ಸಿದ್ದಾಪುರ, ಅ. ೨೭: ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೪೪.೨೬ ಲಕ್ಷ ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ. ೨೫ ಡಿವಿಡೆಂಟ್ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಪಾಲಚಂಡ ಅಚ್ಚಯ್ಯ ತಿಳಿಸಿದರು.
ನೆಲ್ಲಿಹುದಿಕೇರಿಯಲ್ಲಿರುವ ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಸಂಘದ ನೂತನ ಆಡಳಿತ ಮಂಡಳಿಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೧೧೭ ಕೋಟಿ ಅಧಿಕ ವ್ಯವಹಾರ ಗಳನ್ನು ಮಾಡಿದ್ದು, ರೂ. ೪೪.೨೦ ಲಕ್ಷ ಲಾಭ ಗಳಿಸಿದೆ ಎಂದರು. ಸಂಘವು ಈಗಾಗಲೇ ರೂ. ೧.೧೫ ಕೋಟಿ ವೆಚ್ಚದಲ್ಲಿ ಜಾಗಗಳನ್ನು ಹಾಗೂ ವಾಣಿಜ್ಯ ಸಂಕೀರ್ಣವನ್ನು ಖರೀದಿಸುತ್ತದೆಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಸಂಘ ಖರೀದಿಸಿದ ಜಾಗದಲ್ಲಿ ಪೆಟ್ರೋಲ್ ಬಂಕ್ ಹಾಗೂ ಇನ್ನಿತರ ವಾಣಿಜ್ಯ ವ್ಯವಹಾರಗಳನ್ನು ಮಾಡುವ ಗುರಿ ಹೊಂದಿದೆAದು ಅಚ್ಚಯ್ಯ ತಿಳಿಸಿದರು. ಗೊಬ್ಬರ, ಹತ್ಯಾರು ವಿಭಾಗದಲ್ಲಿ ಕೂಡ ನಿರೀಕ್ಷೆಗೆ ಮೀರಿ ಲಾಭಗಳಿಸಲಾಗಿದೆ. ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ವಸಂತ್‌ಕುಮಾರ್ ಮಾತನಾಡಿ, ಸಂಘಕ್ಕೆ ಸೇರಿದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಅವರಿಂದ ನಿರ್ಮಾಣ ಮಾಡಿದ ವಾಣಿಜ್ಯ ಸಂಕೀರ್ಣ ಸೇರಿದಂತೆ ಜಾಗವನ್ನು ಖರೀದಿಸಲಾಗಿದೆ. ಸಂಘಕ್ಕೆ ಆದಾಯ ಬರುವ ನಿಟ್ಟಿನಲ್ಲಿ ಹಲವಾರು ವ್ಯವಹಾರಗಳನ್ನು ಮಾಡುವ ಯೋಜನೆ ರೂಪಿಸಲಾಗಿದೆಂದರು. ಕಾರ್ಯ ಕ್ಷೇತ್ರವನ್ನು ವಿಸ್ತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷರಾದ ಟಿ.ಸಿ. ಅಶೋಕ್, ನಿರ್ದೇಶಕರು ಗಳಾದ ಕೆ.ಎಂ. ಪ್ರಸನ್ನ, ಟಿ.ಬಿ. ಗಣೇಶ್, ಟಿ.ಎ. ಪ್ರಸನ್ನ, ಡಿ.ಜಿ ಅಜಿತ್ ಕುಮಾರ್, ವಿ.ಕೆ. ಸುನಿಲ್ ಕುಮಾರ್, ಎಂ.ಎನ್. ಹರಿಣಿ, ಆರ್. ಸುಧರ್ಮ, ಎಂ. ಧರ್ಮಲಿಂಗ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎA. ರವಿ ಮುತ್ತಪ್ಪ ಹಾಜರಿದ್ದರು. ಎನ್.ಎಂ. ಮೇದಪ್ಪ. ಕೊಳಂಬೆ ಶಿವಪ್ಪ, ಕೊಂಗೇರ ಗಣಪತಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ನೆಲ್ಲಿಹುದಿಕೇರಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಯಿತು.