ಮಡಿಕೇರಿ, ಅ. ೨೮: ಒಂದು ಕಾಲದಲ್ಲಿ ಮಹಿಳೆಯೆಂದರೆ ಕೇವಲ ಅಡುಗೆ ಮನೆಗೆ ಮಾತ್ರ ಎಂಬAತೆ ಸೀಮಿತವಾಗಿದ್ದ ರೇಖೆಯನ್ನು ದಾಟಿ ಇದೀಗ ತೊಟ್ಟಿಲು ತೂಗುವ ಕೈ ದೇಶವನ್ನೂ ಕೂಡ ಆಳಬಲ್ಲುದು ಎಂಬದನ್ನು ನಿರೂಪಿಸಿದೆ. ಔದ್ಯೋಗಿಕ ಕ್ಷೇತ್ರದಲ್ಲೂ ಎಲ್ಲ ರೀತಿಯ ಕೆಲಸಕ್ಕೂ ಸೈ ಎಂದೆನಿಸಿಕೊAಡಿರುವ ಮಹಿಳೆ ಸಂಸಾರದ ನೊಗವನ್ನು ಎಳೆಯು ವಲ್ಲಿಯೂ ನಿಸ್ಸೀಮಳಾಗಿದ್ದಾಳೆ. ಕೆಲಸದೊಂದಿಗೆ ಕೆಲವರು ಸಮಾಜ ಸೇವೆ, ಇನ್ನಿತರ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿ ಕೊಂಡಿದ್ದು, ಆದರಿಲ್ಲಿ ಓರ್ವ ಮಹಿಳಾ ಉದ್ಯೋಗಿ ಸದ್ದಿಲ್ಲದೇ ಸೇವಾ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಗಾಳಿಬೀಡು ಸನಿಹದ ನವೋದಯ ವಿದ್ಯಾಲಯ ದಲ್ಲಿ ಉದ್ಯೋಗಿಯಾಗಿ ರುವ ಅನುರಾಧ ಎಂಬವರು ತಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸುವದು, ಹೀಗೆ, ಅನ್ಯಾಯ ಗಳನ್ನು ಕಂಡಾಗ ವಿರೋಧಿಸುತ್ತಾ ಸರಿದಾರಿಗೆ ತರುವದು, ರಸ್ತೆ ಸರಿಪಡಿ ಸುವದು, ಬಿಡುವಿನ ವೇಳೆಯಲ್ಲಿ ಕೆಲವಾರು ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಮಡಿಕೇರಿಯಿಂದ ಗಾಳಿಬೀಡು ಕಡೆಗೆ ತೆರಳುವ ರಸ್ತೆ ಕೂಟುಹೊಳೆ ಬಳಿಯಿಂದ ವಾಹನ ಸಂಚಾರಕ್ಕೆ ಹೋಗಲಿ ಮನುಷ್ಯರು ನಡೆದಾಡಲು ಕೂಡ ಕಷ್ಟಕರ ವಾದಂತಹ ಸ್ಥಿತಿಯಲ್ಲಿ ಹಾಳಾಗಿವೆ. ದೊಡ್ಡ ಹೊಂಡಗಳಾಗಿ ಕೆರೆಗಳಂತಾಗಿವೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ, ಪಾದಚಾರಿಗಳು, ಮಕ್ಕಳ ಸಂಕಷ್ಟವನ್ನ ಮನಗಂಡ ಅನುರಾಧ ತಾವೇ ಸ್ವತಃ ರಸ್ತೆಗಿಳಿದು ಮಣ್ಣು, ಕಲ್ಲುಗಳನ್ನು ಹಾಕಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದಾರೆ. ಆಡಳಿತ, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಯಾವದೇ ಪ್ರತಿಫಲಾಪೇಕ್ಷೆಯಿಲ್ಲದೆ ಈ ಮಹಿಳೆ ತನ್ನ ಸೇವೆ ಮಾಡಿದ್ದಾರೆ.

ಗುಂಡಿ ಮುಚ್ಚಿದ್ದಕ್ಕೆ ಕೆಲವರು ಮಣ್ಣು ಹಾಕಿದ್ದರಿಂದ ತೊಂದರೆ ಯಾಗಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಆದರೀಗ ಗುಂಡಿ ಮುಚ್ಚಿರುವದರಿಂದ ಕನಿಷ್ಟ ವಾಹನ ಓಡಾಡಲಾದರೂ ಅನುಕೂಲ ವಾಗಿದೆ, ಇನ್ನಾದರೂ ಸಂಬAಧಿಸಿ ದವರು ತಮ್ಮ ಕರ್ತವ್ಯವನ್ನು ಪೂರೈಸಲಿ ಎಂದು ಅನುರಾಧ ಹೇಳುತ್ತಾರೆ. ?ಸಂತೋಷ್