ಮಡಿಕೇರಿ, ಅ.೨ ೮; ಸೋಮವಾರಪೇಟೆ ತಾಲೂಕು ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಸುನಿಲ್ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಎಲ್ಲ ಆರೋಪಿಗಳನ್ನು ಬಂಧಿಸುವAತೆ ಒತ್ತಾಯಿಸಿರುವ ಹಿಂದೂ ಜಾಗರಣ ವೇದಿಕೆ ಪ್ರಮುಖರು, ಮುಂದಿನ ಒಂದು ವಾರದ ಒಳಗಾಗಿ ಬಂಧಿಸದಿ ದ್ದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂ.ಜಾ.ವೇ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ಸುನಿಲ್ ಅವರ ಮೇಲೆ ಗರಗಂದೂರಿನ ಮಲ್ಲಿಕಾರ್ಜುನ ನಗರದ ಮಸೀದಿ ಬಳಿ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದರು. ಈ ಪ್ರಕರಣ ನಡೆÀದು ೨೨ ದಿವಸ ಕಳೆದರೂ ಪ್ರಮುಖ ಆರೋಪಿಗಳನ್ನು ಇದುವರೆಗೂ ಬಂದಿಸಿಲ್ಲ. ೨೦ಕ್ಕೂ ಹೆಚ್ಚು ಮಂದಿ ದುಷ್ಕೃತ್ಯದಲ್ಲಿ ಭಾಗಿ ಯಾಗಿದ್ದು, ಈ ಬಗ್ಗೆ ಆರೋಪಿಗಳ ಹೆಸರು ಸಹಿತ ದೂರು ನೀಡಲಾಗಿ ಮೊಕದ್ದಮೆ ದಾಖಲಾಗಿದ್ದರೂ ಕೇವಲ ಮೂವರನ್ನು ನಾಮಕಾವಸ್ಥೆಗೆ ಬಂದಿಸಿ, ಉಳಿದವರನ್ನು ಇನ್ನೂ ಬಂದಿಸಿಲ್ಲ ಆರೋಪಿಗಳು ರಾಜಾರೋಷವಾಗಿ ಓಡಾಡಿ ಕೊಂಡಿದ್ದು, ಪ್ರಮುಖ ಆರೋಪಿ ವಿದೇಶಕ್ಕೆ ತೆರಳಿರುವ ಬಗ್ಗೆಯೂ ತಿಳಿದು ಬಂದಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕೆAದು ಆಗ್ರಹಿಸಿದರು.

ದೇಶದಲ್ಲಿ ಹಾಗೂ ದೇಶದ ಹೊರಗಡೆ ಹಿಂದೂ ಕಾರ್ಯಕರ್ತರ ಹತ್ಯೆ ಯತ್ನ ಪ್ರಕರಣಗಳು ಆಗಿಂದ್ದಾಗ್ಗೆ ನಡೆಯುತ್ತಿದೆ. ಈ ಭಯೋತ್ಪಾದನೆಯ ಬೇರು ಕೊಡಗಿನಲ್ಲಿಯೂ ಕಂಡು ಬರುತ್ತಿರುವದಕ್ಕೆ ಗರಗಂದೂರಿನ ಪ್ರಕರಣ ಸಾಕ್ಷಿಯಾಗಿದೆ. ಕೊಡಗಿಗೂ ಭಯೋತ್ಪಾದಕರ ಸಂಬAಧ ಇದೆ, ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜಿಲ್ಲೆಯಲ್ಲಿ ಅಶಾಂತಿ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ ಎಂದು ಹೇಳಿದರು.

ಪೊಲೀಸರಿಗೆ ಗೊತ್ತಿರುವದಿಲ್ಲ!

ಜಿಲ್ಲೆಯಲ್ಲಿ ಮತಾಂತರ ಹಾಗೂ ಗೋಹತ್ಯೆ, ಗೋಸಾಗಾಟ ಪ್ರಕರಣಗಳು ಆಗಿಂದ್ದಾಗೆ ನಡೆಯುತ್ತಿದ್ದರೂ ಈ ಬಗ್ಗೆ ಪೊಲೀಸರ ಅರಿವಿಗೆ ಬಾರದಿರುವದಕ್ಕೆ ಕಾರಣವೆನೆಂದು ಪ್ರಶ್ನಿಸಿದ ಅಜಿತ್, ಪ್ರತಿ ಹಂತದಲ್ಲೂ ಹಿಂದೂ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕವಷ್ಟೇ ಪ್ರಕರಣ ದಾಖಲಿಸುತ್ತಾರೆ. ಈ ರೀತಿಯ ಪರಿಸ್ಥಿತಿಗೆ ಅವಕಾಶ ಮಾಡಿಕೊಡ ಬಾರದು, ಗರಗಂದೂರಿನ ಪ್ರಕರಣಕ್ಕೆ ಸಂಬAಧಿಸಿದAತೆ ಒಂದು ವಾರದೊಳ ಗಡೆ ಎಲ್ಲ ಆರೋಪಿಗಳನ್ನು ಬಂದಿಸದಿ ದ್ದಲ್ಲಿ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು. ಆದರೂ ಕ್ರಮ ಜರುಗಿಸದಿದ್ದಲ್ಲಿ ಮುಂದೆ ಎದುರಾಗುವ ಪರಿಸ್ಥಿತಿಗೆ ಪೊಲೀಸ್ ಇಲಾಖೆಯೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಬಿ.ಮಹೇಶ್ ಮಾತನಾಡಿ, ಘಟನೆ ನಡೆದ ಸಂದರ್ಭ ಸ್ಥಳಕ್ಕೆ ತೆರಳಿದ್ದ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸದೆ ಮೂವರು ಮಂದಿ ಅಮಾಯಕರನ್ನು ಬಂಧಿಸಿದ್ದಾರೆ. ಘಟನೆ ಸ್ಥಳದಲ್ಲಿ ೨೫ ರಿಂದ ೩೦ ಮಂದಿ ಇದ್ದು, ಮಾರಕಾಸ್ತççಗಳಿದ್ದವು. ಹತ್ಯೆ ಮಾಡುವ ಉದ್ದೇಶದಿಂದಲೇ ಸಂಚು ರೂಪಿಸಿದ್ದರು. ಇದು ಮೊದಲ ಪ್ರಯತ್ನವಲ್ಲ, ಈ ಹಿಂದೆಯೂ ಯತ್ನ ನಡೆಸಲಾಗಿತ್ತು ಎಂದು ಹೇಳಿದರು. ಜಿಲ್ಲೆಯಲ್ಲಿ ಭಯೋತ್ಪಾದನೆಯ ತರಬೇತಿ ನೀಡುತ್ತಿರುವ ಬಗ್ಗೆ, ಹತ್ಯೆ ಯತ್ನದ ಆರೋಪಿಗಳು ಎಲ್ಲಿದ್ದಾರೆಂಬ ಬಗ್ಗೆ ಎಲ್ಲವೂ ಪೊಲೀಸ್ ಗುಪ್ತದಳದವರಿಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ, ಹಿಂದೂಗಳ ಬಗ್ಗೆ ಹೇಳುವವರು, ಕೇಳುವವರು ಯಾರೂ ಇಲ್ಲವೆಂಬ ಭಾವನೆ ಬೇಡ, ಮುಂದೆ ಎದುರಾಗುವ ಪರಿಣಾಮಗಳಿಗೆ ಪೊಲೀಸರೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಮಾತೃ ಸುರಕ್ಷಾ ಪ್ರಮುಖ್ ಶಾಂತೆಯAಡ ತಿಮ್ಮಯ್ಯ, ಮಡಿಕೇರಿ ನಗರ ಅಧ್ಯಕ್ಷ ಕೆ.ಟಿ. ಸಂದೀಪ್ ರೈ, ತಾಲೂಕು ಪ್ರಧಾನ ಕಾರ್ಯದರ್ಶಿ ಇದ್ದರು.