ಆನಂದ್, ಉಪ ಪ್ರಾಂಶುಪಾಲ ಸುಧಾಮಣಿ ಹಾಗೂ ಶಾಲೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ದವರು ನೆರೆದಿದ್ದರು. ಕಾರ್ಯ ಕ್ರಮದಲ್ಲಿ ಮೈಸೂರಿನ ರಾಘವೇಂದ್ರ ರಾವ್ ಅವರ ಗೀತಾ ಗಾಯನ ಎಲ್ಲರಿಗೂ ಮನರಂಜನೆ ನೀಡಿತು.